More

    ರಚಿತಾಗೆ ಕಾರ್ ಕೊಡಿಸಿದ ಕಿಟ್ಟಿ! 2024, ಏ. 1ರಂದು ‘ಸಂಜು ವೆಡ್ಸ್ ಗೀತಾ 2’ ಬಿಡುಗಡೆ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ನಾಗಶೇಖರ್ ನಿರ್ದೇಶಿಸುತ್ತಿರುವ ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟಿಸುತ್ತಿರುವ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಶೂಟಿಂಗ್ ಸದ್ಯ ಕನಕಪುರದ ಫಾರ್ಮ್‌ಹೌಸ್ ಒಂದರಲ್ಲಿ ಭರದಿಂದ ಸಾಗಿದೆ. 10ನೇ ವರ್ಷದ ಮದುವೆ ವಾರ್ಷಿಕೋತ್ಸವದ ಖುಷಿಯಲ್ಲಿ ಪತ್ನಿ ಗೀತಾಗೆ, ಪತಿ ಸಂಜು ಐಶಾರಾಮಿ ಕಾರ್ ಕೊಡಿಸುವ ದೃಶ್ಯದ ಶೂಟಿಂಗ್ ನಡೆಸಲಾಯಿತು.

    ಇದನ್ನೂ ಓದಿ : ಶೈನಿಂಗ್‌ ಯೆಲ್ಲೋ ಬಣ್ಣದ ಸ್ಯಾರಿಯಲ್ಲಿ ಮಿಂಚಿದ ನಟಿ ಕೀರ್ತಿ ಸುರೇಶ್​, ಫೋಟೋಸ್​​ ವೈರಲ್​..!

    ರಚಿತಾಗೆ ಕಾರ್ ಕೊಡಿಸಿದ ಕಿಟ್ಟಿ! 2024, ಏ. 1ರಂದು ‘ಸಂಜು ವೆಡ್ಸ್ ಗೀತಾ 2’ ಬಿಡುಗಡೆ

    ಚಿತ್ರದ ಬಗ್ಗೆ ನಾಗಶೇಖರ್, ‘‘ಸಂಜು ವೆಡ್ಸ್ ಗೀತಾ’ ಚಿತ್ರಕ್ಕೆ ದೊರೆತ ಯಶಸ್ಸೇ ಈ ಸೀಕ್ವಲ್‌ಗೆ ಕಾರಣ. ಅಚಾನಕ್ಕಾಗಿ ಕೆಲ ಬದಲಾವಣೆಗಳಾದ ಕಾರಣ ಶೂಟಿಂಗ್ ತಡವಾಗಿ ಆರಂಭಿಸಬೇಕಾಯಿತು. ಮೊದಲ ಹಂತದಲ್ಲಿ ಐದು ದಿನಗಳ ಚಿತ್ರೀಕರಣ ಮಾಡಿದ್ದೇವೆ. ಬಳಿಕ ಬ್ರೇಕ್ ಕೊಟ್ಟು ಡಿ. 2ರಿಂದ ಬೆಂಗಳೂರಿನಲ್ಲಿ ಹಾಗೂ ಡಿ. 9ರಿಂದ ಸ್ವಿಜರ್ಲೆಂಡಿನಲ್ಲಿ 12 ದಿನಗಳ ಶೂಟಿಂಗ್ ಪ್ಲ್ಯಾನ್ ಮಾಡಿದ್ದೇವೆ. ನಂತರ ಮುಂಬೈ, ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯಲಿದೆ. 2011ರ ಏ. 1ರಂದು ಮೊದಲ ಭಾಗ ರಿಲೀಸ್ ಮಾಡಿದ್ದೆವು. ಹೀಗಾಗಿ 2024ರ ಏ. 1ರಂದು ಸೀಕ್ವಲ್ ಬಿಡುಗಡೆ ಮಾಡುವ ಆಲೋಚನೆಯಿದೆ’ ಎಂದು ಮಾಹಿತಿ ನೀಡಿದರು.

    ಇದನ್ನೂ ಓದಿ : ಶ್ರುತಿ ಹಾಸನ್ ಬೆನ್ನ ಮೇಲೆ ಟ್ಯಾಟೂ…ಅರ್ಥವೇನು? ಎಂದು ಕೇಳಿದ ಫ್ಯಾನ್ಸ್​

    ರಚಿತಾಗೆ ಕಾರ್ ಕೊಡಿಸಿದ ಕಿಟ್ಟಿ! 2024, ಏ. 1ರಂದು ‘ಸಂಜು ವೆಡ್ಸ್ ಗೀತಾ 2’ ಬಿಡುಗಡೆ

    ನಾಯಕ ಶ್ರೀನಗರ ಕಿಟ್ಟಿ, ‘ಕಥೆ ಮುದ್ದಾಗಿದೆ. ನಾವೂ ಅಷ್ಟೇ ಪ್ರೀತಿಯಿಂದ ಈ ಸೀಕ್ವಲ್ ಮಾಡುತ್ತಿದ್ದೇವೆ’ ಎಂದರು. ನಾಯಕಿ ರಚಿತಾ ರಾಮ್, ‘ಗೀತಾ, ಹಲವು ಶೇಡ್‌ಗಳಿರುವ ಪಾತ್ರ. ಕಥೆ ಕೇಳಿದಾಗ ತುಂಬ ಇಷ್ಟವಾಯಿತು. ಚಿತ್ರದಲ್ಲಿ ಒಳ್ಳೆ ಎನರ್ಜಿಯಿದೆ’ ಎಂದು ಹೇಳಿಕೊಂಡರು. ಈ ಸೀಕ್ವಲ್‌ನಲ್ಲಿ ಐದು ಹಾಡುಗಳಿದ್ದು ಶ್ರೀಧರ್ ವಿ. ಸಂಭ್ರಮ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿರಲಿದೆ.

    ರಚಿತಾಗೆ ಕಾರ್ ಕೊಡಿಸಿದ ಕಿಟ್ಟಿ! 2024, ಏ. 1ರಂದು ‘ಸಂಜು ವೆಡ್ಸ್ ಗೀತಾ 2’ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts