ಕಟ್ಟಿಕೊಂಡ ಹೆಂಡತಿಯನ್ನೇ ಮಾರಾಟ ಮಾಡಿದ ಪತಿ; ಧಾರ್ಮಿಕ ಮತಾಂತರ ಆರೋಪ

UP Police
Published on

ಲಖನೌ: ಫೇಸ್​ಬುಕ್​ನಲ್ಲಿ ಪರಿಚಯವಾದ ಅಪ್ರಾಪ್ತ ವಯಸ್ಕಳನ್ನು ಮದುವೆಯಾಗುವುದಾಗಿ ಪುಸಲಾಯಿಸಿ ವ್ಯಕ್ತಿಯೋರ್ವ ಆಕೆಯನ್ನು ಮತಾಂತರಗೊಳಿಸಿ ಮೂರು ಮಂದಿಗೆ ಮಾರಾಟ ಮಾಡಿರುವ ಘಟನೆ ಉತ್ತರಪ್ರದೇಶದ ಮೊರಾದಬಾದ್​ ಜಿಲ್ಲೆಯ ಅಮ್ರೋಹಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಮಹಿಳೆ(30) ನೀಡಿದ ದೂರಿನ ಮೇರೆಗೆ ಪೊಲೀಸರು 38 ವರ್ಷದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಧಾರ್ಮಿಕ ಮತಾಂತರ ನಿಷೇದ ಕಾಯ್ದೆಯಡಿ FIR ದಾಖಲಿಸಿಕೊಂಡಿದ್ದಾರೆ.

ಮೂವರಿಗೆ ಮಾರಾಟ

30 ವರ್ಷದ ಸಂತ್ರಸ್ತ ಮಹಿಳೆ 14 ವರ್ಷಗಳ ಹಿಂದೆ ತನಗೆ ಫೇಸ್​ಬುಕ್​ ಮೂಲಕ ವ್ಯಕ್ತಿಯೋರ್ವ ಪರಿಚಯವಾಗಿದ್ದಾನೆ. ದಿನ ಕಳೆದಂತೆ ಇಬ್ಬರ ನಡುವ ಆತ್ಮೀಯತೆ ಬೆಳೆದಿದ್ದು, ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಅದರಂತೆ 16 ವರ್ಷದ ಬಾಲಕಿ ಘಾಜಿಪುರ್​ ಜಿಲ್ಲೆಯ ನಿವಾಸಿ 2009ರಲ್ಲಿ ಮನೆ ತೊರೆದಿದ್ದು, ಆರೋಪಿಯೊಂದಿಗೆ ಓಡಿ ಹೋಗಿದ್ದಾಳೆ.

harassment

ಬಳಿಕ ಆರೋಪಿಯೂ ತನ್ನನ್ನು ಮದುವೆಯಾಗಿದ್ದು, ಬಲವಂತವಾಗಿ ಮತಾಂತರ ಮಾಡಿದ್ದಾನೆ. ಇದಾದ ಕೆಲ ದಿನಗಳ ಬಳಿಕ ಮೂರು ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾನೆ. ಸಂತ್ರಸ್ತೆ ಆರೋಪಿಯಿಂದ ತಪ್ಪಿಸಿಕೊಂಡಿದ್ದು, ಮೊದಲಿಗೆ ಸ್ಥಳೀಯ ಬಜರಂಗದಳ ಕಾರ್ಯಕರ್ತರನ್ನು ಭೇಟಿ ಮಾಡಿ ನಡೆದ ಘಟನೆ ಕುರಿತು ವಿವರಿಸಿದ್ದಾಳೆ.

ಬಜರಂಗದಳ ಕಾರ್ಯಕರ್ತರ ಸಹಾಯದಿಂದ ಆಕೆ ಅಮ್ರೋಹಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರ ವಿರುದ್ಧ ಉತ್ತರಪ್ರದೇಶ ಧಾರ್ಮಿ ಮತಾಂತರ ಕಾಯ್ದೆ, 376, 506, 507, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net