VIDEO| ನೀರಿನೊಳಗೆ ಕೈಹಾಕಿ ಶಾರ್ಕ್​ಗೆ ಆಹಾರವಾದ!

Shark Attack
Published on

ಫ್ಲಾರಿಡ: ಸ್ನೇಹಿತನ ಎಚ್ಚರಿಕೆಯ ನಡುವೆಯೂ ವ್ಯಕ್ತಿಯೋರ್ವ ಶಾರ್ಕ್​ಗಳಿರುವ ನದಿ ಒಳಗೆ ತನ್ನ ಕೈಗಳನ್ನು ಹಾಕಿ ಜೀವಕ್ಕೆ ಕುತ್ತು ತಂದುಕೊಂಡಿರುವ ಘಟನೆ ಅಮೆರಿಕಾದ ಫ್ಲಾರಿಡಾದಲ್ಲಿ ನಡೆದಿದೆ.

ಘಟನೆಯೂ ನ್ಯಾಷನಲ್​ ಎವರ್​ಗ್ಲೇಡ್ಸ್​ ಪಾರ್ಕಿನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?

ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೋರ್ವ ತನ್ನ ಸ್ನೇಹಿತನ ಜೊತೆ ಮೀನು ಹಿಡಿಯಲೆಂದು ನ್ಯಾಷನಲ್​ ಎವರ್​ಗ್ಲೇಡ್ಸ್​ ಪಾರ್ಕಿಗೆ ತೆರಳಿದ್ಧಾನೆ. ಈ ವೇಳೆ ತನ್ನ ಸ್ನೇಹಿತ ನೀರಿನೊಳಗೆ ಕೈ ಹಾಕದಂತೆ ಎಚ್ಚರಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಇದರ ಹೊರತ್ತಾಗಿಯೂ ವ್ಯಕ್ತಿಯೂ ನೀರಿನೊಳಗೆ ಕೈ ಹಾಕಿದಾಗ ದಿಢೀರನೆ ಶಾರ್ಕ್​ ಒಂದು ಬಂದು ಆತನನ್ನು ಎಳೆದೊಯ್ದಿದ್ದು, ಆತ ನೋವಿನಿಂದ ಚೀರುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಶಾರ್ಕ್​ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಏರ್​ಲಿಫ್ಟ್​ ಮಾಡಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ವ್ಯಕ್ತಿಯ ಕಾರ್ಯಕ್ಕೆ ಕಿಡಿಕಾರಿದ್ದು, ಎಚ್ಚರಿಕೆಯ ಹೊರತ್ತಾಗಿಯೂ ಈ ರೀತಿ ಮಾಡುವುದು ಮೂರ್ಖತನದ ಪರಮಾವಧಿ ಎಂದು ಹೇಳಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net