

ಅಯೋಧ್ಯೆ: ಇತ್ತೀಚಿನ ದಿನಗಳಲ್ಲಿ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಸಿದ್ದಿ ಪಡೆಯುವ ಗೀಳಿಗೆ ಬಿದ್ದಿದ್ದು, ವಿಭಿನ್ನ, ವಿಚಿತ್ರ ಪ್ರಯತ್ನಗಳನ್ನು ಮಾಡುತ್ತ ಸಂಕಷ್ಟಕ್ಕೆ ಸಿಲುಕಿರುವವರನ್ನು ನಾವು ನೋಡಿದ್ದೇವೆ.
ಇದೀಗ ಯುವತಿ ಒಬ್ಬಳು ಅಯೋಧ್ಯೆಯ ಸರಯೂ ನದಿಯಲ್ಲಿ ರೀಲ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕಣ್ಣು ಕೆಂಪಗಾಗಿಸಿದೆ.
ಇದನ್ನೂ ಓದಿ: ಸ್ಕೂಟರ್ಗೆ ಗುದ್ದಿದ ಲಾರಿ; ಇಬ್ಬರು ಯುವಕರು ಮೃತ್ಯು
ಯುವತಿ ನದಿಯಲ್ಲಿ ನಿಂತು ರೀಲ್ಸ್ ಮಾಡಿರುವ ವಿಡಿಯೋವನ್ನು ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ಧಾರೆ. ಪ್ರತಿನಿತ್ಯ ಅಯೋಧ್ಯೆಗೆ ಸಾವಿರಾರು ಮಂದಿ ಭೇಟಿ ನೀಡಿ ಶ್ರೀರಾಮನ ಪಾದದ ಮೇಲೆ ಹರಿಯುವ ಸರಯೂ ನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಾರೆ.
ಇಂತಹ ಧಾರ್ಮಿಕ ಕ್ಷೇತ್ರಗಳಲ್ಲಿ ಈ ರೀತಿ ರೀಲ್ಸ್ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ದಯವಿಟ್ಟು ಕಠಿಣ ಕ್ರಮವನ್ನು ಜರುಗಿಸಿ ಎಂದು ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಅಯೋಧ್ಯೆ ಪೊಲೀಸರು ರೀಲ್ಸ್ ಮಾಡಿದ ಯುವತಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.