More

    ಐವರು ಕಳ್ಳರನ್ನು ಹಿಡಿಯಲು ಹೋಗಿ 1,500ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು!

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪ್ರಗತಿ ಮೈದಾನದ ಬಳಿ ಹಾಡಹಗಲೇ ನಡೆದಿದ್ದ, ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 1,500ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

    ಪೊಲೀಸರು ಪ್ರಕರಣದ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಉಳಿದವರನ್ನು ವಿಚಾರಣೆ ಬಳಿಕ ಬಿಟ್ಟು ಕಳುಹಿಸಿದ್ಧಾರೆ. ದೆಹಲಿ ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.

    ಇದನ್ನೂ ಓದಿ: VIDEO| ಲೇಡಿಸ್​ ಪಿಜಿ ಮುಂಭಾಗ ವ್ಯಕ್ತಿಯ ಅಸಭ್ಯ ವರ್ತನೆ; ಕಠಿಣ ಕ್ರಮಕ್ಕೆ ಆಗ್ರಹಿಸಿದ ಮಹಿಳಾ ಆಯೋಗ

    ಸಿಎಂ-ಲೆಫ್ಟಿನೆಂಟ್​ ಗವರ್ನರ್​ ಜಟಾಪಟಿ

    ದೆಹಲಿ-ಸರೈ ಕಲೇ ಖಾನ್​- ನೊಯ್ಡಾ ಸಂಪರ್ಕಿಸುವ ಸುರಂಗದ ನಂತರ ಸಿಗುವ ಪ್ರಗತಿ ಮೈದಾನದ ಬಳಿ ಐವರು ಆರೋಪಿಗಳು ಹಾಡಹಗಲೇ ಕ್ಯಾಬ್​ನಲ್ಲಿ ತೆರಳುತ್ತಿದ್ದವರನ್ನು ತಡೆದು ಅವರ ಬಳಿ ಇದ್ದ 2 ಲಕ್ಷ ರೂಪಾಯಿ ಹಣ, ಮೊಬೈಲ್​ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

    ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ದೆಹಲಿಯಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಹಲವು ಪ್ರಶ್ನೆಗಳು ಎದ್ದಿದ್ದವು. ಈ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಹಾಗೂ ಲೆಫ್ಟಿನೆಂಟ್​ ಗವರ್ನರ್​ ವಿ.ಕೆ. ಸಕ್ಸೇನಾ ನಡುವೆ ಮಾತಿನ ಚಕಮಕಿಯೇ ನಡೆದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts