

ಮುಂಬೈ: ಈ ವರ್ಷ ತೆರೆಕಂಡು ಪ್ರೇಕ್ಷಕರಿಂ ಭರ್ಜರಿ ರೆಸ್ಪಾನ್ಸ್ ಪಡೆದಿದ್ದ, ದಿ ಕೇರಳ ಸ್ಟೋರಿ ಚಿತ್ರದ ನಿರ್ದೇಶದ ಸುದೀಪ್ತೋ ಸೇನ್ ಹಾಗೂ ನಿರ್ಮಾಪಕ ವಿಫುಲ್ ಶಾ ಈಗ ಹೊಸ ಸಿನಿಮಾಗಾಗಿ ಒಂದಾಗಿದ್ದಾರೆ.
ಈ ಇಬ್ಬರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾಗೆ ಬಸ್ತರ್ ಎಂದು ಹೆಸರಿಸಲಾಗಿದೆ. ಈ ಬಾರಿಯೂ ಕೂಡ ಈ ಜೋಡಿ ನೈಜ ಘಟನೆ ಆಧಾರಿತ ಘಟನೆಯಕುರಿತು ಚಿತ್ರ ಮಾಡಲಿದೆ.
ಇದನ್ನೂ ಓದಿ:
ವಿಪುಲ್ ಶಾ ಅವರ ಸನ್ಶೈನ್ ಪಿಕ್ಷರ್ಸ್ ಮೂಲಕ ಚಿತ್ರವನ್ನು ನಿರ್ಮಿಸಲಾಗುವುದು ಎಂದು ಟ್ವೀಟ್ ಮಾಡಿ ತಿಳಿಸಲಾಗಿದೆ. ಬಸ್ತರ್ ಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಏಪ್ರಿಲ್ 5, 2024ರಂದು ಸಿನಿಮಾ ವಿಶ್ವದಾದ್ಯಂತ ತೆರೆ ಕಾಣಲಿದೆ.
ಕೇರಳದಲ್ಲಿ ನಡೆದಿದೆ ಎನ್ನಲಾದ ಲವ್ಜಿಹಾದ್ ಘಟನೆಗಳನ್ನು ಆಧರಿಸಿ ದಿ ಕೇರಳ ಸ್ಟೋರಿ ಚಿತ್ರ ಸಿದ್ದಗೊಂಡಿತ್ತು. ಸಿನಿಮಾ ಬಿಡುಗಡೆಯಾದ ನಂತರ ಪರ-ವಿರೋಧ ವ್ಯಕ್ತವಾಗಿದ್ದವು. ಕೆಲವರು ಚಿತ್ರವನ್ನು ಪ್ರೊಪಗ್ಯಾಂಡ ಎಂದು ದೂಚಿಸಿದ್ದರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿಯನ್ನು ಘೋಷಿಸಲಾಗಿತ್ತು.