More

    ಮೊದಲು ಭಾರತವನ್ನು ವಿಶ್ವಗುರು ಎಂದು ಕರೆದು ನಂತರ ಕಾಳಿ ಮಾತೆಗೆ ಅಪಮಾನ ಮಾಡಿದ ಯೂಕ್ರೇನ್!

    ನವದೆಹಲಿ: ಡಿಫೆನ್ಸ್ ಆಫ್ ಯೂಕ್ರೇನ್​ ನ ಅಧಿಕೃತ ಖಾತೆಯು ಕಾಳಿ ಮಾತೆಯನ್ನು ಅವಮಾನಕರ ಭಂಗಿಯಲ್ಲಿ ಬಿಂಬಿಸುವಂತೆ ತೋರಿಸುತ್ತಿರುವ ಟ್ವೀಟ್, ವ್ಯಾಪಕ ಖಂಡನೆಗೆ ಒಳಗಾಯಿತು. ಇದಕ್ಕೆ ಭಾರತದ ನೆಟಿಜನ್​ಗಳು ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸಲು ಶುರು ಮಾಡಿದ್ದರಿಂದ ತಕ್ಷಣವೇ ಆ ಟ್ವೀಟ್​ಅನ್ನು ಡಿಲೀಟ್ ಮಾಡಲಾಯಿತು.

    ಕಾಳಿ ಮಾತೆಯನ್ನು ಮಾದಕ ನಟಿಗೆ ಹೋಲಿಸಿದ ಯೂಕ್ರೇನ್!

    “ವರ್ಕ್ ಆಫ್ ಆರ್ಟ್” ಎಂದು ತಲೆ ಬರಹ ಬರೆದು ಯೂಕ್ರೇನ್​ನ ರಕ್ಷಣಾ ಇಲಾಖೆಯ ಅಧಿಕೃತ ಟ್ವಿಟ್ಟರ್ ಖಾತೆಯು ಭಾನುವಾರದಂದು ಭಾರತೀಯ ದೇವತೆ ಹಾಲಿವುಡ್ ನಟಿ ಮರ್ಲಿನ್ ಮನ್ರೋ ಸ್ಕರ್ಟ್ ಧರಿಸಿದ್ದ ಖ್ಯಾತ ಚಿತ್ರಕ್ಕೆ ಕಾಳಿ ಮಾತೆಯನ್ನು ಹೋಲಿಸಿ ಫೋಟೊ ಒಂದನ್ನು ಪೋಸ್ಟ್ ಮಾಡಿದೆ.

    ವ್ಯಂಗ್ಯಚಿತ್ರದ ಮೂಲಕ ಹಿಂದೂ ಸಂಸ್ಕೃತಿಯನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಭಾರತೀಯ ನೆಟಿಜನ್ನರು ಯೂಕ್ರೇನ್‌ ಮೇಲೆ ಸಿಟ್ಟಾಗಿದ್ದಾರೆ. ಚಿತ್ರದಲ್ಲಿ ಕಾಳಿ ಮಾತೆಯ ನೀಲಿ ಚರ್ಮದ ಬಣ್ಣ, ನಾಲಿಗೆಯನ್ನು ಚಾಚಿದ ಭಂಗಿ ಮತ್ತು ಕುತ್ತಿಗೆಯ ಸುತ್ತಲೂ ತಲೆಬುರುಡೆಯ ಮಾಲೆ ಇದ್ದು ಮರ್ಲಿನ್ ಮುನ್ರೋ ರೀತಿಯಲ್ಲಿ ನಾಚುತ್ತಾ ಮಾದಕ ಭಂಗಿಯಲ್ಲಿ ತೋರಿಸಲಾಗಿದೆ.

    ಈ ಫೋಟೊ ಹಿನ್ನೆಲೆ ಏನು?

    ರಷ್ಯಾ ಯೂಕ್ರೇನ್​ ಯುದ್ಧ ಶುರುವಾಗಿ ಒಂದು ವರ್ಷ ಕಳೆದರೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದೀಗ ಯೂಕ್ರೇನ್​ ರಷ್ಯಾದ ತೈಲ ಉದ್ಯಮದ ಮೇಲೆ ಕಣ್ಣು ಹಾಕಿದ್ದು ತೈಲವನ್ನು ಒಯ್ಯುವ ಕಂಟೇನರ್​ ಶಿಪ್​ಗಳನ್ನು ಗುರಿಪಡಿಸುತ್ತಿದೆ. ನಿನ್ನೆ, ರಷ್ಯಾ ಯುದ್ಧ ಶುರುವಾಗುವ ಹಿಂದೆಯೇ ವಶಪಡಿಸಿಕೊಂಡಿದ್ದ ಕ್ರೀಮಿಯಾ ಪ್ರದೇಶದಲ್ಲಿ ಕಂಟೇನರ್​ ಟ್ಯಾಂಕರ್​ ಒಂದು ಬ್ಲಾಸ್ಟ್​ ಆಗಿದೆ.

    ಈ ಸ್ಫೋಟ ಅದೆಷ್ಟು ಭಯಾನಕವಾಗಿತ್ತು ಎಂದರೆ ಸಣ್ಣ ಅಣು ಬಾಂಬ್ ಸ್ಫೋಟ ಆಗಿಯೋ ಏನೋ ಎನ್ನುವ ಹಾಗೆ ದೃಶ್ಯವಿತ್ತು. ಇದರಿಂದಾಗಿ ಸಾವು ನೋವುಗಳೂ ಸಂಭವಿಸಿದ್ದು ಈ ಘಟನೆಯನ್ನು ಆಚರಿಸಲು ಯೂಕ್ರೇನ್​ ಈ ರೀತಿಯ ಚಿತ್ರವನ್ನು ಬಿಡುಗಡೆ ಮಾಡಿದೆ. ಆದರೆ ಈ ಸ್ಫೋಟದ ಹೊಣೆಯನ್ನು ಯೂಕ್ರೇನ್​ ಇನ್ನೂ ಹೊತ್ತುಕೊಂಡಿಲ್ಲ.

    ಈ ಹಿನ್ನೆಲೆಯಲ್ಲಿ ಪೋಸ್ಟರ್​ ಬಿಡುಗಡೆ ಮಾಡಿದ್ದರೂ ಹಿಂದೂ ದೇವತೆಯನ್ನು ಅವಮಾನಿಸಿದಕ್ಕಾಗಿ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ನಡುವೆ ಭಾರತ ಸರ್ಕಾರ, ಯೂಕ್ರೇನ್​ ಆ್ಯಂಬುಲೆನ್ಸ್, ವೈದ್ಯಕೀಯ ಉಪಕರಣ, ಶಾಲಾ ಬಸ್​ಗಳು ಮುಂತಾದ ಜನರಿಗೆ ಉಪಕಾರಿ ಆಗಿರುವ ವಸ್ತುಗಳನ್ನು ಉಚಿತವಾಗಿ ನೀಡುತ್ತಿದೆ. ಆದರೂ ಈ ರೀತಿಯಾಗಿ ಭಾರತ ವಿರೋಧಿ ಪೋಸ್ಟ್​ ಮಾಡಿದಕ್ಕೆ ಜನರು ಸಿಡಿಮಿಡಿಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts