ಸಿನಿಮಾ

ಇನ್ನೂ ನಿಂತಿಲ್ಲವೇ ಬಾಲ್ಯವಿವಾಹ? ಹನ್ನೊಂದರ ಬಾಲಕಿಯನ್ನು ಮದುವೆಯಾದ ನಲವತ್ತರ ಪುರುಷ!

ಬಿಹಾರ: ಬಿಹಾರದ ಸಿವಾನ್ ಜಿಲ್ಲೆಯಲ್ಲಿ 11 ವರ್ಷದ ಬಾಲಕಿಯನ್ನು ಮದುವೆಯಾಗಿದ್ದಕ್ಕಾಗಿ 40 ವರ್ಷದ ವ್ಯಕ್ತಿಯನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ (ಪೋಕ್ಸೊ) ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಆರೋಪಿಯನ್ನು ಮಹೇಂದ್ರ ಪಾಂಡೆ ಎಂದು ಗುರುತಿಸಲಾಗಿದೆ. ಈ ಪ್ರಕರಣದ ಕುರಿತು ಸಿವಾನ್ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಸಿನ್ಹಾ ಅವರು, ”ಆರೋಪಿ ಮಹೇಂದ್ರ ಕುಮಾರ್ ಅವರನ್ನು ಪೋಸ್ಕೋ ಕಾಯ್ದೆಯಡಿ ಬಂಧಿಸಲಾಗಿದೆ. ಅಪ್ರಾಪ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.” ಎಂದಿದ್ದಾರೆ.

ಇದನ್ನೂ ಓದಿ: ಬಾಲ್ಯವಿವಾಹ ಮಾಡಿದರೆ ಶಿಕ್ಷೆಗೆ ಗುರಿ: ಕೊಪ್ಪಳ ತಹಸೀಲ್ದಾರ್ ವಿಠ್ಠಲ್ ಚೌಗಲಾ ಹೇಳಿಕೆ

ಸಾಲ ತೀರಿಸದ ಕಾರಣ ಆರೋಪಿ ಮಹೇಂದ್ರ ಪಾಂಡೆ ತನ್ನ ಮಗಳನ್ನು ಬಲವಂತವಾಗಿ ಮದುವೆಯಾಗಿದ್ದಾನೆ ಎಂದು ಅಪ್ರಾಪ್ತ ಬಾಲಕಿಯ ತಾಯಿ ಆರೋಪಿಸಿದ್ದಾರೆ. ಆದರೆ, ಈ ಆರೋಪಿ ಮಹೇಂದ್ರ ಪಾಂಡೆ ಮಾತ್ರ ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದು, ಇದು ತನ್ನಿಂದ ಹಣವನ್ನು ಪಡೆಯಲು ಬಾಲಕಿಯ ತಾಯಿ ಬೀಸಿರುವ ಬಲೆಯಾಗಿದೆ ಎಂದು ಪ್ರತ್ಯಾರೋಪ ಮಾಡಿದ್ದಾನೆ.

‘ಅಮ್ಮನೇ ನಮ್ಮಿಬ್ಬರನ್ನು ಸಿಕ್ಕಿಸಿ ಹಾಕುತ್ತಿದ್ದಾರೆ’!

“ನಾನು ಹುಡುಗಿ ಮತ್ತು ಹುಡುಗಿಯ ತಾಯಿಯ ಒಪ್ಪಿಗೆಯ ಮೇರೆಗೆ ಮದುವೆಯಾದೆ. ಆದರೆ ಈಗ ಹುಡುಗಿಯ ತಾಯಿ ನನ್ನನ್ನು ಬ್ಲಾಕ್​ಮೇಲ್ ಮಾಡುತ್ತಿದ್ದು ಹಣಕ್ಕಾಗಿ ಬೇಡಿಕೆಯಿಡಲು ಪ್ರಾರಂಭಿಸಿದ್ದಾಳೆ. ನಮ್ಮ ನಡುವೆ ಯಾವುದೇ ರೀತಿಯ ಹಣದ ವ್ಯವಹಾರ ಇಲ್ಲ. ನಾನು ಸಿಕ್ಕಿಬಿದ್ದಿದ್ದೇನೆ. ಕೆಲವು ಮಾಧ್ಯಮದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ” ಎಂದು ಆರೋಪಿ ದೂರಿದ್ದಾನೆ.

ಅಪ್ರಾಪ್ತ ಬಾಲಕಿ ಸಂಧ್ಯಾ ಕುಮಾರ್ ಕೂಡ ಆರೋಪಿ ಮಹೇಂದ್ರ ಪಾಂಡೆಯನ್ನು ತನ್ನ ತಾಯಿ ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಾಲಾ ವಾರ್ಷಿಕೋತ್ಸವಕ್ಕೆ ಬಂದ ಬಾಲಕಿಯನ್ನು ಮನೆಗೆ ಬಿಡುತ್ತೇನೆಂದು ಆತ ಕರೆದೊಯ್ದದ್ದಾರೂ ಎಲ್ಲಿಗೆ?

“ನಾವಿಬ್ಬರೂ ನನ್ನ ತಾಯಿಯ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದೇವೆ, ನಾವು ಒಟ್ಟಿಗೆ ಇರಲು ಬಯಸುತ್ತೇವೆ. ಮೊದಲು ನನ್ನ ತಾಯಿ ಎಲ್ಲವನ್ನೂ ಮಾಡಿಕೊಟ್ಟಿದ್ದರು, ಈಗ ಅವರು ನಮ್ಮಿಬ್ಬರನ್ನೂ ಬಲೆಗೆ ಬೀಳಿಸುತ್ತಿದ್ದಾರೆ, ”ಎಂದು ಅಪ್ರಾಪ್ತ ಬಾಲಕಿ ಹೇಳಿಕೆ ನೀಡಿದಳು.

ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರನ್ನು ಸ್ವೀಕರಿಸಿದ ಪೊಲೀಸರು ಮೈರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹೇಂದ್ರ ಕುಮಾರ್‌ನನ್ನು ಪೋಸ್ಕೋ ಕಾಯ್ದೆಯಡಿ ಬಂಧಿಸಿದ್ದಾರೆ. (ಏಜೆನ್ಸೀಸ್)

Latest Posts

ಲೈಫ್‌ಸ್ಟೈಲ್