More

    ಇದು ಭಾರತೀಯರು ಈ ವರ್ಷ ಅತಿಹೆಚ್ಚು ಬಳಸಿದ ಪಾಸ್​​ವರ್ಡ್​; ಇವೆಲ್ಲ ದುರ್ಬಲ ಪಾಸ್​ವರ್ಡ್​ಗಳು!

    ನವದೆಹಲಿ: ಬೇರೆಯವರ ಪಾಸ್​ವರ್ಡ್ ಬಗ್ಗೆ ಇತರರಿಗೆ ಕುತೂಹಲ ಇರುವುದು ಸಹಜ. ಪಾಸ್​ವರ್ಡ್ ಎಷ್ಟೇ ಗುಟ್ಟಾಗಿಟ್ಟರೂ ಕೆಲವೊಮ್ಮೆ ಅದು ಬಹಿರಂಗವಾಗಿ ಬಿಡುತ್ತದೆ, ಇಲ್ಲವೇ ಹ್ಯಾಕ್ ಮಾಡಿಕೊಂಡು ತಿಳಿದುಕೊಳ್ಳಲಾಗುತ್ತದೆ. ಹೀಗಾಗಿ ಪಾಸ್​ವರ್ಡ್​ ಆದಷ್ಟೂ ಸುರಕ್ಷಿತವಾಗಿರಬೇಕು, ಸುಲಭದಲ್ಲಿ ಗೊತ್ತಾಗುವಂತೆ ಅಥವಾ ಅಂದಾಜಿಸುವಂತೆ ಇರಬಾರದು.

    ಅದಾಗ್ಯೂ 2023ರಲ್ಲಿ ಇದುವರೆಗೆ ಯಾವುದನ್ನು ಪಾಸ್​ವರ್ಡ್​ ಆಗಿ ಹೆಚ್ಚು ಬಳಸಲಾಗಿದೆ, ಹೆಚ್ಚು ಬಳಕೆಯಾಗುವ ದುರ್ಬಲ ಪಾಸ್​​ವರ್ಡ್​ಗಳು ಯಾವುವು ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಪಾಸ್​​ವರ್ಡ್​ ಮ್ಯಾನೇಜ್​ಮೆಂಟ್ ಸಲ್ಯೂಷನ್​ ಕಂಪನಿ ನಾರ್ಡ್​ಪಾಸ್ ಇಂಥ ಒಂದು ಮಾಹಿತಿಯನ್ನು ಬಹಿರಂಗಪಡಿಸಿದೆ.

    ನಾರ್ಡ್​ಪಾಸ್​ ವರದಿ ಪ್ರಕಾರ ಜಗತ್ತಿನಾದ್ಯಂತ ಅದರಲ್ಲೂ ಭಾರತೀಯರು 2023ರಲ್ಲಿ ಅತಿಹೆಚ್ಚು ಬಳಸಿದ ಪಾಸ್​ವರ್ಡ್​ ‘123456’ ಎಂಬುದು ಬಹಿರಂಗಗೊಂಡಿದೆ. ಇದರ ಜತೆಗೆ ದುರ್ಬಲ ಪಾಸ್​​ವರ್ಡ್ ಅಂದರೆ ಸಾಮಾನ್ಯವಾಗಿ ಹಲವರು ಬಳಸುವಂಥ ಪಾಸ್​​ವರ್ಡ್ ಯಾವುದು ಎಂಬುದನ್ನೂ ಈ ವರದಿ ತಿಳಿಸಿದೆ.

    ಇದನ್ನೂ ಓದಿ: ಬಿಜೆಪಿಯಲ್ಲಿ ಉದ್ಭವಿಸಿತಾ ಭಿನ್ನಮತ?: ಕುತೂಹಲ ಕೆರಳಿಸಿದೆ ವಿಪಕ್ಷ ನಾಯಕನ ಆಯ್ಕೆ ವಿಚಾರ

    ದುರ್ಬಲ ಪಾಸ್​ವರ್ಡ್​ಗಳ ಪೈಕಿ ‘India@123’ ಟಾಪ್​ ಒನ್​ನಲ್ಲಿದೆ. ಅಲ್ಲದೆ ‘admin’ ಎನ್ನುವುದು ಕೂಡ ಭಾರತ ಹಾಗೂ ಜಗತ್ತಿನೆಲ್ಲೆಡೆ ಅತಿಹೆಚ್ಚು ಬಳಕೆಯಾದ ಪಾಸ್​​ವರ್ಡ್​ ಎಂದು ಇದು ಹೇಳಿದೆ. ಉಳಿದಂತೆ ಭಾರತದಲ್ಲಿ ‘password’, ‘Pass@123’, ‘Password@123’ ಪಾಸ್​ವರ್ಡ್​ ಆಗಿ ಈ ವರ್ಷ ಹೆಚ್ಚು ಬಳಕೆಯಾಗಿದೆ ಎಂದು ನಾರ್ಡ್​ಪಾಸ್ ತಿಳಿಸಿದೆ.

    ಇದನ್ನೂ ಓದಿ: ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ಇಂಟರ್ನೆಟ್ ಬಳಕೆದಾರರು ವಿವಿಧ ಪ್ಲಾಟ್‌ಫಾರ್ಮ್‌ಗಳಿಗಾಗಿ ಬಳಸುವ ಪಾಸ್‌ವರ್ಡ್‌ಗಳ ಬಗ್ಗೆ ಕಂಡುಹಿಡಿಯಲು ಈ ಸಂಶೋಧಕರು 6.6 ಟಿಬಿ ಪಾಸ್‌ವರ್ಡ್‌ ಡೇಟಾಬೇಸ್ ವಿಶ್ಲೇಷಿಸಿದ್ದಾರೆ. ಕಳವಿನ ವಿವಿಧ ಮಾಲ್‌ವೇರ್‌ಗಳಿಂದ ಬಹಿರಂಗಪಡಿಸಲಾದ ಡೇಟಾಬೇಸ್​​ಗಳಿಂದ ಈ ಅಧ್ಯಯನ ನಡೆಸಲಾಗಿದ್ದು, ಇಂಥ ಮಾಲ್​ವೇರ್​​ಗಳು ಸೈಬರ್‌ ಸುರಕ್ಷತೆಗೆ ದೊಡ್ಡ ಅಪಾಯವೆಂದು ತಜ್ಞರು ಪರಿಗಣಿಸಿದ್ದಾರೆ.

    ಜಗತ್ತಿನ ಶೇ. 31ರಷ್ಟು ಜನಪ್ರಿಯ ಪಾಸ್​ವರ್ಡ್​ಗಳು ಸಾಮಾನ್ಯವಾಗಿ ಅಂಕಿಗಳನ್ನಷ್ಟೇ ಹೊಂದಿರುತ್ತವೆ. ಅಂಥವುಗಳಲ್ಲಿ ‘123456789’, ‘12345’, ‘000000’ ಮುಂತಾದವು ಪ್ರಮುಖವಾದವು ಎನ್ನಲಾಗಿದೆ. ಮತ್ತೊಂದೆಡೆ ಈ ವರ್ಷ ಜಾಗತಿಕವಾಗಿ ಶೇ. 70 ಪಾಸ್​ವರ್ಡ್​ಗಳು ಸುಲಭದಲ್ಲಿ ಕಂಡುಹಿಡಿಯುಂಥದ್ದಾಗಿವೆ ಎಂದೂ ಈ ವರದಿ ತಿಳಿಸಿದೆ.

    ವಿಶ್ವಕಪ್ ಕ್ರಿಕೆಟ್ ಫೈನಲ್​ನ ಲಾಭ ಪಡೆಯಲು ಮುಂದಾದ ಪಾಲಿಕೆ; ಕೈಗೊಂಡ ಕ್ರಮ ಏನು?

    ಶಮಿಗೆ ಏಳು ವಿಕೆಟ್: ಏನಿದು ಅಚ್ಚರಿ.. ಆತನೊಬ್ಬ ನಿನ್ನೆ ಕಂಡ ಕನಸು ಇಂದು ನಿಜವಾಯ್ತು!

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts