More

    ವಿಶ್ವಕಪ್ ಕ್ರಿಕೆಟ್ ಫೈನಲ್​ನ ಲಾಭ ಪಡೆಯಲು ಮುಂದಾದ ಪಾಲಿಕೆ; ಕೈಗೊಂಡ ಕ್ರಮ ಏನು?

    ಅಹಮದಾಬಾದ್: ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್​ ಅಹಮದಾಬಾದ್​ನಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ಅಂತಿಮ ಹಣಾಹಣಿ ನಡೆಸಲಿವೆ.

    ಇದುವರೆಗಿನ ಎಲ್ಲ ಹತ್ತು ಪಂದ್ಯಗಳಲ್ಲೂ ಗೆದ್ದು ಗೆಲುವಿನ ಭಾರಿ ಉತ್ಸಾಹದೊಂದಿಗೆ ಫೈನಲ್​ಗೆ ಪ್ರವೇಶಿಸಿರುವ ಭಾರತ ಹಾಗೂ ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ಒಟ್ಟು 8 ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಫೈನಲ್​ನಲ್ಲಿ ನಡೆಸಲಿರುವ ರೋಚಕ ಸೆಣಸಾಟವನ್ನು ವೀಕ್ಷಿಸಲು ಕ್ರೀಡಾಭಿಮಾನಿಗಳು ಈಗಾಗಲೇ ಅಹಮದಾಬಾದ್​ಗೆ ತೆರಳಲು ಸಜ್ಜಾಗಿದ್ದಾರೆ.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಹೀಗಾಗಿ ದೇಶದ ವಿವಿಧ ಭಾಗಗಳಿಂದ ಅಹಮದಾಬಾದ್​ಗೆ ತೆರಳಲಿರುವ ವಿಮಾನಗಳ ಪ್ರಯಾಣ ದರ ದುಬಾರಿಯಾಗಿದ್ದಲ್ಲದೆ, ಅಹಮದಾಬಾದ್​ನ ಸುತ್ತಮುತ್ತಲ ಹೋಟೆಲ್​ಗಳು ಈಗಾಗಲೇ ಬುಕ್ ಆಗಿದ್ದು, ಅವುಗಳ ಬೇಡಿಕೆಯೂ ಹೆಚ್ಚಾಗಿದೆ.

    ಇದನ್ನೂ ಓದಿ: ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ಹೀಗೆ ಪುರುಷರ ಏಕದಿನ ವಿಶ್ವಕಪ್ ಕ್ರಿಕೆಟ್​ನ ಅಂತಿಮ ಹಣಾಹಣಿಯನ್ನು ನೋಡಲು ಕ್ರೀಡಾಭಿಮಾನಿಗಳು ದೊಡ್ಡ ಪ್ರಮಾಣದಲ್ಲಿ ಆಗಮಿಸುತ್ತಿರುವುದನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಪರಿವರ್ತಿಸಿಕೊಳ್ಳಲು ಅಲ್ಲಿನ ಪಾಲಿಕೆ ಮುಂದಾಗಿದೆ.

    ನ. 19ರ ಪಂದ್ಯ ವೀಕ್ಷಿಸಲು ಭಾರಿ ಪ್ರಮಾಣದಲ್ಲಿ ಪ್ರವಾಸಿಗರು ಬರಲಿದ್ದು, ಅವರನ್ನು ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳುವಂತೆ ಮಾಡಬೇಕು. ಅವರಿಗೆ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೇಳಲು ಅವುಗಳನ್ನು ವೀಕ್ಷಿಸುವ ನಿಟ್ಟಿನಲ್ಲಿ ಮನವೊಲಿಸಬೇಕು ಎಂದು ಎಲ್ಲ ಟೂರ್​ ಆಪರೇಟರ್​​ಗಳು ಮತ್ತು ಹೋಟೆಲ್​ ಮಾಲೀಕರಿಗೆ ಅಹಮದಾಬಾದ್ ಮುನಿಸಿಪಲ್ ಕಾರ್ಪೋರೇಷನ್ ನಿರ್ದೇಶನ ನೀಡಿದೆ.

    ಶಮಿಗೆ ಏಳು ವಿಕೆಟ್: ಏನಿದು ಅಚ್ಚರಿ.. ಆತನೊಬ್ಬ ನಿನ್ನೆ ಕಂಡ ಕನಸು ಇಂದು ನಿಜವಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts