Luck : ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ತಮಿಳುನಾಡುವ ಮೂಲದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಹುಟ್ಟುಹಬ್ಬವು ಪ್ರತಿಯೊಬ್ಬರ ಜೀವನದ ನೆಚ್ಚಿನ ದಿನವಾಗಿದೆ. ಆ ವಿಶೇಷ ದಿನದಂದೇ ಕೋಟ್ಯಂತರ ರೂಪಾಯಿ ನಿಮ್ಮನ್ನು ಹುಡುಕಿಕೊಂಡು ಬಂದರೆ ಹೇಗಿರುತ್ತೆ? ಕೇಳೋಕೆ ಒಂದು ರೀತಿಯಲ್ಲಿ ಥ್ರಿಲ್ ಆಗಿದೆ. ಅಷ್ಟೇ ಅಲ್ಲ, ಇಂಥಾ ಅದೃಷ್ಟ ಜೀವನದಲ್ಲಿ ಒಮ್ಮೆಯಾದದ್ರೂ ನನಗೆ ಬರಬಾರದೇ ಅಂತಾ ಅಂದುಕೊಳ್ತೀರಿ.
ಅಂಥದ್ದೇ ಅದೃಷ್ಟ ತಮಿಳುನಾಡು ಮೂಲದ ಸುರೇಶ್ ಪಾವಯ್ಯ ಎಂಬುವರ ಬಾಳಲ್ಲಿ ಬಂದಿದೆ. ದುಬೈ ಶಾಪಿಂಗ್ ಫೆಸ್ಟಿವಲ್‌ನ ಭಾಗವಾಗಿ ನಡೆದ ಗ್ರ್ಯಾಂಡ್ ಪ್ರೈಜ್ ಲಕ್ಕಿ ಡ್ರಾದಲ್ಲಿ 7 ಕೋಟಿ ರೂಪಾಯಿ (30 ಲಕ್ಷ ದಿರ್ಹಮ್‌ಗಳು) ಬಹುಮಾನವನ್ನು ಗೆದ್ದಿದ್ದಾರೆ. ಅಚ್ಚರಿ ಏನೆಂದರೆ, ಸುರೇಶ್ ಪಾವಯ್ಯ ಅವರ 45ನೇ ಹುಟ್ಟುಹಬ್ಬದಂದೇ ಈ ಅದೃಷ್ಟ ಲಕ್ಷ್ಮೀ ಒಲಿದಿದೆ.
ಇದನ್ನೂ ಓದಿ: 11 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ ಖ್ಯಾತ ಮಾಜಿ ಕ್ರಿಕೆಟಿಗ ಜೆಪಿ ಡುಮಿನಿ! JP Duminy
ಸುರೇಶ್ ಅವರು ಡ್ರೀಮ್ ದುಬೈನ ಶಾಪ್ ಅಂಡ್ ವಿನ್ ಡ್ರಾದಲ್ಲಿ ಬಹುಮಾನವನ್ನು ಗೆದ್ದಿದ್ದಾರೆ. ಈ ಹಿಂದೆಯು ಹಲವು ಬಾರಿ ಲಕ್ಕಿ ಡ್ರಾಗಳಲ್ಲಿ ಸುರೇಶ್ ಭಾಗವಹಿಸಿದ್ದರಂತೆ. ಆದರೆ, ಹುಟ್ಟುಹಬ್ಬದಂದೇ ಲಕ್ಕಿ ಡ್ರಾದಲ್ಲಿ ಅದೃಷ್ಟಶಾಲಿಯಾಗುತ್ತೇನೆಂದು ನಾನು ಭಾವಿಸಿರಲಿಲ್ಲ ಎಂದು ಸುರೇಶ್ ಹೇಳಿದ್ದಾರೆ.
ಸುರೇಶ್ ಅವರು 2006 ರಿಂದ ಯುಎಇಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಹುಮಾನವಾಗಿ ಬಂದ ಹಣದಲ್ಲಿ ಸುರೇಶ್ ಅವರು ತಾಂತ್ರಿಕ ಸೇವೆಗಳ ವ್ಯವಹಾರವನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಕೊಂಚ ಹಣವನ್ನು ಸಾಮಾಜಿಕ ಸೇವೆಗಾಗಿ ಬಳಸುವುದಾಗಿ ತಿಳಿಸಿದ್ದಾರೆ.
ಸುರೇಶ್ಗೆ 7 ಕೋಟಿ ಬಹುಮಾನ ಬಂದಿರುವ ಸುದ್ದಿ ಕೇಳಿ ಇಡೀ ಕುಟುಂಬ ಖುಷಿಯ ಅಲೆಯಲ್ಲಿ ತೇಲುತ್ತಿದೆ. ಅಂದಹಾಗೆ ದುಬೈ ಸರ್ಕಾರಿ ಪ್ರತಿನಿಧಿಗಳ ಸಮ್ಮುಖದಲ್ಲಿ ಡ್ರೀಮ್ ದುಬೈ ಅಪ್ಲಿಕೇಶನ್ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ವಿಜೇತರನ್ನು ಘೋಷಿಸಲಾಯಿತು. (ಏಜೆನ್ಸೀಸ್)
ಫ್ರೂಟಿಯಲ್ಲಿ ರಮ್ ಮಿಕ್ಸ್ ಮಾಡಿ ವರನಿಗೆ ಕೊಟ್ಟ ಸ್ನೇಹಿತ! ಮುಂದೇನಾಯ್ತು ನೀವೇ ನೋಡಿ… Wedding Ceremony
ಬ್ಯೂಟಿ ಅಂದರೆ ಅರೆಬರೆ ಬಟ್ಟೆ ಧರಿಸಿ ದೇಹ… ಹಾಟ್ ಹನಿ ರೋಸ್ಗೆ ಹಿಗ್ಗಾಮುಗ್ಗಾ ತರಾಟೆ! Honey Rose
ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಡೋ ಪಾಕ್ ಪಂದ್ಯದ ಟಿಕೆಟ್ ಬೆಲೆ ಬರೋಬ್ಬರಿ… ಅಭಿಮಾನಿಗಳಿಗೆ ಶಾಕ್! IND vs PAK