Wedding Ceremony : ಭಾರತೀಯ ವಿವಾಹಗಳು ಸದಾ ಮೋಜಿನಿಂದ ಕೂಡಿರುತ್ತವೆ. ಮದುವೆ ಮನೆ ಅಥವಾ ಮಂಟಪವನ್ನು ಒಂದು ಸುತ್ತು ಹಾಕಿಕೊಂಡು ಬಂದರೆ, ಅಲ್ಲಿ ತಮಾಷೆ, ಗೇಲಿ, ಮೋಜು ಮತ್ತು ಮಸ್ತಿಯೇ ಕಾಣಿಸುತ್ತದೆ. ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದೂ ಉಂಟು. ಇದೀಗ ಅಂಥದ್ದೇ ಮತ್ತೊಂದು ವಿಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಸ್ನೇಹಿತರು ಮತ್ತು ಸಂಬಂಧಿಕರು ವರ ಅಥವಾ ವಧುವನ್ನು ಕೀಟಲೆ ಮಾಡಲು ನಾನಾ ರೀತಿಯ ವಿನೂತನ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲ ಸಮಯ ಮದುವೆ ಉಡುಗೆ ಮರೆಮಾಚುವುದು, ಯಾವುದಾದರೂ ವಸ್ತುಗಳನ್ನು ಬೇಕಂತಲ್ಲೆ ಬಚ್ಚಿಡುವುದು ಮಾಡುತ್ತಾರೆ. ಈ ಮೂಲಕ ವಧು-ವರರನ್ನು ಪೀಡಿಸುತ್ತಾರೆ. ಆದರೆ, ಈಗ ಕಿಕ್ ಕೊಡುವಂತಹ ತಮಾಷೆಯ ವಿಡಿಯೋವೊಂದು ವೈರಲ್ ಆಗುತ್ತಿದೆ. ಅದರಲ್ಲಿ ತಂಪು ಪಾನೀಯಕ್ಕೆ ರಹಸ್ಯವಾಗಿ ಮದ್ಯವನ್ನು ಸೇರಿಸಿ ವರನಿಗೆ ಕುಡಿಸಿದ್ದಾರೆ.
ಈ ವಿಡಿಯೋವನ್ನು ಅಭಿರ್ ಬಿಸ್ವಾಸ್ ಎಂಬ ಇನ್‌ಸ್ಟಾ ಬಳಕೆದಾರ ಹಂಚಿಕೊಂಡಿದ್ದಾರೆ. ಅದರಲ್ಲಿ, ಅಭಿರ್ ಎಂಬುವರ ಕೈಯಲ್ಲಿ ಫ್ರೂಟಿ ಟೆಟ್ರಾ ಪ್ಯಾಕ್ ಮತ್ತು ಅದರ ಪಕ್ಕದಲ್ಲಿ ಓಲ್ಡ್ ಮಾಂಕ್ ರಮ್ ಬಾಟಲಿ ಇದೆ. ಹಣ್ಣಿನ ಜ್ಯೂಸ್ಗೆ ಸ್ವಲ್ಪ ರಮ್ ಬೆರೆಸಿ ಮದುವೆ ಮಂಟಪದಲ್ಲಿ ವರನ ಬಳಿಗೆ ಹೋಗುತ್ತಾನೆ. ಬಳಿಕ ನಗುತ್ತಾ ವರನಿಗೆ ಜ್ಯೂಸ್ ಕೊಡುತ್ತಾನೆ. ಅದನ್ನು ತೆಗೆದುಕೊಳ್ಳುವ ವರ ಏನನ್ನೂ ಅನುಮಾನಿಸದೆ ಒಂದು ಸಿಪ್ ಕೂಡ ತೆಗೆದುಕೊಳ್ಳುತ್ತಾನೆ.
ಇದನ್ನೂ ಓದಿ: ಬ್ಯೂಟಿ ಅಂದರೆ ಅರೆಬರೆ ಬಟ್ಟೆ ಧರಿಸಿ ದೇಹ… ಹಾಟ್ ಹನಿ ರೋಸ್ಗೆ ಹಿಗ್ಗಾಮುಗ್ಗಾ ತರಾಟೆ! Honey Rose
ಕುಡಿದ ನಂತರ ವರ ಒಂದು ಕ್ಷಣ ದಿಗ್ಭ್ರಮೆಗೊಳ್ಳುತ್ತಾನೆ. ಬಳಿಕ ವರ, ವಧುವನ್ನು ನೋಡಿ ನುಗುತ್ತಾನೆ. ಅಷ್ಟರಲ್ಲೇ ಆತನಿಗೆ ಎಲ್ಲವೂ ಅರ್ಥವಾಗಿರುತ್ತದೆ. ಓಹ್, ನೀವು ಜ್ಯೂಸ್ನಲ್ಲಿ ಮದ್ಯ ಬೆರೆಸಿದ್ದೀರಾ? ಎಂದು ಕೇಳುತ್ತಾನೆ. ಅವನ ಮುಗ್ಧ ಪ್ರತಿಕ್ರಿಯೆಯು ವಿಡಿಯೋಗೆ ಇನ್ನಷ್ಟು ಹಾಸ್ಯವನ್ನು ಸೇರಿಸಿದೆ. ಈ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಈವರೆಗೆ 6.4 ಕೋಟಿ ಜನರು ವೀಕ್ಷಿಸಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇದು ಫನ್ನಿಯಾಗಿ ಎಂದು ಹೇಳಿದರೆ, ಹೆಚ್ಚಿನ ಜನರು ಟೀಕಿಸಿದ್ದಾರೆ. ಮದುವೆ ಎಂಬುದು ಒಂದು ಪವಿತ್ರ ಕಾರ್ಯಕ್ರಮ ಮತ್ತು ಅಂತಹ ಸ್ಥಳದಲ್ಲಿ ಮದ್ಯಪಾನ ಮಾಡುವುದು ಸರಿಯಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮಾಡಿ ನಮಗೆ ತಿಳಿಸಿ. (ಏಜೆನ್ಸೀಸ್)
ಮಹಾ ಶಿವರಾತ್ರಿಯಂದು ಬುಧ ಸಂಕ್ರಮಣ: ಈ 5 ರಾಶಿವರಿಗೆ ಅದೃಷ್ಟವೋ ಅದೃಷ್ಟ, ಧನ ಲಾಭ! Zodiac Signs
ನಿದ್ರೆಯಿಂದ ಕ್ಯಾನ್ಸರ್ವರೆಗೆ… ದ್ರಾಕ್ಷಿ ತಿನ್ನುವುದರಿಂದ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ! Grapes