Honey Rose : ಕೇರಳದ ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರು ವಿರುದ್ಧ ಮಲಯಾಳಂ ನಟಿ ಹನಿ ರೋಸ್ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಮತ್ತು ಅದರ ವಿರುದ್ಧ ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್ ಅವರ ನಿಲುವು ಇತ್ತೀಚೆಗೆ ಭಾರಿ ಚರ್ಚೆಯ ವಿಷಯವಾಗಿದೆ.
ಇತ್ತೀಚೆಗೆ ಹನಿ ರೋಸ್ ಸಂದರ್ಶನವೊಂದರಲ್ಲಿ ಮಾತನಾಡಿ, ಕೆಲವರು ತಮ್ಮ ದೂರನ್ನು ತಿರುಚಿದ್ದಾರೆ ಎಂದು ಆರೋಪಿಸಿದರು. ಈ ಮೂಲಕ ಪರೋಕ್ಷವಾಗಿ ರಾಹುಲ್ ಈಶ್ವರ್ ಬಗ್ಗೆ ಮಾತನಾಡಿದರು. ನಾನು ನೀಡಿರುವುದು ಲೈಂಗಿಕ ಕಿರುಕುಳ ದೂರು. ಆದರೆ, ಕೆಲವರು ನನ್ನ ಉಡುಪಿನ ಹೆಸರಿನಲ್ಲಿ ದೂರನ್ನು ತಿರುಚಿದ್ದಾರೆ. ನನಗಾದ ನೋವಿನ ಬಗ್ಗೆ ಮಾತನಾಡದೇ ನನ್ನ ಬಟ್ಟೆಯ ಬಗ್ಗೆ ಮಾತನಾಡುತ್ತಿದ್ದಾರೆಂದು ಹನಿ ರೋಸ್ ಹೇಳಿದ್ದಾರೆ. ಆದರೆ, ಹನಿ ರೋಸ್ ಹೇಳಿಕೆಗೆ ರಾಹುಲ್ ಈಶ್ವರ್ ಪ್ರತಿಕ್ರಿಯೆ ನೀಡಿದ್ದು, ಕೇರಳದ ಜನರು ತಮ್ಮ ಅಭಿಪ್ರಾಯವನ್ನು ಬೆಂಬಲಿಸುತ್ತಾರೆ ಎಂದಿದ್ದಾರೆ.
ಈ ಸಮಾಜದ ಮುಂದೆ ಅವರ ದೂರನ್ನು ತಿರುಚಿದ್ದೇನೆ ಎಂದು ಹನಿರೋಸ್ ಹೇಳುತ್ತಾರೆ. ಬಾಬಿ ಚೆಮ್ಮನೂರ್ ಅವರನ್ನು ಬೆಂಬಲಿಸಲು ನಾನು ಹನಿ ರೋಸ್ ಅವರ ಉಡುಪಿನ ವಿಚಾರ ಪ್ರಸ್ತಾಪಿಸಿದ್ದೇನೆ ಎಂದು ಹೇಳುತ್ತಾರೆ. ಇದರ ಸತ್ಯವನ್ನು ನೀವು ಅರ್ಥಮಾಡಿಕೊಳ್ಳಬೇಕು ಹೊರತು ರಾಹುಲ್ ಈಶ್ವರ್ ಸುಂದರವಾಗಿ ಮಾತನಾಡುತ್ತಾರೆ ಎಂಬ ಕಾರಣಕ್ಕಾಗಿ ಅಲ್ಲ. ನಾನು ಸಾಮಾನ್ಯ ವ್ಯಕ್ತಿ. ನಾನು ಹೇಳುವುದರ ಸತ್ಯವನ್ನು ಜನರು ಅರ್ಥಮಾಡಿಕೊಂಡಿದ್ದಾರೆ ಎಂದರು.
ಹನಿ ರೋಸ್ ನೀಡಿರುವ ಸಂದರ್ಶನಕ್ಕೆ ಬಂದಿರುವ ಶೇ.99 ರಷ್ಟು ಕಾಮೆಂಟ್‌ಗಳು ಟೀಕೆಗಳಾಗಿವೆ. ಹನಿ ರೋಸ್ ಹೇಳಿದ ಒಂದು ವಿಷಯವನ್ನು ನಾನು ಒಪ್ಪುತ್ತೇನೆ. ಅದೇ ರೀತಿ ನಾನು ಒಪ್ಪದ ವಿಷಯಗಳೂ ಇವೆ. ಯಾವುದೇ ಹುಡುಗಿ ಸೈಬರ್ ದಾಳಿಗೆ ಬಲಿಯಾಗಬಾರದು. ನಾನು ಅದನ್ನು ಶೇ.100 ರಷ್ಟು ಬೆಂಬಲಿಸುತ್ತೇನೆ. ಆದರೆ, ಹನಿ ರೋಸ್ ಮರೆಯಬಾರದಂತಹ ಕೆಲವು ವಿಷಯಗಳಿವೆ. ನಿಮ್ಮ ಪರವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮಹಿಳಾ ಆಯೋಗ, ಯುವ ಆಯೋಗ ಮತ್ತು ಶೇ.99 ರಷ್ಟು ಮಾಧ್ಯಮಗಳಿರಬಹುದು ಆದರೆ, ಕೇರಳ ಸಮಾಜದ ಶೇ.90 ರಷ್ಟು ಜನರು ರಾಹುಲ್ ಈಶ್ವರ್‌ರಂತಹ ಕೆಲವು ಜನರ ಅಭಿಪ್ರಾಯಗಳನ್ನು ಬೆಂಬಲಿಸುತ್ತಾರೆ. ಹನಿ ರೋಸ್ ಇದರ ಬಗ್ಗೆ ಯೋಚಿಸಿದ್ದಾರೆಯೇ? ಎಂದರು.
ನಾನು ನಿಮ್ಮ ಬಗ್ಗೆ ಹೇಳಿರುವುದರಲ್ಲಿ ಸತ್ಯ ಮತ್ತು ಸಭ್ಯತೆ ಇದೆ ಎಂಬುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಹನಿ ರೋಸ್, ನೀನು ಕಣ್ಣು ಮುಚ್ಚಿದರೆ ಇಲ್ಲಿ ಕತ್ತಲೆಯಾಗುವುದಿಲ್ಲ. ನೀವು ಯಾವುದೇ ಉದ್ಘಾಟನೆಗಳನ್ನು ಮಾಡುವುದು ಸರಿ ಆದರೆ, ಅದಕ್ಕೆ ಅಂತ ಯೋಗ್ಯವಾದ ಡ್ರೆಸ್ ಕೋಡ್ ಇದೆ ಎಂಬುದನ್ನು ಅರಿತುಕೊಳ್ಳಿ. ಅದನ್ನು ಬಿಟ್ಟು ಅನಗತ್ಯವಾಗಿ ಮನುಷ್ಯನನ್ನು ನಿಂದಿಸುವುದು ತಪ್ಪು ಎಂಬುದನ್ನು ಅರ್ಥಮಾಡಿಕೊಳ್ಳಿ.
ನಿಮ್ಮನ್ನು ಟೀಕಿಸಿದ್ದಕ್ಕಾಗಿ ನನ್ನ ವಿರುದ್ಧ ದೂರು ದಾಖಲಿಸುವುದಲ್ಲ. ಸುಂದರವಾಗಿರುವುದು ಎಲ್ಲರ ಹಕ್ಕು. ಆದರೆ, ಕೆಲವು ಲಕ್ಷ್ಮಣ ರೇಖೆಗಳಿವೆ. ಅದು ಕೊಳಕಾಗಿ ಬದಲಾಗಬಾರದು. ಸೌಂದರ್ಯ ಎಂದರೆ ದೇಹದ ವಿವಿಧ ಭಾಗಗಳನ್ನು ಅತಿಯಾಗಿ ತೋರಿಸುವುದಲ್ಲ ಎಂಬುದನ್ನು ಅರಿತುಕೊಳ್ಳಿ. ನನ್ನ ವಿರುದ್ಧದ ಟೀಕೆಗಳಿಗೆ ಇದು ನನ್ನ ಪ್ರತಿಕ್ರಿಯೆಯಾಗಿದೆ ಎಂದು ರಾಹುಲ್ ಈಶ್ವರ್ ಹೇಳಿದರು. (ಏಜೆನ್ಸೀಸ್)
ಮಲಯಾಳಂ ಬ್ಯೂಟಿ ಹನಿ ರೋಸ್ ಬಗ್ಗೆ ಡಬಲ್ ಮೀನಿಂಗ್ ಮಾತು: ಉದ್ಯಮಿ ಬಾಬಿ ಚೆಮ್ಮನೂರ್ ಪೊಲೀಸರ ವಶ! Honey Rose
ಹೋದಲೆಲ್ಲ ಡಬಲ್ ಮೀನಿಂಗ್ ಮಾತುಗಳು…ಹನಿ ರೋಸ್ ಹಿಂದೆ ಬಿದ್ದ ವ್ಯಕ್ತಿಯ ದ್ವೇಷದ ಕತೆ ಇದು! Honey Rose