JP Duminy : ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜೀನ್ ಪಾಲ್ ಡುಮಿನಿ 14 ವರ್ಷಗಳ ದಾಂಪತ್ಯಕ್ಕೆ ಅಂತ್ಯವಾಡಿದ್ದು, ತಮ್ಮ ಪತ್ನಿ ಸೂ ಅವರಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ.
ಪತ್ನಿಗೆ ಡಿವೋರ್ಸ್ ನೀಡಿರುವ ಸುದ್ದಿಯನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಡುಮಿನಿ ಪೋಸ್ಟ್ ಮಾಡಿದ್ದಾರೆ. ಡುಮಿನಿ ಮತ್ತು ಅವರ ಪತ್ನಿ ಸೂ ಪರಸ್ಪರ ಒಪ್ಪಿಗೆಯಿಂದಲೇ ಈ ತೀರ್ಮಾನಕ್ಕೆ ಬಂದಿದ್ದಾರೆ.
ಒಟ್ಟಿಗೆ ಹಲವು ಅದ್ಭುತ ಸಮಯಗಳನ್ನು ಕಳೆದ ನಂತರ, ನಾವು ಬೇರ್ಪಡಲು ನಿರ್ಧರಿಸಿದ್ದೇವೆ ಎಂದು ಡುಮಿನಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. ಬಹಳ ಯೋಚಿಸಿದ ನಂತರ, ಸೂ ಮತ್ತು ನಾನು ಬೇರ್ಪಡಲು ನಿರ್ಧರಿಸಿದ್ದೇವೆ. ನಾವು ಒಟ್ಟಿಗೆ ಅನೇಕ ಅದ್ಭುತ ಸಮಯಗಳನ್ನು ಕಳೆದಿದ್ದೇವೆ. ನಮಗೆ ಇಬ್ಬರು ಚಿಕ್ಕ ಹೆಣ್ಣುಮಕ್ಕಳಿದ್ದಾರೆ. ನಾವಿಬ್ಬರು ಸ್ನೇಹಿತರಾಗಿಯೇ ಉಳಿದಿದ್ದೇವೆ. ನಮ್ಮ ಬೇರ್ಪಡುವಿಕೆ ಸೌಹಾರ್ದಯುತವಾಗಿದೆ ಎಂದು ಡುಮಿನಿ ಬರೆದಿದ್ದಾರೆ.
ಇದನ್ನೂ ಓದಿ: WPL: ಸ್ಮೃತಿ ಆಟಕ್ಕೆ ಮನ‘ಸೋತ’ ಕ್ಯಾಪಿಟಲ್ಸ್: ಆರ್‌ಸಿಬಿ ಮಹಿಳೆಯರ ಗೆಲುವಿನ ಓಟ
ಅಂದಹಾಗೆ ಡುಮಿನಿ ಮತ್ತು ಸೂ 2011ರಲ್ಲಿ ವಿವಾಹವಾದರು. ಮದುವೆಗೆ ಸುಮಾರು 300 ಜನರನ್ನು ಆಹ್ವಾನಿಸಲಾಗಿತ್ತು. ಇದರಲ್ಲಿ ಮೋರ್ನೆ ಮಾರ್ಕೆಲ್, ಮಾರ್ಕ್ ಬೌಚರ್ ಮತ್ತು ಗ್ರೇಮ್ ಸ್ಮಿತ್‌ರಂತಹ ಪ್ರಸಿದ್ಧ ಕ್ರಿಕೆಟಿಗರು ಭಾಗಿಯಾಗಿದ್ದರು. ಆದರೆ, ಇದೀಗ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ. ಇಬ್ಬರ ನಡುವೆ ಹಲವು ವರ್ಷಗಳಿಂದ ವೈಮನಸ್ಸು ಇತ್ತೆಂದು ವರದಿಯಾಗಿದೆ.
ದಕ್ಷಿಣ ಆಫ್ರಿಕಾ ಪರ ಹಲವು ವರ್ಷಗಳ ಕಾಲ ಆಡಿದ ಡುಮಿನಿ, ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಕ್ಕನ್ ಚಾರ್ಜರ್ಸ್ ಪರ ಆಡಿದ್ದರು. 2018ರಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಡುಮಿನಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಇಬ್ಬರ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದೆ. (ಏಜೆನ್ಸೀಸ್)
ಮಹಾ ಶಿವರಾತ್ರಿಯಂದು ಬುಧ ಸಂಕ್ರಮಣ: ಈ 5 ರಾಶಿವರಿಗೆ ಅದೃಷ್ಟವೋ ಅದೃಷ್ಟ, ಧನ ಲಾಭ! Zodiac Signs
ನಿದ್ರೆಯಿಂದ ಕ್ಯಾನ್ಸರ್ವರೆಗೆ… ದ್ರಾಕ್ಷಿ ತಿನ್ನುವುದರಿಂದ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ! Grapes
ಫ್ರೂಟಿಯಲ್ಲಿ ರಮ್ ಮಿಕ್ಸ್ ಮಾಡಿ ವರನಿಗೆ ಕೊಟ್ಟ ಸ್ನೇಹಿತ! ಮುಂದೇನಾಯ್ತು ನೀವೇ ನೋಡಿ… Wedding Ceremony