ವಡೋದರ: ನಾಯಕಿ ಸ್ಮೃತಿ ಮಂದನಾ (81 ರನ್, 47 ಎಸೆತ, 10 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಮೂರನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ (ಡಬ್ಲುೃಪಿಎಲ್) ಡೆಲ್ಲಿ ಕ್ಯಾಪಿಟಲ್ಸ್ ಎದುರು 8 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ. ಸತತ 2ನೇ ಜಯದೊಂದಿಗೆ ಸ್ಮತಿ ಮಂದನಾ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಕೋಟಂಬಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕಳೆದ ಆವೃತ್ತಿಯ ಫೈನಲಿಸ್ಟ್‌ಗಳ ಕಾದಾಟದಲ್ಲಿ ಟಾಸ್ ಸೋತ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್‌ಗೆ ಇಳಿಯಿತು. ಬ್ಯಾಟರ್ ಜೆಮೀಮಾ ರೋಡ್ರಿಗಸ್ (34 ರನ್, 22 ಎಸೆತ, 4 ಬೌಂಡರಿ, 2 ಸಿಕ್ಸರ್) ಆಸರೆಯ ನಡುವೆಯೂ ವೇಗಿ ರೇಣುಕಾ ಸಿಂಗ್ (23ಕ್ಕೆ 3) ಹಾಗೂ ಆಲ್ರೌಂಡರ್ ಜಾರ್ಜಿಯಾ ವಾರೆಹ್ಯಾಂ (25ಕ್ಕೆ 3) ಸಹಿತ ಇತರ ಬೌಲರ್‌ಗಳ ಬಿಗಿ ದಾಳಿಗೆ ತತ್ತರಿಸಿ 19.3 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಸ್ಮತಿ ಮಂದನಾ ಹಾಗೂ ಡ್ಯಾನಿ ವ್ಯಾಟ್ ಹಡ್ಜ್ (42) ಒದಗಿಸಿದ ಶತಕದ ಆರಂಭದ ನೆರವಿನಿಂದ 16.2 ಓವರ್‌ಗಳಲ್ಲಿ 2 ವಿಕೆಟ್‌ಗೆ 146 ರನ್‌ಗಳಿಸಿ ಜಯದ ಸಂಭ್ರಮ ಕಂಡಿತು.
ಸುಲಭ ಚೇಸಿಂಗ್: ಸ್ಪರ್ಧಾತ್ಮಕ ಮೊತ್ತದ ಚೇಸಿಂಗ್‌ಗೆ ಇಳಿದ ಸ್ಮತಿ ಹಾಗೂ ಡ್ಯಾನಿ ವ್ಯಾಟ್ ಭದ್ರ ಅಡಿಪಾಯ ಆರ್‌ಸಿಬಿಗೆ ಭದ್ರ ಅಡಿಪಾಯ ಹಾಕಿಕೊಟ್ಟರು. ಮೊದಲ ಆರು ಓವರ್‌ಗಳಲ್ಲಿ ಇವರಿಬ್ಬರು 57 ರನ್ ಕಸಿದರು. ಪ್ರತಿ ಓವರ್‌ಗೆ 10ರ ಸರಾಸರಿಯಲ್ಲಿ ಕಲೆಹಾಕಿದ ಇವರಿಬ್ಬರೂ ಆರ್‌ಸಿಬಿ ಚೇಸಿಂಗ್ ಮತ್ತಷ್ಟು ಸುಲಭಗೊಳಿಸಿದರು. ಸ್ಮತಿ- ಡ್ಯಾನಿ ವ್ಯಾಟ್ ಮೊದಲ ವಿಕೆಟ್‌ಗೆ 65 ಎಸೆತಗಳಲ್ಲಿ 107 ರನ್ ಕಸಿದರು. ಈ ಜತೆಯಾಟ ಮುರಿಯಲು ಡೆಲ್ಲಿ ಬೌಲರ್‌ಗಳು ನಡೆಸಿದ ಪ್ರಯತ್ನ ವ್ಯರ್ಥಗೊಂಡಿತು.
ಸ್ಮತಿ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರೆ, ಇವರಿಗೆ ಸೂಕ್ತ ಬೆಂಬಲ ನೀಡಿದ ಡ್ಯಾನಿ ವ್ಯಾಟ್ 11ನೇ ಓವರ್‌ನಲ್ಲಿ ಡಗೌಟ್ ಸೇರಿದರು. ನಂತರ ಸ್ಮತಿ ಜತೆಯಾದ ಎಲ್ಲಿಸ್ ಪೆರ‌್ರಿ (7) ಎರಡನೇ ವಿಕೆಟ್‌ಗೆ 26 ಎಸೆತಗಳಲ್ಲಿ 26 ರನ್‌ಗಳಿಸಿದರು. 9 ರನ್ ಅವಶ್ಯವಿದ್ದಾಗ ಸ್ಕೂಪ್ ಶಾಟ್‌ಗೆ ಯತ್ನಿಸಿದ ಸ್ಮತಿ ಔಟಾದರು. ಪೆರ‌್ರಿ ಜತೆಯಾದ ರಿಚಾ ೋಷ್ (11) ಇನ್ನು 22 ಎಸೆತ ಬಾಕಿಯಿರುವಂತೆಯೇ ಗೆಲುವು ತಂದರು.
ಡೆಲ್ಲಿ ಕ್ಯಾಪಿಟಲ್ಸ್: 19.3 ಓವರ್‌ಗಳಲ್ಲಿ 141 (ಮೆಗ್ ಲ್ಯಾನಿಂಗ್ 17, ಜೆಮೀಮಾ 34, ಸುದರ್‌ಲ್ಯಾಂಡ್ 19, ಮಾರಿಜಾನ್ನೆ 12, ಜೋನಾಸೆನ್ 1, ಸಾರಾ ಬ್ರೈಸ್ 23, ಶಿಖಾ ಪಾಂಡೆ 14, ಮಿನ್ನು 5*, ರೇಣುಕಾ 23ಕ್ಕೆ 3, ವಾರೆಹ್ಯಾಂ 25ಕ್ಕೆ 3, ಏಕ್ತಾ 35ಕ್ಕೆ 2, ಕಿಮ್ ಗಾರ್ತ್ 19ಕ್ಕೆ 2).
ಆರ್‌ಸಿಬಿ: 16.2 ಓವರ್‌ಗಳಲ್ಲಿ 2 ವಿಕೆಟ್‌ಗೆ 146 (ಸ್ಮತಿ ಮಂದನಾ 81, ಡ್ಯಾನಿ ವ್ಯಾಟ್ 42, ಎಲ್ಲಿಸ್ ಪೆರ‌್ರಿ 7*, ರಿಚಾ 11*, ಆರುಂಧತಿ 25ಕ್ಕೆ 1, ಶಿಖಾ 27ಕ್ಕೆ 1).