More

    ಬಿಡುಗಡೆಗೂ ಮುನ್ನ 1000 ಕೋಟಿ ರೂ. ಕಮಾಯಿ ಮಾಡಿದ ಸಿನಿಮಾ; ಇದು ಸಾಧ್ಯವಾಗಿದ್ದು ಹೇಗೆ?

    ಮುಂಬೈ: ಕೆಲವು ವರ್ಷಗಳ ಹಿಂದೆ ಚಿತ್ರವೊಂದು 100 ಕೋಟಿ ಕ್ಲಬ್​ ಸೇರುತ್ತದೆ ಎಂದರೆ ಅದು ದೊಡ್ಡ ವಿಚಾರವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ 100 ಕೋಟಿ ಕಲೆಕ್ಷನ್​ ಸಾಮಾನ್ಯವಾಗಿದ್ದು, 1000 ಕೋಟಿ ಗಳಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ಹೇಳಬಹುದಾಗಿದೆ.ಆದರೆ, ಇಲ್ಲೊಂದು ಚಿತ್ರ ಬಿಡುಗಡೆಗೂ ಮುನ್ನ 1000 ಕೋಟಿ ಕ್ಲಬ್​ ಸೇರುವ ಮೂಲಕ ಬಾಕ್ಸ್​​ಆಫೀಸ್​ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ.

    ಮೊದಲು ಸಿನಿಮಾ 100 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು ಎಂದರೆ ಅದನ್ನು ದೊಡ್ಡ ಗೆಲುವು ಎಂದು ಕರೆಯಲಾಗುತ್ತಿತ್ತು. ಆದರೆ, ವರ್ಷಗಳು ಕಳೆದಂತೆ ಸಿನಿಮಾ ನಿರ್ಮಾಣದ ವೆಚ್ಛ ಹೆಚ್ಚಿತು. ಟಿಕೆಟ್ ಬೆಲೆ ಕೂಡ ಏರಿಕೆ ಆಗಿದೆ. ಹೀಗಾಗಿ, ಸಿನಿಮಾದ ಗೆಲುವನ್ನು ಈಗ 500 ಕೋಟಿ ರೂಪಾಯಿ, 1000 ಕೋಟಿ ರೂಪಾಯಿ ಬೆಂಚ್​ ಮಾರ್ಕ್​ನಲ್ಲಿ ಅಳೆಯಲಾಗುತ್ತಿದೆ. ಈಗ ಪುಷ್ಪ 2 ಸಿನಿಮಾ ರಿಲೀಸ್​ಗೂ ಮೊದಲೇ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.

    ಸುಕುಮಾರ್​ ನಿರ್ದೇಶನದ ಅಲ್ಲು ಅರ್ಜುನ್​ ನಟನೆಯ ಪುಷ್ಪ-2 ಚಿತ್ರವು ಬಿಡುಗಡೆಗೂ ಮುನ್ನ 100ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಪುಷ್ಪ-2 ಚಿತ್ರವು 500 ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿದ್ದು, ಆಂಧ್ರ ಮತ್ತು ತೆಲಂಗಾಣದಲ್ಲಿ ಇದರ ಹಂಚಿಕೆ ಹಕ್ಕು 200 ಕೋಟಿ ರೂಪಾಯಿಗೆ ಮಾರಾಟವಾಗಿರುವುದಾಗಿ ವರದಿಯಾಗಿದೆ.

    ಬಿಡುಗಡೆಗೂ ಮುನ್ನ 1000 ಕೋಟಿ ರೂ. ಕಮಾಯಿ ಮಾಡಿದ ಸಿನಿಮಾ; ಇದು ಸಾಧ್ಯವಾಗಿದ್ದು ಹೇಗೆ?

    ಇದನ್ನೂ ಓದಿ: ಪರಪುರುಷನ ಜತೆ ಪತ್ನಿ ತಿರುಗಾಟ; ನಡು ಬೀದಿಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಪತಿ

    ಹಿಂದಿ ಬೆಲ್ಟ್​ನಲ್ಲೂ ಈ ಚಿತ್ರ ಉತ್ತಮ ಗಳಿಕೆ ಕಾಣುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ, ಆ ಭಾಗದಲ್ಲೂ ಸಿನಿಮಾದ ಹಂಚಿಕೆ ಹಕ್ಕು ದೊಡ್ಡ ಮಟ್ಟಕ್ಕೆ ಮಾರಾಟ ಆಗಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಟಿವಿ ಹಕ್ಕು, ಒಟಿಟಿ ಹಕ್ಕು, ಸಾಂಗ್ ರೈಟ್ಸ್ ಕೂಡ ದೊಡ್ಡ ಮಟ್ಟಕ್ಕೆ ಮಾರಾಟ ಆಗಿದ್ದು, ಸಿನಿಮಾದ ಬಿಸ್ನೆಸ್ 1000 ಕೋಟಿ ರೂಪಾಯಿ ದಾಟಿದೆ. ಪುಷ್ಪ-1 ಸಿನಿಮಾ ಭಾಕ್ಸ್​ಆಫೀಸಿನಲ್ಲಿ 300 ಕೋಟಿಗೂ ಅಧಿಕ ಕಮಾಯಿ ಮಾಡಿತ್ತು. ಇದೀಗ ಪುಷ್ಪ-2 ಚಿತ್ರವು ಭಾಗ-1ಕ್ಕಿಂತ ಮೂರು ಪಟ್ಟು ಹೆಚ್ಚು ಕಮಾಯಿ ಮಾಡುತ್ತದೆ ಎಂದು ಹೇಳಲಾಗಿದ್ದು, ಬಿಡುಗಡೆಯಾದ ಮೇಲೆ ಅನೇಕ ದಾಖಲೆಗಳನ್ನು ಸಿನಿಮಾ ಮುರಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

    ಪ್ರಭಾಸ್​ ನಟನೆಯ ಕಲ್ಕಿ 2898 ಎಡಿ, ಸೂರ್ಯ ನಟನೆಯ ಕಂಗುವ’, ಅಜಯ್​ ದೇವಗನ್​-ರೋಹಿತ್​ ಶೆಟ್ಟಿ ಕಾಂಬಿನೇಷನ್​ನ ಸಿಂಗಂ 3 ಸಿನಿಮಾಗಳು ರಿಲೀಸ್​ಗೆ ರೆಡಿ ಇವೆ. ಇವುಗಳಿಗಿಂತ ಹೆಚ್ಚಿನ ನಿರೀಕ್ಷೆ ಪುಷ್ಪ 2 ಚಿತ್ರದ ಮೇಲೆ ಇದೆ. ಸುಕುಮಾರ್​ ನಿರ್ದೇಶನದ ಪುಷ್ಪ 2 ಚಿತ್ರದ ಟೀಸರ್​ ನಾಯಕ ಅಲ್ಲು ಅರ್ಜುನ್ ಜನ್ಮದಿನದ ಪ್ರಯುಕ್ತ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಆಗಸ್ಟ್ 15ರಂದು ಚಿತ್ರ ವಿಶ್ವದಾದ್ಯಂತ ತೆರೆ ಕಾಣಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts