More

    ಅತಿ ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ ಖ್ಯಾತ ಯೂಟ್ಯೂಬರ್ ಆ್ಯಂಗ್ರಿ ರಾಂಟ್​ಮ್ಯಾನ್​

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನವಾಗಿ ರಿವ್ಯೂ ನೀಡುವ ಮೂಲಕ ಜನಪ್ರಿಯ ಯೂಟ್ಯೂಬರ್​ ಆಗಿ ಗುರುತಿಸಿಕೊಂಡಿದ್ದ ಅಭ್ರದೀಪ್ ಸಹಾ (ಆ್ಯಂಗ್ರಿ ರಾಂಟ್‌ಮ್ಯಾನ್) ಅತಿ ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಮೃತರಿಗೆ 27 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.

    ಕಳೆದ ಕೆಲ ದಿನಗಳ ಹಿಂದೆ ನಿಯಾನ್​ ಮ್ಯಾನ್ ಶಾರ್ಟ್ಸ್​​ ಎಂಬುವವರು ಶೀಘ್ರದಲ್ಲೇ ಅಭ್ರದೀಪ್ ಸಹಾ ಓಪನ್​ ಹಾರ್ಟ್​ ಸರ್ಜರಿಗೆ ಒಳಗಾಗಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದರು. ಬಳಿಕ ಏಪ್ರಿಲ್​ 15ರಂದು ನಿಯಾನ್​ ಅಭ್ರದೀಪ್​ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ಹೇಳಿದ್ದರು.

    ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಾಜ್​ ಎಂಬುವವರು ಟ್ವೀಟ್​ ಮಾಡಿದ್ದು, ಭಾರವಾದ ಹೃದಯದಿಂದ ನಾನು ಆಭ್ರದೀಪ್​ (ಆ್ಯಂಗ್ರಿ ರಾಂಟ್‌ಮ್ಯಾನ್) ನಿನ್ನೆ (ಏಪ್ರಿಲ್ 16) ರಾತ್ರಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇನೆ. ಪ್ರತಿಯೊಬ್ಬರ ಮುಖದಲ್ಲೂ ಅವರು ನಗು ತರಿಸುತ್ತಿದ್ದ ರೀತಿ ಇನ್ನು ಮುಂದೆ ನೆನಪಾಗಿ ಉಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ.

    ಅಭ್ರದೀಪ್​ ಸಾವಿನ ಕುರಿತಂತೆ ಅವರ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಏಪ್ರಿಲ್​ 16ರಂದು ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅತಿ ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ ಆ್ಯಂಗ್ರಿ ರಾಂಟ್​ಮ್ಯಾನ್​ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.

    ಯಾರು ಈ ಆ್ಯಂಗ್ರಿ ರಾಂಟ್​ಮ್ಯಾನ್​?

    ಯೂಟ್ಯೂಬ್​ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ, ಕ್ರೀಡೆ ಕುರಿತಾಗಿ ರಿವ್ಯೂ ಕೊಡುವ ಮೂಲಕ ಫೇಮಸ್​ ಆಗಿರುವ ಅಭ್ರದೀಪ್​ (ಆ್ಯಂಗ್ರಿ ರಾಂಟ್​ಮ್ಯಾನ್​) ವಿಮರ್ಶೆ ಮಾಡುತ್ತಿದ್ದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದ್ದವು. ಅವರ ಯೂಟ್ಯೂಬ್​ ಚಾನೆಲ್​ನಲ್ಲಿ 4.81 ಲಕ್ಷ ಚಂದಾದಾರರನ್ನು ಹೊಂದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts