More

    ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ಪಾಂಡ್ಯ; ಹಾರ್ದಿಕ್​ಗೆ ಕಠಿಣ ಷರತ್ತು ಹಾಕಿದ ಬಿಸಿಸಿಐ

    ಮುಂಬೈ: ಕಳೆದ ಕೆಲ ತಿಂಗಳಿನಿಂದ ಮುಂಬೈ ಇಂಡಿಯನ್ಸ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಒಂದಿಲ್ಲೊಂದು ವಿಚಾರಕ್ಕೆ ಎಲ್ಲರ ಗಮನ ಸೆಳೆಯುತ್ತಿದ್ದು, ಇನ್ನಿಲ್ಲದಂತೆ ಟ್ರೋಲ್​ಗೆ ಗುರಿಯಾಗುತ್ತಿದ್ದಾರೆ. ಇದೀಗ ಮುಂಬರುವ ಟಿ-20 ವಿಶ್ವಕಪ್​ಗೆ ಸಂಬಂಧಿಸಿದಂತೆ ಬಿಸಿಸಿಐ ಹಾರ್ದಿಕ್​ ಪಾಂಡ್ಯಗೆ ಷರತ್ತು ಒಂದನ್ನು ಹಾಕಿದ್ದು, ಅದರಲ್ಲಿ ಪಾಸ್​​​ ಆದರೆ ಮಾತ್ರ ತಂಡದಲ್ಲಿ ಸ್ಥಾನ ಎಂದು ಹೇಳಲಾಗಿದೆ.

    ಟಿ-20 ವಿಶ್ವಕಪ್​ಗೆ ತಂಡ ಆಯ್ಕೆ ಮಾಡುವ ಸಂಬಂಧ ಸಭೆ ಸೇರಿದ್ದ ಟೀಮ್​ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​, ನಾಯಕ ರೋಹಿತ್​ ಶರ್ಮಾ, ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್​ ಅಗರ್ಕರ್​ ಈ ನಿರ್ಣಯಕ್ಕೆ ಬಂದಿದ್ದು, ಹಾರ್ದಿಕ್​ ಪಾಂಡ್ಯ ತಂಡಕ್ಕೆ ವಾಪಸ್​ ಆಗಬೇಕಾದರೆ ಮತ್ತೊಂದು ಸುತ್ತಿನ ಸವಾಲು ಎದುರಿಸಬೇಕಾಗುತ್ತದೆ ಎಂದು ತಿಳಿದು ಬಂದಿದೆ.

    Rohit hardik Shivam

    ಇದನ್ನೂ ಓದಿ: ಅಮೇಥಿಯಿಂದ ಚುನಾವಣೆಗೆ ಸ್ಪರ್ಧೆ; ಇದು ಬಿಜೆಪಿಯವರ ಪ್ರಶ್ನೆ ಎಂದು ಕಿಡಿಕಾರಿದ ರಾಹುಲ್

    ಹಾಲಿ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್​ ನಾಯಕನಾಗಿರುವ ಹಾರ್ದಿಕ್​ ಪಾಂಡ್ಯ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹಾಲಿ ಟೂರ್ನಿಯಲ್ಲಿ 26.20ರ ಸರಾಸರಿಯಲ್ಲಿ 131 ರನ್​ ಸಿಡಿಸಿರುವ ಪಾಂಡ್ಯ ಬೌಲಿಂಗ್​ನಲ್ಲೂ ಅಷ್ಟಾಗಿ ಏನು ಪ್ರದರ್ಶನ ನೀಡಿಲ್ಲ. ಒಂದು ವೇಳೆ ಹಾರ್ದಿಕ್​ ಪಾಂಡ್ಯ ಟಿ-20ಯಲ್ಲಿ ಸ್ಥಾನ ಪಡೆಯಬೇಕಾದರೆ ಅವರು ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ರಾಹುಲ್​, ರೋಹಿತ್​ ಹಾಗೂ ಅಜಿತ್​ ನಡುವೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.

    ಒಂದು ವೇಳೆ ಹಾರ್ದಿಕ್​ ಪಾಂಡ್ಯ ಟಿ-20 ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರೆ ಅವರ ಬದಲಿಗೆ ಆಲ್ರೌಂಡರ್​ ಶಿವಂ ದುಬೆ ಅವರನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗಿದೆ. ಹಾಲಿ ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ದುಬೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ, ಆಲ್ರೌಂಡರ್​ ಆಗಿರುವ ದುಬೆ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬ್ಯಾಟ್​ ಮೂಲಕವೇ ಹೆಚ್ಚು ಸೌಂಡ್ ಮಾಡುತ್ತಿದ್ದು, ಅವರ ಆಯ್ಕೆಗೆ ಬೌಲಿಂಗ್​ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಅಂತಿಮವಾಗಿ ಬಿಸಿಸಿಐ ಆಯ್ಕೆ ಸಮಿತಿ ಯಾರಿಗೆ ಮಣೆ ಹಾಕುತ್ತದೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts