ವಿಶ್ವದ ಟಾಪ್​ 5 ಅತ್ಯಂತ ಸಂತೋಷದಾಯಕ ದೇಶಗಳಿವು!; ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ? | Happiest Countries

dk - 2025-03-21T182449.118
Published on

Happiest Countries : ಸಾಮಾನ್ಯವಾಗಿ ಜಗತ್ತಿನಲ್ಲಿನ ರಾಷ್ಟ್ರಗಳು ವಿವಿಧ ಕ್ಷೇತ್ರಗಳಲ್ಲಿ ಯಾವ ಸ್ಥಾನದಲ್ಲಿದೆ ಎಂದು ಪಟ್ಟಿ ಮಾಡಲಾಗುತ್ತದೆ. ಅದೇ ರೀತಿ ಈ ಪಟ್ಟಿ ಸಲ್ಪ ವಿಭಿನ್ನವಾಗಿದ್ದರೂ ಇದು ಸತ್ಯ.

ಹೌದು, ಅಂತರಾಷ್ಟ್ರಿಯ ಸಂತೋಷ ದಿನದ ಅಂಗವಾಗಿ ವಿಶ್ವಸಂಸ್ಥೆಯ ವಿಶ್ವದ ಅತ್ಯಂತ ಸಂತೋಷದಾಯಕ ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಿದೆ(ವಿಶ್ವ ಸಂತೋಷ ವರದಿ 2025). 2025ರ ಈ ಪಟ್ಟಿಯಲ್ಲಿ 147 ದೇಶಗಳನ್ನು ಸೇರಿಸಲಾಗಿದೆ, ಇದರಲ್ಲಿ ಅನೇಕ ಯುದ್ಧಪೀಡಿತ ದೇಶಗಳು ಸಹ ಸೇರಿವೆ.

ಈ ವರದಿಯಲ್ಲಿ ಸೇರಿಸಿಲಾದ 147 ದೇಶಗಳನ್ನು ಅಲ್ಲಿನ ಜನರ ಜೀವನಮಟ್ಟವನ್ನು ಆಧಾರಿಸಿ ಶ್ರೇಣಿಸಲಾಗಿದೆ. ಇನ್ನು ಈ ವರದಿಯ ಪಟ್ಟಿಯನ್ನು ಸಿದ್ಧ ಮಾಡಲು ಜನರು ತಮ್ಮ ಜೀವನದಲ್ಲಿ ಎಷ್ಟು ಸಂತೋಷವಾಗಿದ್ದಾರೆ. ಅವರ ಬಳಿ ಎಷ್ಟು ಹಣವಿದೆ, ಅವರ ಆರೋಗ್ಯ ಹೇಗಿದೆ ಮತ್ತು ಅವರು ಎಷ್ಟು ಸ್ವತಂತ್ರರರು ಎಂಬ ಪ್ರಶ್ನೆಗಳನ್ನು ಕೇಳಲಾಗಿತ್ತು.

ಟಾಪ್​ 5 ಸ್ಥಾನ ಪಡೆದ ದೇಶಗಳು ಇವು..?

ವಿಶ್ವ ಸಂತೋಷ ವರದಿಯಲ್ಲಿ ಫಿನ್ಲ್ಯಾಂಡ್​ ದೇಶ ಮೊದಲ ಸ್ಥಾನ ಪಡೆದಿದೆ. ಅಂದರೆ ಇಲ್ಲಿನ ಜನರನ್ನು ಅತ್ಯಂತ ಸಂತೋಷದಾಯಕರೆಂದು ಪರಿಗಣಿಸಲಾಗಿದೆ. ಫಿನ್ಲ್ಯಾಂಡ್​ ತನ್ನ ಶ್ರೇಯಾಂಕವನ್ನು ಉಳಿಸಿಕೊಂಡಿರುವುದು ಸತತ ಎಂಟನೇ ವರ್ಷ.

ಇನ್ನು ಫಿನ್ಲ್ಯಾಂಡ್ ನಂತರದ ಸ್ಥಾನವನ್ನು​ ಡೇನ್ಮಾರ್ಕ್​ ದೇಶ ಪಡೆದಿದೆ. ಇದರ ನಂತರ, ಐಸ್ಲ್ಯಾಂಡ್, ಸ್ವೀಡನ್ ಮತ್ತು ನೆದರ್ಲ್ಯಾಂಡ್ಸ್ ಸ್ಥಾನ ಪಡೆದಿವೆ.

ಭಾರತ 188ನೇ ಸ್ಥಾನ

ಈ ಪಟ್ಟಿಯಲ್ಲಿನ ಭಾರತ 118 ನೇ ಸ್ಥಾನ ಪಡೆದಿದೆ. ಇನ್ನು ಇತರ ದೇಶಗಳ ಪೈಕಿ ಈ ಸ್ಥಾನವು ತುಂಬಾ ಕೆಟ್ಟದಾಗಿದೆ. 2024ಕ್ಕೆ ಹೋಲಿಸಿದ್ರೆ ಈ ಬಾರಿ ಭಾರತದ ಶ್ರೇಯಾಂಕ ಸಲ್ಪ ಸುಧಾರಿಸಿದೆ. ಏಕೆಂದರೆ ಕಳೆದ ಬಾರಿ ನಮ್ಮ ದೇಶ 126ನೇ ಸ್ಥಾನದಲ್ಲಿತ್ತು ಎಂದು ವದಿಯಾಗಿದೆ. ವಿಶ್ವದ ಅತ್ಯಂತ ಸಂತೋಷದಾಯಕ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನದ ಸ್ಥಾನ ಭಾರತಕ್ಕಿಂತ ಉತ್ತಮವಾಗಿದೆ. ಭಾರತಕ್ಕಿಂತ 9 ಸ್ಥಾನ ಮೇಲಿದೆ, ಅಂದರೆ 109 ನೇ ಸ್ಥಾನದಲ್ಲಿದೆ.ಅಲ್ಲದೆ, ಇದರಲ್ಲಿ ಉಕ್ರೇನ್, ಪ್ಯಾಲೆಸ್ಟೈನ್, ಇರಾಕ್, ಇರಾನ್‌ನಂತಹ ದೇಶಗಳು ಸಹ ಸೇರಿವೆ. ಈ ದೇಶಗಳಲ್ಲಿ ರಾಜಕೀಯ ಮತ್ತು ಆರ್ಥಿಕ ವಿಷಯಗಳು ಸಹ ಪ್ರಾಬಲ್ಯ ಹೊಂದಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net