Treasure : ಯಾರೊದೋ ಜಮೀನಿನಲ್ಲಿ ಅಥವಾ ಮನೆಯಲ್ಲಿ ನೆಲವನ್ನು ಅಗೆಯುವಾಗ ನಿಧಿ ಸಿಕ್ಕಿದೆ ಎಂದು ನೀವೂ ಕೇಳಿರಬಹುದು ಇಲ್ಲವೆ ಸಿನಿಮಾಗಳಲ್ಲಿ ನೋಡಿರಬಹುದು. ರಾತ್ರೋರಾತ್ರಿ ಶ್ರೀಮಂತರಾಗಿದ್ದಾರೆ, ಅದು ಹೇಗೆ ಸಾಧ್ಯ? ಒಂದು ವೇಳೆ ಅವರಿಗೆ ನಿಧಿ ಸಿಕ್ಕಿರಬಹುದೆ? ಎಂದು ಒಂದಲ್ಲ ಒಂದು ಸಮಯದಲ್ಲಿ ಎಲ್ಲರೂ ಯೋಚಿಸಿದ್ದೇವೆ. ಇದೀಗ ಇಂತಹ ಘಟನೆ ನಮ್ಮೆದುರಿಗೆ ನಡೆದರೆ ಸರ್ಕಾರ ಏನು ಮಾಡುತ್ತೆ, ನಿಧಿ ಯಾರ ಪಾಲಾಗುತ್ತದೆ ಎಂಬ ಮಾಹಿತಿ ತಿಳಿಯೋಣ.
ಇದನ್ನೂ ಓದಿ:ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೆ ಸೂಚನೆ
ಇಂತಹ ನಿಧಿಗಳಿಂದ ಸಿನಿಮಾಗಳಲ್ಲಿ ಶ್ರೀಮಂತರಾಗಬಹುದು. ಆದರೆ, ನಿಜ ಜೀವನದಲ್ಲಿ ಆಗಿಲ್ಲ. ಇದಕ್ಕೆ ಕಾನೂನಿದೆ. ಸರ್ಕಾರ ಕೆಲ ಕ್ರಮಗಳನ್ನು ಕೈಗೊಳ್ಳುತ್ತೆ. ಒಂದು ವೇಳೆ ನಿಧಿ ಸಿಕ್ಕರೆ ಸಂಪೂರ್ಣ ಆಸ್ತಿಯನ್ನು ಅಥವಾ ನಿಧಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ.
ನಿಧಿಯ ಮೇಲೆ ಸರ್ಕಾರಕ್ಕೆ ಸಂಪೂರ್ಣ ಹಕ್ಕಿದೆ
ಮೊದಲನೆಯದಾಗಿ, ಭಾರತದಲ್ಲಿ ನಿಧಿಯನ್ನು ಅಗೆಯುವ ಹಕ್ಕು ಸರ್ಕಾರಕ್ಕೆ ಬಿಟ್ಟರೆ ಯಾರಿಗೂ ಇಲ್ಲ. ಒಂದು ವೇಳೆ ನಿಧಿ ಅಗೆಯವುದು ಕಂಡುಬಂದರೆ ಕಾನೂನುಕ್ರಮ ಕೈಗೊಳ್ಳಬೇಕಾಗುತ್ತದೆ. ಯಾಕೆಂದ್ರೆ, ಇದು ನಮ್ಮ ದೇಶದಲ್ಲಿ ಕಾನೂನು ಬಾಹಿರ. 1960 ರಲ್ಲಿ ಈ ಬಗ್ಗೆ ಒಂದು ಕಾನೂನನ್ನು ರಚಿಸಲಾಯಿತು. ಅದರ ಅಡಿಯಲ್ಲಿ ಭಾರತೀಯ ಪುರಾತತ್ವ ಇಲಾಖೆಯು ಉತ್ಖನನ ಮಾಡುವ ಸಂಪೂರ್ಣ ಹಕ್ಕನ್ನು ಹೊಂದಿದೆ ಮತ್ತು ಪುರಾತತ್ತ್ವ ಶಾಸ್ತ್ರದ ಪ್ರಾಮುಖ್ಯತೆಯ ವಿಷಯಗಳಿಗೆ ಅದು ಮಾತ್ರ ಅಧಿಕಾರ ಹೊಂದಿದೆ. ನೆಲದಡಿಯಲ್ಲಿ ಅಗೆಯುವಾಗ ಯಾವುದೇ ನಿಧಿ ಅಥವಾ ಚಿನ್ನ ಕಂಡುಬಂದರೆ ಅದು ಸರ್ಕಾರಕ್ಕೆ ಸೇರಿದೆ. ಅದು ಯಾರ ಜಮೀನಾದರೂ ಸರಿ.
ನಿಧಿ ಕಂಡು ಬಂದರೆ ಏನು ಮಾಡಬೇಕು?
ನಿಮ್ಮ ಮನೆಯನ್ನು ಅಗೆಯುವಾಗ ಯಾವುದೇ ನಿಧಿ ಅಥವಾ ಚಿನ್ನ ಕಂಡುಬಂದರೆ, ಅಂತಹ ಸಂದರ್ಭದಲ್ಲಿ 1971 ರಲ್ಲಿ ಮಾಡಿದ ನಿಧಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಕಾಯಿದೆಯ ಪ್ರಕಾರ, ನಿಧಿಯನ್ನು ಕಂಡುಕೊಂಡ ವ್ಯಕ್ತಿಯು ಅದರ ಬಗ್ಗೆ ಪೊಲೀಸರಿಗೆ ಅಥವಾ ಆಡಳಿತಕ್ಕೆ ತಿಳಿಸಬೇಕು. ನಂತರ ಆಡಳಿತವು ಅದನ್ನು ವಶಪಡಿಸಿಕೊಂಡು ಸರ್ಕಾರಿ ಖಜಾನೆಯಲ್ಲಿ ಜಮಾ ಮಾಡುತ್ತದೆ.
ಯಾವುದೇ ವಸ್ತು ಪುರಾತತ್ತ್ವ ಶಾಸ್ತ್ರದ ಮಹತ್ವದ್ದಾಗಿದ್ದರೆ ಅದನ್ನು ಅಧ್ಯಯನಕ್ಕಾಗಿ ಪುರಾತತ್ವ ಇಲಾಖೆಗೆ ಕಳುಹಿಸಲಾಗುತ್ತದೆ. ಆದಾಗ್ಯೂ, ಒಬ್ಬ ವ್ಯಕ್ತಿಯು ಈ ಚಿನ್ನ ಅಥವಾ ನಿಧಿ ತನ್ನದು ಎಂದು ಹೇಳಿಕೊಂಡರೆ, ಆ ವಿಷಯವು ನ್ಯಾಯಾಲಯದಲ್ಲಿ ಇತ್ಯರ್ಥವಾಗುತ್ತದೆ. ಆ ವ್ಯಕ್ತಿಯು ನಿಧಿ ತನ್ನದು ಎಂದು ಸಾಬೀತುಪಡಿಸಿದರೆ ಅದನ್ನು ಅವನಿಗೆ ಹಸ್ತಾಂತರಿಸಬಹುದು. ಅಲ್ಲದೆ, ಸುಳ್ಳು ಹೇಳುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.(ಏಜೆನ್ಸೀಸ್)
ಫೋನ್ ರಿಸೀವ್ ಮಾಡಿದ ಕೂಡಲೇ ‘ಹಲೋ’ ಅನ್ನೋದೇಕೆ?; ಈ ಪದ ಹುಟ್ಟಿಕೊಂಡಿದ್ದೇಗೆ ಗೊತ್ತೆ! | Hello