ಫೋನ್​ ರಿಸೀವ್​ ಮಾಡಿದ ಕೂಡಲೇ 'ಹಲೋ' ಅನ್ನೋದೇಕೆ?; ಈ ಪದ ಹುಟ್ಟಿಕೊಂಡಿದ್ದೇಗೆ ಗೊತ್ತೆ! | Hello

dk-2025-03-18t125913698-67d920d692070
Published on

Hello: ಜಗತ್ತಿನೆಲ್ಲೇಡೆ ಫೋನ್​ ಸ್ವೀಕರಿದ ಅಥವಾ ಮಾತನಾಡಿದ ಕೂಡಲೇ ಯಾವುದೇ ಭಾಷೆಯಲ್ಲಿಯಾದರೂ ಸಾಮಾನ್ಯವಾಗಿ ಮೊದಲು ಉಚ್ಚರಿಸುವ ಪದವೇ 'ಹಲೋ' ಎಂದು. ಆಗಾದರೆ ಈ ಪದದ ಅರ್ಥ ಏನು? ಎಲ್ಲಿಂದ ಈ ಪದ ಬಂತು? ಪ್ರಚಲಿತವಾದಸದ್ದೇಗೆ? ಎಂಬುದು ತಿಳಿಯೋಣ ಬನ್ನಿ.. ​

ಹಲೋ ಎಂಬುದು ಪದಕ್ಕೆ ಎರಡು ಮೂಲಗಳಿಂದ ಬಂದಿದೆ ಎಂದು ಹೇಳಬಹುದು. ಆಕ್ಸಫರ್ಡ್​ ಇಂಗ್ಲಿಷ್​ ಡಿಕ್ಷನರಿ ಪ್ರಕಾರ, ಹಲೋ ಎನ್ನುವ ಪದ Holla, Hollo ಎಂಬ ಎರಡು ಪದಗಳಿಂದ ಬಂದಿದೆ. ಈ ಪದಗಳ ಅರ್ಥ ಸಾಮಾನ್ಯವಾಗಿ ದೂರದಲ್ಲಿನ ವ್ಯಕ್ತಿಯನ್ನು ಕರೆಯೋದಕ್ಕೆ ಈ ಪದಗಳನ್ನು ಬಳಸಲಾಗುತ್ತದೆ. ಇನ್ನು ಅಮೆರಿಕಾ-ಬ್ರಿಟಿಷ್ ಪತ್ರಕರ್ತ ಬಿಲ್​ ಬ್ರಿಸನ್​ ಪ್ರಕಾರ, ​ಹಲೋ ಎಂಬ ಪದವು ಹಳೆಯ ಇಂಗ್ಲಿಷ್ ನುಡಿಗಟ್ಟು 'ಹೇಲ್ ಬಿ ಥೌ'( Hale be thou) ನಿಂದ ಬಂದಿದೆ. ಇದರ ಅರ್ಥ 'ಆರೋಗ್ಯವಾಗಿರಲು ಆಶಿಸುವುದು' ಎಂದು.

ಒಂದು ರೀತಿಯಲ್ಲಿ, ಈ ಪದವು ದೂರವಾಣಿಯ ಆವಿಷ್ಕಾರಕ್ಕೂ ಮುಂಚೆಯೇ ಅಸ್ತಿತ್ವದಲ್ಲಿತ್ತು. ಹಾಗಾದರೆ, ಫೋನ್ ಕರೆ ಸಂಭಾಷಣೆಯನ್ನು ಪ್ರಾರಂಭಿಸಲು 'ಹಲೋ' ಪದವನ್ನು ಬಳಸಲು ಯಾರು ನಿರ್ಧರಿಸಿದರು ಎಂಬ ಪ್ರಶ್ನೆ ಮೂಡಿದೆ?

ಹಲೋ ಮತ್ತು ಅಹೋಯ್ ನಡುವಿನ ಸ್ಪರ್ಧೆ!

ಅಲೆಕ್ಸಾಂಡರ್ ಗ್ರಹಾಂ ಬೆಲ್ 1876 ರಲ್ಲಿ ದೂರವಾಣಿಯನ್ನು ಕಂಡುಹಿಡಿದರು. ದೂರವಾಣಿಯ ಆರಂಭಿಕ ದಿನಗಳಲ್ಲಿ ಫೋನ್‌ನಲ್ಲಿ ಸಂಭಾಷಣೆಯನ್ನು ಪ್ರಾರಂಭಿಸಲು ಯಾವುದೇ ನಿರ್ದಿಷ್ಟ ಪದವಿರಲಿಲ್ಲ ಎಂದು ಹೇಳಲಾಗಿದೆ.

ಎನ್. ಕ್ಯಾಸನ್ ಅವರ "ದಿ ಹಿಸ್ಟರಿ ಆಫ್ ದಿ ಟೆಲಿಫೋನ್" ಪುಸ್ತಕದ ಪ್ರಕಾರ, ಗ್ರಹಾಂಬೆಲ್ "ಅಹೋಯ್" ಎಂಬ ಪದವನ್ನು ಫೋನ್​ನಲ್ಲಿ ಮೊದಲೇನೆಯಾಗಿ ಬಳಸಿದ್ದರು ಎಂದು ಹೇಳಲಾಗಿದೆ. ಹೀಗಾಗಿ, ಅಹೋಯ್ ಎನ್ನುವ ಪದವನ್ನು ಗ್ರಹಾಂ ಬೆಲ್​ ಬೆಂಬಲಿಸಿದ್ದರು ಎಂದು ಪುಸ್ತಕದಲ್ಲಿ ದಾಖಲಾಗಿದೆ.

ಕೇಂಬ್ರಿಡ್ಜ್ ನಿಘಂಟಿನ ಪ್ರಕಾರ, ಅಹೋಯ್ ಎಂದರೆ ಇತರರ ಗಮನ ಸೆಳೆಯಲು ಮಾಡುವ ಕೂಗು. ಈ ಪದವನ್ನು ವಿಶೇಷವಾಗಿ ದೋಣಿಗಳಲ್ಲಿ ಪ್ರಯಾಣಿಸುವ ಜನರು ಬಳಸುತ್ತಿದ್ದರು. ಆದರೆ, ಥಾಮಸ್ ಅಲ್ವಾ ಎಡಿಸನ್ ಅವರ ಕಾರಣದಿಂದಾಗಿ 'ಹಲೋ' ಶುಭಾಶಯವಾಗಿ ಜನಪ್ರಿಯವಾಯಿತು. ಹೀಗಾಗಿ, ಇದು ನಮ್ಮ ದೈನಂದಿನ ಹೇಳಿಕೆಗಳಲ್ಲಿ ಒಂದಾಗಿ ಮಾರ್ಪಟ್ಟಿದೆ ಎಂದು ಹೇಳಲಾಗಿದೆ.

ಅಹೋಯ್ ಎಂಬ ಪದವು ಸಮುದ್ರ ಮತ್ತು ಕಡಲ್ಗಳ್ಳರೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ ಗಂಭೀರ ಚರ್ಚೆಗಳಿಗೆ ಅದು ಸರಿಯಾದ ಪದವಲ್ಲ ಎಂದು ಪರಿಗಣಿಸಲಾಯಿತು. ಇದಲ್ಲದೆ, ಎಡಿಸನ್ ಹಲೋ ಎಂಬುದು ಬಹಳ ತಟಸ್ಥ ಪದವಾಗಿದ್ದು ಅದನ್ನು ವಿವಿಧ ಶುಭಾಶಯಗಳಾಗಿ ಬಳಸಬಹುದು ಎಂದು ನಂಬಿದ್ದರು. ಹೀಗಾಗಿ ಮುಂದಿನ ದಿನಗಳಲ್ಲಿ ಹಲೋ ಎಂಬ ಪದ ಪ್ರಚಲಿತಕ್ಕೆ ಬಂತು. ಅಲ್ಲದೆ, ಸಂವಾದ ಮತ್ತು ಚರ್ಚೆಯ ಮೂಲಕ ಸಂಘರ್ಷಗಳನ್ನು ಪರಿಹರಿಸುವ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ನವೆಂಬರ್ 21 ರಂದು ವಿಶ್ವ ಹಲೋ ದಿನವನ್ನು ಆಚರಿಸಲಾಗುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net