ಈ ದೇಶದಲ್ಲಿ ಭಿಕ್ಷುಕರು ಭಿಕ್ಷೆ ಬೇಡಲು ಸರ್ಕಾರದ ಲೈಸನ್ಸ್​ ಪಡೆಯಲೇಬೇಕು!; ಎಲ್ಲಿ ಅಂತೀರಾ?: ಇಲ್ಲಿದೆ ಮಾಹಿತಿ | Beggars

dk - 2025-03-17T193540.239
Published on

Beggars: ಸಾಮಾನ್ಯವಾಗಿ ಭಾರತ ಸೇರಿ ವಿವಿಧ ಬಹತೇಕ ದೇಶಗಳಲ್ಲಿ ಭಿಕ್ಷುಕರ ಭಿಕ್ಷಟನೆ ಸಾಮಾನ್ಯವಾಗಿದೆ. ಅಲ್ಲದೆ, ಭಿಕ್ಷಟನೆಗೆ ಸಂಬಂಧಿಸಿದ ಕಠಿಣ ಕಾನೂನುಗಳು ಬಿಗಿಗೊಳಿಸಿರುವುದು ಕಡಿಮೆ ಇದೆ. ಎಲ್ಲೋ ಅರಬೀಯಾ ರಾಷ್ಟ್ರಗಳಲ್ಲಿ ಮಾತ್ರ ಬಿಕ್ಷಟನೆ ರದ್ದು ಮತ್ತು ಉಲ್ಲಂಘಿಸಿದ್ರೆ ಕಠಿಣ ಕಾನೂನು ಜಾರಿ ಮಾಡಲಾಗಿದೆ. ಇದೀಗ ಯುರೋಪ್​ ಖಂಡದ ದೇಶವೊಂದರಲ್ಲಿ ಭಿಕ್ಷೆ ಬೇಡಲು ಸರ್ಕಾರದಿಂದ ಪರವಾನಿಗೆ ಪಡಿಯಬೇಕಾಗಿದೆ. ಎಲ್ಲಿ, ಯಾವ ದೇಶ ಅಂತೀರಾ.. ನೋಡೋಣ ಬನ್ನಿ..

ಯಾವ ದೇಶ? ನಿಯಮವೇನು ಗೊತ್ತೆ!

ಯುರೋಪಿನಲ್ಲಿ ಸ್ವೀಡನ್ ದೇಶದಲ್ಲಿನ ಎಸ್ಕಿಲ್‌ಸ್ಟುನಾ ಒಂದು ಸ್ಥಳವಿದೆ. ಕೆಲವು ವರ್ಷಗಳ ಹಿಂದೆ, ಇಲ್ಲಿ ಭಿಕ್ಷುಕರಿಗೆ ಪರವಾನಗಿ ಶುಲ್ಕವನ್ನು ಕಡ್ಡಾಯಗೊಳಿಸಲಾಗಿದೆ. ಯಾರಾದರೂ ಭಿಕ್ಷೆ ಬೇಡಲು ಬಯಸಿದರೆ ಮೊದಲು ಅನುಮತಿ ಪಡೆಯಬೇಕು ಎಂಬುದು ಅದರ ನಿಯಮವಾಗಿದೆ.

ಸಣ್ಣ ಶುಲ್ಕವನ್ನು ಪಾವತಿಸಿದ ನಂತರವೇ ಅವರಿಗೆ ಈ ಅನುಮತಿ ಸಿಗುತ್ತದೆ. ಈ ನಿಯಮವನ್ನು 2019ರಲ್ಲಿ ಎಸ್ಕಿಲ್‌ಸ್ಟುನಾದಲ್ಲಿ ಜಾರಿಗೆ ತರಲಾಯಿತು. ಈ ನಿಯಮದ ಅಡಿಯಲ್ಲಿ, ಭಿಕ್ಷುಕನಿಗೆ ಮಾನ್ಯವಾದ ಗುರುತಿನ ಚೀಟಿ ಸಿಗುತ್ತದೆ. ಬಳಿಕವಷ್ಟೆ ಭಿಕ್ಷೆ ಬೇಡಬೇಕು.

ಇದಲ್ಲದೆ, ನಗರದಲ್ಲಿ ಎಲ್ಲಿ ಮತ್ತು ಎಷ್ಟು ಭಿಕ್ಷುಕರು ಭಿಕ್ಷೆ ಬೇಡುತ್ತಿದ್ದಾರೆ ಎಂಬುದನ್ನು ಉಸ್ತುವಾರಿ ಜನರಿಗೆ ತಿಳಿಯುವುದು ಸುಲಭವಾಗುತ್ತದೆ. ಅಂತಹ ಜನರನ್ನು ಸಂಪರ್ಕಿಸಲು ಇದು ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳುತ್ತಿದೆ.

ಸ್ಥಳೀಯರು ಹೇಳೊದೇನು..?

ಇಲ್ಲಿನ ಪತ್ರಿಕೆಗಳ ಪ್ರಕಾರ, ಈ ನಿಯಮ ಜಾರಿಗೆ ಬಂದ ನಂತರ, ಭಿಕ್ಷುಕರ ಸಂಖ್ಯೆ ಕಡಿಮೆಯಾಗುತ್ತಿದೆ ಮತ್ತು ಈ ಜನರು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಕೆಲವರು ಹಣ್ಣುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಆದಾಗ್ಯೂ, ಅನೇಕ ಜನರು ಈ ನಿಯಮವನ್ನು ವಿರೋಧಿಸಿದ್ದಾರೆ ಮತ್ತು ಇಲ್ಲಿನ ಆಡಳಿತ ವ್ಯವಸ್ಥೆಯಿಂದಾಗಿ ಜನರು ಭಿಕ್ಷೆ ಬೇಡುವುದು ಅನಿವಾರ್ಯವಾಗುತ್ತಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net