Ticket Price: ಕಾಲಕಾಲಕ್ಕೆ ಅನುಗುಣವಾಗಿ ಮನುಷ್ಯ ಅನೇಕ ಸಾಧನ ಮತ್ತು ಯಂತ್ರಗಳನ್ನು ಅವಿಷ್ಕಾರ ಮಾಡಿಕೊಂಡು ಬಂದಿದ್ದಾನೆ. ಅದರಲ್ಲಿ ಮುಖ್ಯವಾಗಿ ರೈಟ್ ಸಹೋದರರು ಮಾಡಿದ ವಿಮಾನದ ಅನ್ವವೇಷಣೆ. ಹೌದು,ಸಾರಿಗೆ ವ್ಯವಸ್ಥೆಯಲ್ಲಿ ಇದು ಅತ್ಯಂತ ದೊಡ್ಡ ಮೈಲಿಗಲ್ಲಿ ಎಂದೇ ಹೇಳಬಹುದು.
ಈ ಕಾಲದಲ್ಲಿ ದೂರದ ಗಮ್ಯಸ್ಥಾನಗಳಿಗೆ ಅತ್ಯಂತ ಸುರಕ್ಷಿತವಾಗಿ ಮತ್ತು ಬೇಗನೆ ಕರೆದೊಯ್ಯುವ ಸಾರಿಗೆ ಎಂದರೆ ಅದು ವಿಮಾನ. ಒಂದು ಕಾಲದಲ್ಲಿ ಶ್ರೀಮಂತರಿಗೆ ಮಾತ್ರ ಸಿಮೀತವಾಗಿದ್ದ ವಈ ವಿಮಾನಗಳ ಪ್ರಯಾಣ ಇದೀಗ ಎಲ್ಲ ವರ್ಗದ ಜನರು ಕೂಡ ಟ್ರಾವೆಲ್ ಮಾಡಬಹುದಾಗಿದೆ. ಇನ್ನು ವಿಮಾನದ ಬಗ್ಗೆ ತಿಳಿಯುವುದಾರೆ ಮೊದಲಿಗೆ 1914ರಲ್ಲಿ ಮೊದಲ ಬಾರಿಗೆ ಆಕಾಶದಲ್ಲಿ ವಿಮಾವೊಂದು ಹಾರಾಟ ಮಾಡಿತ್ತು. ಇದೀಗ ಅದೇ ವಿಮಾನದ ಬಗ್ಗೆ ತಿಳಿಯೋಣ ಬನ್ನಿ..
ವಿಶ್ವದ ಮೊದಲ ವಿಮಾನ
ವಿಶ್ವದ ಮೊದಲ ವಾಣಿಜ್ಯ ಪ್ರಯಾಣಿಕ ವಿಮಾನವು 1914ರ ಜನವರಿ 1ರಂದು ಆಕಾಶದಲ್ಲಿ ಹಾರಾಟ ನಡೆಸಿತು. ಈ ವಿಮಾನವು ಅಮೆರಿಕದಲ್ಲಿನ ಫ್ಲೋರಿಡಾದ ಎರಡು ನಗರಗಳ ನಡುವೆ ಇತ್ತು. ಈ ವಿಮಾನವನ್ನು ಸೇಂಟ್ ಪೀಟರ್ಸ್‌ಬರ್ಗ್-ಟ್ಯಾಂಪಾ ಏರ್‌ಬೋಟ್ ಲೈನ್ ನಿರ್ವಹಿಸುತ್ತಿತ್ತು ಎಂದು ದಾಖಲಾಗಿದೆ. ಸೇಂಟ್ ಪೀಟರ್ಸ್‌ಬರ್ಗ್-ಟ್ಯಾಂಪಾ ನಗರದ ನಡುವೆ ಮೊದಲ ಬಾರಿಗೆ ವಿಮಾನವು 34 ಕಿ.ಮೀ ದೂರವನ್ನು 23 ನಿಮಿಷಗಳಲ್ಲಿ ಕ್ರಮಿಸಿತು. ಅದನ್ನು ಹಾರಿಸಿದ ಪೈಲೆಟ್ ಟೋನಿ ಜಾನಸ್ ಎಂದು ಗುರುತಿಸಲಾಗಿದೆ.
ಟಿಕೆಟ್ ದರ 400 ಡಾಲರ್..!
ಸೇಂಟ್ ಪೀಟರ್ಸ್‌ಬರ್ಗ್-ಟ್ಯಾಂಪಾ ನಗರಗಳ ನಡುವೆ ಪ್ರಯಾಣಿಸಿಲು ಟಿಕೆಟ್ ದರ ಅಂದು ಅತ್ಯಂತ ದುಬಾರಿಯಾಗಿತ್ತು ಎಂದೇ ಹೇಳಬಹುದು. ಇದಕ್ಕೆ ಕಾರಣ ಆ ವಿಮಾನದಲ್ಲಿ ಒಂದೇ ಒಂದು ಸೀಟ್ ಮಾತ್ ಇತ್ತು. ಹೀಗಾಗಿ ವಿಮಾನದಲ್ಲಿ ಪ್ರಯಾಣ ಮಾಡಲು ಅಂದು ಟಿಕೆಟ್ ಹರಾಜು ಮಾಡಲಾಗುತ್ತಿತ್ತು. ಹೀಗಾಗಿ, ಅಂದಿನ ಮೊದಲ ಪ್ರಯಾಣದ ದರ 400 ಡಾಲರ್ ಆಗಿತ್ತು. ಅಂದರೆ, ಇಂದಿನ ದಿನಮಾನಗಳಿಗೆ ಹೋಲಿದ್ರೆ 6,02,129 ರೂ. ಆಗಿತ್ತು ಎಂದು ವರದಿಯಾಗಿದೆ.(ಏಜೆನ್ಸೀಸ್).