

Pacific Ocean: ಪೆಸಿಫಿಕ್ ಮಹಾಸಾಗರದಲ್ಲಿ ಮೀನುಗಾರಿಕೆ ತೆರಳಿದ್ದ ವ್ಯಕ್ತಿಯೋರ್ವ ನಾಪತ್ತೆಯಾಗಿ 95 ದಿನಗಳ ನಂತರ ಬದುಕುಳಿದು ಬಂದಿದ್ದಾನೆ. ಅಲ್ಲದೆ ಅ ನಿರ್ಜನ ಪ್ರದೇಶದಲ್ಲಿ ಆಹಾರವಿಲ್ಲದೆ ಬದುಕಿದ್ದೇಗೆ ಎಂಬುದರ ಬಗ್ಗೆ ತಿಳಿಯೋಣ.
ಪೆರುವಿನ ಮ್ಯಾಕ್ಸಿಮೊ ನಾಪಾ ಕಾಸ್ಟ್ರೋ ಬದುಕುಳಿದ ಬಂದಿರುವ ವ್ಯಕ್ತಿ. 2024ರ ಡಿ.7ರಂದು ದಕ್ಷಿಣ ಕರಾವಳಿಯ ಮಾರ್ಕೋನಾ ಪಟ್ಟಣದಿಂದ ಮೀನುಗಾರಿಕೆ ತೆರಳಿದ್ದಾನೆ. 10 ದಿನಗಳ ಬಳಿ ಸಮುದ್ರದಲ್ಲಿ ನಾಪತ್ತೆಯಾಗಿದ್ದಾನೆ. 10 ರಿಂದ 12 ದಿನಾಗಳದ್ರೂ ಮನೆಗೆ ಕಾಸ್ಟ್ರೋ ಹಿಂತಿರುಗಲಿಲ್ಲ. ಇದನ್ನರಿತ ಕುಂಟುಂಬಸ್ಥರು ಕೂಡಲೇ ಹುಡುಗಾಟ ಆಂಭಿಸಿದ್ದಾರೆ. ತಮ್ಮ ಎಲ್ಲಾ ಪ್ರಯತ್ನಗಳು ವಿಫಲವಾದ ಬಳಿಕ ಪೆರುವಿನ್ ಕಡಲ ತೀರದ ಗಸ್ತುಪಡೆಗಳಿಗೆ ಮಾಹಿತಿ ನೀಡಿದ್ದಾರೆ. ಕೆಲದಿನಗಳ ಹಡುಗಾಟದ ಬಳಿಕ ಗಸ್ತುಪಡೆಗಳು ಕೂಡ ಕೈಚೆಲ್ಲಿದ್ದಾರೆ.
2024ರ ಡಿ.7ರಂದು ದಕ್ಷಿಣ ಕರಾವಳಿಯ ಮಾರ್ಕೋನಾ ಪಟ್ಟಣದಿಂದ ಮೀನುಗಾರಿಕೆ ತೆರಳಿದ್ದ ಕಾಸ್ಟ್ರೋ, ಹತ್ತು ದಿನಗಳ ನಂತರ ಬಿರುಗಾಳಿಯಿಂದಾಗಿ ಅವನ ದೋಣಿ ದಿಕ್ಕು ತಪ್ಪಿ ಮುಳುಗಿದೆ. ಇದರಿಂದ ತೊಂದರೆಗೊಳಗಾದ ಕಾಸ್ಟ್ರೋ ಹಾಗೂ ಅವರ ಮುರಿದ ದೋಣಿ, ಭಾರೀ ಗಾಳಿಗೆ ನಿರ್ಜನಪ್ರದೇಶದ ಕಡೆ ಸಾಗಿದೆ. ಹೀಗಾಗಿ, ಕಾಸ್ಟ್ರೋ ತನ್ನಲ್ಲಿದ್ದ ಕೆಲವೇ ಸಾಮಗ್ರಿಗಳೊಂದಿಗೆ ಅಲ್ಲಿಯೇ ಬದುಕಬೇಕಾಯಿತು.
ಮುರಿದ ದೋಣಿಯಲ್ಲಿಯೇ ನಿರ್ಜನಪ್ರದೇಶದಲ್ಲಿದ್ದ ಕಾಸ್ಟ್ರೋ, ತನ್ನಲ್ಲಿದ್ದ ಕೆಲ ಸಾಮಾಗ್ರಿಗಳ ಜತೆ ಹೊಟ್ಟೆ ತುಂಬಿಸಿಕೊಂಡಿದ್ದಾನೆ. ಸಾಮಾಗ್ರಿಗಳೆಲ್ಲ ಖಾಲಿ ಆದ ಮೇಲೆ, 15 ದಿನಗಳ ಕಾಲ ಊಟನೆ ಮಾಡಿಲ್ಲ. ಇನ್ನು ತೀವ್ರ ಹೊಟ್ಟೆ ಹಸಿವನಿಂದ ಬಳಲುತ್ತಿದ್ದ ಕಾಸ್ಟ್ರೋ, ತನ್ನ ಬಳಿ ಬರಿತ್ತಿದ್ದ ಆಮೆ, ಜಿರಳೆ ಮತ್ತು ಮೀನುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಂಡಿದ್ದಾನೆ. ಅಲ್ಲದೆ, ಇದರಲ್ಲಿ ಕೆಲ ಹಸಿ ಮಾಂಸವನ್ನೇ ತಿಂಸು ಬದುಕಿದ್ದಾನೆ ಎಂದು ವರದಿಗಳು ಉಲ್ಲೇಖಸಿವೆ.
ಸುಮಾರು 95 ದಿನಗಳ ಬಳಿಕ ಕಳೆದ ಬುಧವಾರ(ಮಾ.12) ಈಕ್ವೆಡಾರ್‌ನ ಗಸ್ತು ಹಡಗು ಅಧಿಕಾರಿಗಳು ಡಾನ್ ಎಫ್ ಕರಾವಳಿಯಿಂದ ಸುಮಾರು 1,100 ಕಿಲೋಮೀಟರ್ ದೂರದಲ್ಲಿನ ದೋಣಿಯಲ್ಲಿ ಕ್ಯಾಸ್ಟ್ರೋನನ್ನು ಗುರುತಿಸಿ ಪತ್ತೆ ಮಾಡಿದೆ. ಇನ್ನು ಕಾಸ್ಟ್ರೋ ಪತ್ತೆಯದಾಗ, ತೀವ್ರವಾಗಿ ನಿರ್ಜಲೀಕರಣಗೊಂಡಿದ್ದರು ಮತ್ತು ಗಂಭೀರ ಸ್ಥಿತಿಯಲ್ಲಿದ್ದರು.
ಕಾಸ್ಟ್ರೋ ಪತ್ತೆಯಾದ ಬಳಿಕ ಮೊದಲ ಬಾರಿಗೆ ಈಕ್ವೆಡಾರ್ ಗಡಿಯ ಸಮೀಪವಿರುವ ಪೈಟಾದಲ್ಲಿ ತಮ್ಮ ಸಹೋದರನನ್ನು ಭೇಟಿಯಾದರು.
ತಾನು ಸಮುದ್ರ ಆಮೆಗಳನ್ನು ತಿನ್ನುತ್ತಿದ್ದೆ, ದೋಣಿಯಲ್ಲಿದ್ದ ಜಿರಳೆಗಳನ್ನು ಮತ್ತು ಅವನ ಬಳಿಗೆ ಬಂದ ಪಕ್ಷಿಗಳನ್ನು ಕೊಂದು ತಿನ್ನುತ್ತಿದ್ದ ಕ್ಯಾಸ್ಟ್ರೋ ಹೇಳಿದ್ದಾರೆ. ತನ್ನ ಕುಟುಂಬದ ಬಗ್ಗೆ, ವಿಶೇಷವಾಗಿ ತನ್ನ ತಾಯಿ ಮತ್ತು ಎರಡು ತಿಂಗಳ ಮೊಮ್ಮಗಳ ಬಗ್ಗೆ ಯೋಚಿಸುತ್ತಾ ಸಮಯ ಕಳೆಯುವುದು ಬದುಕಲು ಶಕ್ತಿ ನೀಡಿತು ಎಂದು ಕ್ಯಾಸ್ಟ್ರೋ ಹೇಳಿದರು.(ಏಜೆನ್ಸೀಸ್)