Bank Auctions : ಇಂದಿನ ದಿನಮಾನಗಳಲ್ಲಿ ಕಾರು ಕೊಳ್ಳುವುದು ಎಲ್ಲರಿಗೂ ಬಹಳ ಮುಖ್ಯವಾಗಿದೆ. ಅದೂ ಭಾರತದಲ್ಲಿ ಮಧ್ಯಮ ವರ್ಗಕ್ಕೆ ದೊಡ್ಡ ಕನಸೊಂದು ಈಡೇರಿಂದಾಗುತ್ತದೆ.ಒಂದು ರೀತಿಯಲ್ಲಿ ಕಾರು ಇದೀಗ ಜೀವನದ ಮೂಲಭೂತ ಅಗತ್ಯವಾಗಿದೆ. ಜನರು ತಮ್ಮ ಅಗತ್ಯಗಳನುಗುಣವಾಗಿ ಕಾರನ್ನು ಖರೀದಿಸುತ್ತಾರೆ.

ಇದನ್ನೂ ಓದಿ:ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts
ಇನ್ನು ಕೆಲವರು ತಮ್ಮ ಹವ್ಯಾಸಕ್ಕಾಗಿ ಕಾರಿಗಳನ್ನು ಖರೀದಿಸಿವವರು. ಕಳೆದ ಕೆಲ ವರ್ಷಗಳು ನೋಡಿದ್ರೆ ಭಾರತಲ್ಲಿ ಕಾರು ಮಾರಾಟ ಹೆಚ್ಚಳ ಕಂಡಿದೆ. 2023ರಕ್ಕೆ ಹೋಲಿಸಿದರೆ ಈ ವರ್ಷ 2024-25 ಕಾರು ಮಾರಾಟವು ಶೇ.11.6 ಹೆಚ್ಚಳ ಕಂಡಿದೆ. ಅಲ್ಲದೆ, 2025ರ ಕೆಲ ತಿಂಗಳಲ್ಲಿಯೇ ಮತ್ತಷ್ಟು ಹೆಚ್ಚಳ ಕಂಡಿದೆ ಎಂದು ವರದಿಯಾಗಿದೆ.
ಇನ್ನು ಕಾರು ಖರೀದಿಯಲ್ಲಿ ಕೆಲವರು ಪೂರ್ಣ ನಗದು ಕಟ್ಟಿ ಕಾರು ಕೊಂಡುಕೊಂಡರೆ ಇನ್ನು ಕೆಲವರು ಕಂತುಗಳಲ್ಲಿ ತಗೆದುಕೊಳ್ಳತ್ತಾರೆ. ಇದೀಗ ಇಂತಹ ಕಂತುಗಳನ್ನು ಕಟ್ಟಲು ವಿಫಲರಾದಾಗ ಅಂತಹ ಕಾರುಗಳನ್ನು ಸಾಲ ಕೊಟ್ಟ ಬ್ಯಾಂಕ್ಗಳು ಕಾರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಿದೆ. ಅಂತಹ ಕಾರುಗಳನ್ನು ಹರಾಜು ಹಾಕಿದಾಗ ಯಾರದರೂ ಖರೀದಿಸಬಹುದು.
ನೀವು ಬ್ಯಾಂಕ್ ಹರಾಜಿನ ಮೂಲಕ ಕಾರು ಖರೀದಿಸಿದರೆ ನಿಮಗೆ ಬಹಳಷ್ಟು ಪ್ರಯೋಜನಗಳು ಸಿಗುತ್ತವೆ. ನೀವು ಕಡಿಮೆ ಬೆಲೆಗೆ ತೆರಿಗೆ ಪಡೆಯುತ್ತೀರಿ. ಮತ್ತು ನಿಮ್ಮ ದಾಖಲೆಗಳಿಗಾಗಿ ನೀವು ಹೆಚ್ಚು ಅಲೆದಾಡಬೇಕಾಗಿಲ್ಲ ಏಕೆಂದರೆ ಎಲ್ಲಾ ದಾಖಲೆಗಳನ್ನು ನಿಮಗೆ ಒದಗಿಸಲಾಗುತ್ತದೆ.
ಕಾರು ಖರೀದಿಸಲು ಮಾಡಬೇಕಾದ್ದು ಏನು..?
ಮೊದಲು ಯಾವ ಬ್ಯಾಂಕ್ ಕಾರುಗಳನ್ನು ಹರಾಜು ಹಾಕಲಾಗುತ್ತಿದೆ ಎಂದು ತಿಳಿದುಕೊಳ್ಳಿ. ಬಳಿಕ ಇದಕ್ಕಾಗಿ ಬ್ಯಾಂಕಿನ ವೆಬ್ಸೈಟ್ಗೆ ಹೋಗಿ. ಅಲ್ಲಿ ಹರಾಜು ಪ್ರಕ್ರಿಯೆ ಬಗ್ಗೆ ಕೆಲ ಮಾಹಿತಿ ಪಡೆಯಿರಿ. ನೀವು eAuctions India ವೆಬ್‌ಸೈಟ್ ಮತ್ತು IBA ಹರಾಜು ವೇದಿಕೆಗೆ ಭೇಟಿ ನೀಡುವ ಮೂಲಕ ಬ್ಯಾಂಕ್ ಹರಾಜಿನ ಬಗ್ಗೆ ಮಾಹಿತಿಯನ್ನು ಪರಿಶೀಲಿಸಬಹುದು.
ಹರಾಜಿನಲ್ಲಿ ಭಾಗವಹಿಸಲು ಮೊದಲು ನೊಂದಯಿಸಿಕೊಳ್ಳಬೇಕು. ಇದಕ್ಕಾಗಿ ನೀವು ಕೆಲ ದಾಖಲೆಗಳನ್ನು ಸಲ್ಲಿಸಬೇಕು. ಹರಾಜು ಆನ್ಲೈನ್ ಹಾಗೂ ಆಪ್ಲೈನ್ ಎರಡರಲ್ಲೂ ನಡೆಯಬಹುದು.ಹೀಗಾಗಿ, ನೀವು ಹರಾಜಿನ ಬಗ್ಗೆ ಸಂಪೂರ್ಣ ಮಾಹಿತಿ ಮೊದಲೇ ತಿಳಿದಿರಬೇಕು.
ಒಂದು ವೇಳೆ ನೀವು ಕಾರು ಹರಾಜಿನಲ್ಲಿ ನಿಮ್ಮ ಪಾಲಾದ್ರೆ, ನಿಮ್ಮ EMD ಮೊತ್ತವನ್ನು ಅಂತಿಮ ಮೊತ್ತದೊಂದಿಗೆ ಸರಿ ಹೊಂದಿಸಿಲಾಗುತ್ತದೆ. ಇದಾದ ನಂತರ, ಎಲ್ಲಾ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ, ಕಾರನ್ನು ನಿಮಗೆ ಹಸ್ತಾಂತರಿಸಲಾಗುತ್ತದೆ. ನೀವು ಹರಾಜಿನಲ್ಲಿ ಪಡೆಯುತ್ತಿರುವ ವಾಹನವನ್ನು ಮುಂಚಿತವಾಗಿ ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ.(ಏಜೆನ್ಸೀಸ್)
Share Market ; ಮುಂದುವರೆದ ಗೂಳಿ ಓಟ: ಇಂದಿನ ಅಧಿಕ ಲಾಭ-ನಷ್ಟಗಳಿಸಿದ ಷೇರುಗಳ್ಯಾವು?