Share Market ; ಮುಂದುವರೆದ ಗೂಳಿ ಓಟ: ಇಂದಿನ ಅಧಿಕ ಲಾಭ-ನಷ್ಟಗಳಿಸಿದ ಷೇರುಗಳ್ಯಾವು?

blank

Share Market : ಭಾರೀ ಕುಸಿತದ ಮೂಲಕ ಅತಂಕ ಸೃಷ್ಠಿಯಾಗಿದ್ದ ದೇಶಿಯ ಷೇರುಮಾರುಕಟ್ಟೆ ಕಳೆದ 2 ದಿನಗಳ ಜತೆಗೆ ಬುಧವಾರ ಕೂಡ ಚೇತರಿಕೆ ಕಾಣುವ ಮೂಲಕ ಗೂಳಿ ಓಟ ಮುಂದುವರೆದಿದೆ.

ಬಿಇಎಸ್​ ಸೆನ್ಸೆಕ್ಸ್​ ಷೇರು ಸೂಚ್ಯಂಕವು ಬುಧವಾರ 75,568.38 ಮತ್ತು 75,201.48 ರ ನಡುವೆ ಏರಿಳಿತಗೊಂಡು ಅಂತಿಮವಾಗಿ 0.2% ರಷ್ಟು ಹೆಚ್ಚಾಗಿ 75,301.26 ಕ್ಕೆ ದಿನದ ಮುಕ್ತಾಯ ಕಂಡಿದೆ. ಇದು ಅದರ ಆರಂಭಿಕ ಬೆಲೆಗಿಂತ 147.79 ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ. ಇನ್ನು ಎನ್​ಇಎಸ್​ ನಿಫ್ಟಿ ಸಹ ಶೇ. 2.43% ರಷ್ಟು ಸೂಚ್ಯಂಕ ಏರಿಕೆ ಕಂಡಿದೆ. ನಿಫ್ಟಿ 22,940.7ರ ಗರಿಷ್ಠ ಮತ್ತು 22,807.95ರ ಕನಿಷ್ಠ ಮಟ್ಟವನ್ನು ತಲುಪಿದೆ.

ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಏರಿಕೆ ಪ್ರವೃತ್ತಿಯ ನಡುವೆ ವ್ಯಾಪಕ ಖರೀದಿಯಿಂದ ದೇಶದ ಷೇರು ಸೂಚ್ಯಂಕಗಳು ಏರಿಕೆ ದಾಖಲಿಸಿವೆ.

ಇದನ್ನೂ ಓದಿ:ಬಾತ್ರೂಮ್​ನಲ್ಲಿ ಟೂತ್​ ಬ್ರಷ್​ ಇಡುವುದು ಅಪಾಯಕಾರಿಯಂತೆ!; ವೈಜ್ಞಾನಿಕ ಕಾರಣ ಇಲ್ಲಿದೆ.. | Toothbrush

ಬುಧವಾರ ವಹಿವಾಟಿನ ಅವಧಿಯಲ್ಲಿ ಹೆಚ್ಚು ಲಾಭ-ನಷ್ಟದ ಷೇರುಗಳ ಪಟ್ಟಿ ಇಲ್ಲಿದೆ..

ಸೆನ್ಸೆಕ್ಸ್

ಲಾಭದಾಯಕ ಷೇರು: ಟಾಟಾ ಸ್ಟೀಲ್ (2.52% ಏರಿಕೆ), ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ (2.27% ಏರಿಕೆ), ಅಲ್ಟ್ರಾಟೆಕ್ ಸಿಮೆಂಟ್ (2.01% ಏರಿಕೆ), ವಿಪ್ರೋ (1.66% ಏರಿಕೆ), ಇಂಡಸ್ಇಂಡ್ ಬ್ಯಾಂಕ್ (1.56% ಏರಿಕೆ).

ಇದನ್ನೂ ಓದಿ:ಮಾ.21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: ಈ ಬಾರಿ ಏನೆಲ್ಲ ಹೊಸ ಬದಲಾವಣೆಗಳಿವೆ?

ನಷ್ಟದ ಷೇರು: ಟೆಕ್ ಮಹೀಂದ್ರಾ (2.43% ಕುಸಿತ), ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (1.56% ಕುಸಿತ), ಐಟಿಸಿ (1.55% ಕುಸಿತ), ಇನ್ಫೋಸಿಸ್ (1.38% ಕುಸಿತ), ಮಾರುತಿ ಸುಜುಕಿ ಇಂಡಿಯಾ (0.98% ಕುಸಿತ).

ನಿಫ್ಟಿ

ಲಾಭದಾಯಕ ಷೇರು: HDFC ಲೈಫ್ ಇನ್ಶುರೆನ್ಸ್ ಕಂಪನಿ (3.75% ಏರಿಕೆ), ಅಪೊಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ (2.89% ಏರಿಕೆ), ಟಾಟಾ ಸ್ಟೀಲ್ (2.55% ಏರಿಕೆ), ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ (2.36% ಏರಿಕೆ), ಅಲ್ಟ್ರಾಟೆಕ್ ಸಿಮೆಂಟ್ (2.20% ಏರಿಕೆ).

ಇದನ್ನೂ ಓದಿ:ಕನ್ನಡಿಗರ ಮೇಲಿನ ದೌರ್ಜನ್ಯ : ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ

ನಷ್ಟದ ಷೇರು: ಟೆಕ್ ಮಹೀಂದ್ರಾ (2.41% ಕುಸಿತ), ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (1.56% ಕುಸಿತ), ಐಟಿಸಿ (1.48% ಕುಸಿತ), ಇನ್ಫೋಸಿಸ್ (1.42% ಕುಸಿತ), ಬ್ರಿಟಾನಿಯಾ ಇಂಡಸ್ಟ್ರೀಸ್ (1.28% ಕುಸಿತ).(ಏಜೆನ್ಸೀಸ್​)

ಬಾಹ್ಯಕಾಶದಿಂದ ಬಿದ್ದು ಮೃತಪಟ್ಟ ಮೊದಲ ಗಗನಯಾತ್ರಿ ವ್ಲಾಡಿಮಿರ್ ಕೊಮರೊವ್; ಘಟನೆ ಸಂಭವಿಸಿದ್ದೇಗೆ? | Vladimir Komarov

ಬಾತ್ರೂಮ್​ನಲ್ಲಿ ಟೂತ್​ ಬ್ರಷ್​ ಇಡುವುದು ಅಪಾಯಕಾರಿಯಂತೆ!; ವೈಜ್ಞಾನಿಕ ಕಾರಣ ಇಲ್ಲಿದೆ.. | Toothbrush

Share This Article

ಈ ಗುಣಗಳನ್ನು ಹೊಂದಿರುವ ಜನರು ತಮ್ಮ ಜೀವನದುದ್ದಕ್ಕೂ ಶ್ರೀಮಂತರಾಗಿರುತ್ತಾರೆ..ಯಾಕೆ ಗೊತ್ತಾ?Chanakya Niti

Chanakya Niti: ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ.…

ಬೇಸಿಗೆಯಲ್ಲಿ ತೆಂಗಿನಕಾಯಿ ನೀರು ಅಥವಾ ಕಬ್ಬಿನ ಜ್ಯೂಸ್​ ಯಾವುದು ಉತ್ತಮ! | Better In Summer

Better In Summer ; ಈ ಬಿರು ಬೇಸಿಗೆಯಲ್ಲಿ ಸಾಮಾನ್ಯವಾಗಿ ತಂಪಾದ ಅಥವಾ ಅಹ್ಲಾದಕಾರ ಆಹಾರ…

ಈ ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯಬೇಡಿ! ಅಕಸ್ಮಾತ್​ ನೀರು ಕುಡಿದ್ರೆ ಏನಾಗುತ್ತದೆ ಗೊತ್ತಾ? Fruits

Fruits: ಕೆಲವು ಸಂದರ್ಭಗಳಲ್ಲಿ, ಕೆಲವು ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯುವುದರಿಂದ ಅತಿಸಾರದ ಅಪಾಯ ಹೆಚ್ಚಾಗುತ್ತದೆ.…