Vladimir Komarov : ಕಳೆದ ವರ್ಷ ಬಾಹ್ಯಕಾಶಕ್ಕೆ ತೆರಳಿದ ಅಸ್ಟ್ರೋನಾಟ್ಗಳಾದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಾಲ್ಮೋರ್ ಸ್ಪೇಸ್ನಲ್ಲಿಯೇ ಸಿಲುಕಿದ ಬಳಿಕ ಗಗನಯಾತ್ರಿಗಳ ಬಗ್ಗೆ ಇದೀಗ ಕೂತುಹಲ ಮೂಡುತ್ತಿದೆ. ಅಲ್ಲದೆ, ಸ್ಪೇಸ್ ಬಗ್ಗೆ ತಿಳಿಯಲು ವಿಧ್ಯಾರ್ಥಿಗಳು ಸೇರಿದಂತೆ ಇಂದಿನ ಯುವ ಜನಾಂಗ ಇತಿಹಾಸ ಕೆದುಕುತ್ತಿದೆ.
ಹೌದು, ಇದೀಗ ಸುನಿತಾ ಹಾಗೂ ವಿಲಿಯಮ್ಸ್ಗೆ ಸ್ಪೇಸ್ನಲ್ಲಿ ಸಿಲುಕಿದಂತೆ ಕೆಳೆದ ಕೆಲ ದಶಕಗಳಿಂದೆ ಮೊಟ್ಟ ಮೊದಲ ಬಾಹ್ಯಕಾಶ ಗಗನಯಾತ್ರಿಗೆ ಅನುಭವಿಸಿ ಕೊನೆಗೆ ಭೂಮಿಗೆ ತಲುಪುವ ವೇಳೆಗೆ ಬಾಹ್ಯಕಾಶದಿಂದ ಬಿದ್ದು ಮೃತಪಟ್ಟ ಘಟನೆ ಇತಿಹಾಸ ಪುಟಗಳಲ್ಲಿ ಸೇರಿದೆ. ಯಾರದು? ಮೃತಪಟ್ಟ ಮೊದಲ ಅಸ್ಟ್ರನಾಟ್ ಎಂದು ನೋಡೋಣ ಬನ್ನಿ..
ಘಟನೆ ಏನು..?
ಬಾಹ್ಯಕಾಶ ಕಾರ್ಯಚರ್ಣೆಗೆಂದು ಏಪ್ರೀಲ್ 23, 1967ರಲ್ಲಿ ಸೋವಿತ್ ಒಕ್ಕೂಟವೂ ಸೋಯುಜ್-1 ಹೆಸರಿನ ನೌಕೆಯಲ್ಲಿ ಗಗನಯಾತ್ರಿ ವ್ಲಾಡಿಮಿರ್ ಕೊಮರೊವ್ ಅವರನ್ನು ಏಕಾಂಗಿಯಾಗಿ ಕೂರಿಸಿ ಉಡಾವಣೆ ಮಾಡಲಾಗಿತ್ತು. ನಭಕ್ಕೆ ಚಿಮ್ಮುವಾಗ ಯಾವುದೇ ತೊಂದರೆ ಕಾಣಿಸಿಲ್ಲವಾದರೂ ಕೆಲ ತಾಂತ್ರಿ ದೋಷಗಳ ಕಾರಣದಿಂದ ಸೋಯುಜ್ ನೌಕೆ ಬಿಟ್ಟು ಭೂಮಿಗೆ ತೆರಳಲು ಕೊಮರೊವ್‌ಗೆ ಆದೇಶಿಸಲಾಯಿತು. ಭೂಮಿಗೆ ಹಿಂತಿರುಗುತ್ತಿರುವಾಗ ಪ್ಯಾರಚೂಟ್ಗಳ ವಿಫಲ ಕಾರಣದಿಂದ ವ್ಲಾಡಿಮಿರ್ ಕೊಮರೊವ್ ಮೃತಪಟ್ಟರು ಎಂದು ದಾಖಲಾಗಿದೆ.
ಯಾರು ಈ ವ್ಲಾಡಿಮಿರ್ ಕೊಮರೊವ್..?
ವ್ಲಾಡಿಮಿರ್ ಕೊಮರೊವ್ ಮಾರ್ಚ್ 16, 1927 ರಂದು ಮಾಸ್ಕೋದಲ್ಲಿ ಜನಿಸಿದರು. ಅವರ ತಂದೆ ಕಾರ್ಮಿಕರಾಗಿದ್ದರು. ಕೊಮರೊವ್ ಬಾಲ್ಯದಿಂದಲೂ ಗಣಿತವನ್ನು ಪ್ರೀತಿಸುತ್ತಿದ್ದರು. ಅವರು ವಾಯುಯಾನ ಸಂಬಂಧಿತ ವಿಷಯಗಳಲ್ಲಿಯೂ ತೀವ್ರ ಆಸಕ್ತಿ ಹೊಂದಿದ್ದರು. ಈ ಹಿನ್ನೆಲೆ ಪದವಿ ಪಡೆದ ನಂತರ, ಕೊಮರೊವ್ ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟದ (ಯುಎಸ್ಎಸ್ಆರ್) ಉನ್ನತ ಪರೀಕ್ಷಾ ಪೈಲಟ್‌ಗಳಲ್ಲಿ ಒಬ್ಬರಾದರು.
1960ರ ದಶಕದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಸೋವಿಯತ್ ಒಕ್ಕೂಟ ರಾಷ್ಟ್ರಗಳು ನಡುವೆ ಶಿತಲ ಸಮರ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಚಂದ್ರಗ್ರಹಕ್ಕೆ ಮನುಷ್ಯನ್ನು ಕಳುಹಿಸಲು ಪೈಪೋಟಿಗೆ ಬಿದ್ದವು. ಎರಡೂ ದೇಶಗಳು ಚಂದ್ರನ ಮೇಲೆ ಹೆಜ್ಜೆಯನ್ನಿಡಲು ತೀವ್ರ ಸ್ಪರ್ಧೆಗೆ ಇಳಿದವು. ಸೋವಿಯತ್ ಒಕ್ಕೂಟವೂ ಬಾಹ್ಯಕಾಶದಲ್ಲಿ ಪರಿಶೋಧನೆಗಳಲ್ಲಿ ಭಾಗಶ ಮುಂದೆ ಇದ್ದು, ಪ್ರಾಬಲ್ಯ ಸಾಧಿಸಿತ್ತು. ಅಲ್ಲದೆ, ಭೂಮಿಯಿಂದ ಕಕ್ಷೆಗೆ ಉಪಗ್ರಹವನ್ನು(ಸ್ಪುಟ್ನಿಕ್) ಕಳುಹಿಸಿದ ಮೊದಲ ದೇಶ ಸೋವಿಯತ್ ಒಕ್ಕೂಟ ಅಂದರೆ ಈಗಿನ ರಷ್ಯಾ.
ಅಷ್ಟೇ ಅಲ್ಲ. ಸೋವಿಯತ್ ಒಕ್ಕೂಟವು ಲೈಕಾ ಎಂಬ ನಾಯಿಯನ್ನು ಸಹ ಕಕ್ಷೆಗೆ ಕಳುಹಿಸಿತು. ಆ ಹೊತ್ತಿಗೆ, ಅಮೆರಿಕನ್ನರು ಬಾಹ್ಯಾಕಾಶ ಸ್ಪರ್ಧೆಯಲ್ಲಿ ಹಿಂದೆ ಬೀಳುತ್ತಿದ್ದರು. ಬಾಹ್ಯಾಕಾಶಕ್ಕೆ ಹೋದ ಮೊದಲ ವ್ಯಕ್ತಿಗಳೇ ಈ ಯೂರಿ ಗಗಾರಿನ್ ಮತ್ತು ವ್ಲಾಡಿಮಿರ್ ಕೊಮರೊವ್.
ಘಟನೆ ಸಂಭವಿಸಿದ್ದೇಗೆ..?
ಸೋಯುಜ್-1 ಅನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದ ಬಳಿಕ ಭೂಮಿಯ ಕಕ್ಷೆಗೆ ಪ್ರವೇಶಿಸಿದ ನಂತರ, ಕಾರ್ಯಾಚರಣೆಯ ಎಂಜಿನ್‌ಗಳು ಒಂದೊಂದಾಗಿ ವಿಫಲಗೊಳ್ಳಲು ಪ್ರಾರಂಭಿಸಿದವು. ನಿರ್ದಿಷ್ಟವಾಗಿ ಹೇಳುವುದಾದರೆ, ಬಾಹ್ಯಾಕಾಶ ನೌಕೆಗೆ ವಿದ್ಯುತ್ ಪೂರೈಸುವ ಸೌರ ಫಲಕ ವ್ಯವಸ್ಥೆಯು ಕಾರ್ಯನಿರ್ವಹಿಸಲಿಲ್ಲ ಎಂದು ಬಾಹ್ಯಕಾಶ ಸಂಶೋಧಕ ರಿಚರ್ಡ್ ಹೇಳಿದ್ದಾರೆ ಎಂದು8 ವರದಿ ಉಲ್ಲೇಖಿಸಿದೆ.
ನಂತರ ಸೋಯುಜ್-2 ಉಡಾವಣೆಯನ್ನು ರದ್ದುಗೊಳಿಸಲಾಯಿತು. ಕೊಮರೊವ್‌ಗೆ ಭೂಮಿಯ ಕಕ್ಷೆಗೆ ಮರಳಲು ಆದೇಶಿಸಲಾಯಿತು. ಕೊಮರೊವ್ ಭೂಮಿಗೆ ಹಿಂತಿರುಗುತ್ತಿದ್ದಾಗ ಅವರ ಪ್ಯಾರಾಚೂಟ್‌ಗಳು ವಿಫಲವಾದವು. ಗುರುತ್ವಾಕರ್ಷಣೆಯ ಬಲ ಪ್ರಾರಂಭವಾದ ಸ್ಥಳದಿಂದ ಅವನು ನೆಲಕ್ಕೆ ಬೀಳಲು ಪ್ರಾರಂಭಿಸಿರಬಹುದು. ಅವನು ನೆಲಕ್ಕೆ ಅಪ್ಪಳಿಸಿದ ತಕ್ಷಣ, ಬಾಹ್ಯಾಕಾಶ ನೌಕೆ ಬೆಂಕಿಯಿಂದ ಸುಟ್ಟುಹೋಗಿ ವ್ಲಾಡಿಮಿರ್ ಕೊಮರೊವ್ ಸುಟ್ಟುಕರಕಲಾದರು. (ಏಜೆನ್ಸೀಸ್)
ಗಗನಯಾತ್ರಿಗಳು ಭೂಮಿಗೆ ಬಂದ ತಕ್ಷಣ ಮಗುವಿನಂತೆ ನಡೆಯಲು ಕಾರಣವೇನು?; ಇದು ಏಕೆ ಸಂಭವಿಸುತ್ತೆ ತಿಳಿಯಿರಿ | Astronauts