ಸುನಿತಾ, ವಿಲ್ಮೋರ್​ಗೂ ಮುಂಚೆ ಹೆಚ್ಚು ಸಮಯ ಬಾಹ್ಯಕಾಶದಲ್ಲಿದ್ದ ಗಗನಯಾತ್ರಿಗಳು ಇವರೇ ನೋಡಿ! 437 ದಿನ ಏಕಾಂಗಿಯಾಗಿದ್ರು ವ್ಯಾಲೆರಿ!| Astronauts

dk-2025-03-18t121828139-67d9176bf3596
Published on

Astronauts:ಕಳೆದ ಒಂಬತ್ತು ತಿಂಗಳ ಹಿಂದೆ ಭೂಮಿಯಿಂದ ಸುಮಾರು 4000 ಕಿಲೋಮೀಟರ್ ದೂರದಲ್ಲಿರುವ​ ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣಕ್ಕೆ 9 ದಿನಗಳ ಕೆಲಸ ನಿಮಿತ್ತ ಹೊಗಿದ್ದ ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯನ್ಸ್​ ಮತ್ತು ಬುಚ್​​ ವಿಲ್ಮೋರ್​ ತಾಂತ್ರಿಕ ದೋಷದಿಂದ ಭೂಮಿಗೆ ವಾಪಸ್ ಬರಲು ಸಾಧ್ಯವಾಗಲಿಲ್ಲ. ಆದರೆ, ಎಲ್ಲವೂ ಅಂದುಕೊಂಡಂತೆ ಆದ್ರೆ ಇದೀಗ ಅವರು ಭೂಮಿಗೆ ಬರುವ ಸಮಯ ಸನಿಹವಾಗಿದೆ.

ಹೌದು, ಇದೇ ಮಾ.19 ಭಾರತೀಯ ಕಾಲಮಾನ ಬೆಳಗಿನ ಜಾವ 3.27ಕ್ಕೆ ಅಮೆರಿಕಾದ ಪ್ಲೋರಿಡಾ ಕರಾವಳಿಯಲ್ಲಿ ಇಳಿಯಲಿದ್ದಾರೆ ಎಂದು ನಾಸಾ ಹೇಳಿದೆ. ಆದರೆ, ಬಾಹ್ಯಕಾಶಕ್ಕೆ ತೆರಳಿ ಹಿಂತಿರುಗತ್ತಿರುವುದು ಇದೇ ಮೊದಲಲ್ಲ. ಈ ಮುಂಚೆ ಹಲವು ಗಗನ ಯಾತ್ರಿಗಳು ಮಿಷನ್​ಗಳ ತಾಂತ್ರಿಕ ದೋಷ ಕಾರಣದಿಂದ ಕೆಲ ವರ್ಷಗಗಳ ಕಾಲ ಅಲ್ಲೇ ಅಧಿಕ ಸಮಯ ಉಳಿಕೊಳ್ಳಬೇಕಾಯಿತು. ಅವರು ಎಲ್ಲಾ ಯಾರು? ಏನು? ಎಂಬುದು ತಿಳಿಯೋಣ.

ರಷ್ಯಾದ ಗಗನಯಾತ್ರಿ ವ್ಯಾಲೆರಿ ಪಾಲಿಯಕೋವ್

ವ್ಯಾಲೆರಿ ಪಾಲಿಯಕೋವ್(Valery Polyakov) ಇತ ರಷ್ಯಾದ ಗಗನಯಾತ್ರಿ. ಬಾಹ್ಯಕಾಶದಲ್ಲಿ ಅತ್ಯಧಿಕ ದಿನಗಳ ಕಾಲ ಉಳಿದುಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದ ಮೊದಲ ಗಗನಯಾತ್ರಿ ವ್ಯಾಲೆರಿ ಪಾಲಿಯಕೋವ್. ಹೌದು, ಇಲ್ಲಿಯವರೆಗೆ ಬಾಹ್ಯಾಕಾಶದಲ್ಲಿ ಹೆಚ್ಚು ಸಮಯ ಕಳೆದ ದಾಖಲೆ ಪಾಲಿಯಕೋವ್ ಅವರ ಹೆಸರಿನಲ್ಲಿದೆ. 1990 ರ ದಶಕದಲ್ಲಿ ಪಾಲಿಯಕೋವ್ ಮಿರ್ ಬಾಹ್ಯಾಕಾಶ ನಿಲ್ದಾಣದಲ್ಲಿ 437 ದಿನಗಳನ್ನು ಕಳೆದ್ದಾರೆ.

ಅಲ್ಲದೆ, ಮಿರ್ ಬಾಹ್ಯಾಕಾಶ ನಿಲ್ದಾಣದಲ್ಲಿ ದಾಖಲೆಯ 437 ದಿನಗಳು ಮತ್ತು 18 ಗಂಟೆಗಳ ಕಾಲ ಕಳೆದ ಕಾರಣ ಇತನಿಗೆ ರಷ್ಯಾದ ಹೀರೋ ಎಂಬ ಬಿರುದನ್ನು ತಂದುಕೊಟ್ಟಿತು. ಪಾಲಿಯಕೋವ್ ಒಟ್ಟು ಎರಡು ಬಾಹ್ಯಾಕಾಶ ಯಾತ್ರೆಗಳನ್ನು ಮಾಡಿದ್ದಾರೆ. ಈ ಸಮಯದಲ್ಲಿ ಅವರು ಕಕ್ಷೆಯಲ್ಲಿ 678 ದಿನಗಳು ಮತ್ತು 16 ಗಂಟೆಗಳ ಕಾಲ ಕಳೆದರು.

ಬಾಹ್ಯಾಕಾಶದಲ್ಲಿ ದೀರ್ಘಕಾಲ ಏಕಾಂಗಿಯಾಗಿ ಉಳಿದುಕೊಂಡಿರುವ ವಿಶ್ವದಾಖಲೆಯನ್ನು ಹೊಂದಿದ ಇವರು ತಮ್ಮ 80ನೇ ವಯಸ್ಸಿನಲ್ಲಿ(7th Sep 2022) ನಿಧನರಾದರು.

ಅಮೆರಿಕಾದ ಫ್ರಾಂಕ್ ರುಬಿಯೊ

ಅಮೆರಿಕಾದ ಫ್ರಾಂಕ್ ರುಬಿಯೊ ಬಾಹ್ಯಾಕಾಶದಲ್ಲಿ ದಾಖಲೆಯ 371 ದಿನಗಳನ್ನು ಕಳೆದ ನಾಸಾ ಗಗನಯಾತ್ರಿಯಾಗಿದ್ದಾರೆ. ಸೆಪ್ಟೆಂಬರ್ 21, 2022 ರಂದು ರುಬಿಯೊ, ಪೆಟೆಲಿನ್ ಮತ್ತು ಪ್ರೊಕೊಪಿಯೆವ್ ಮೂವರು ಗಗನಯಾತ್ರಿಗಳನ್ನೊಳಗೊಂಡ ನೌಕೆಯನ್ನು ಅನ್ನು ISS ಕಡೆಗೆ ಉಡಾಯಿಸಲಾಯಿತು. ಕೆಲ ದಿನಗಳ ಬಳಿಕ ಭೂಮಿಗೆ ಹಿಂತುರುಗಿ ಬರಬೇಕಾಗಿದ್ದ ಮೂವರು ಗಗನಯಯಾತ್ರಿಗಳು ತಾಂತ್ರಿಕ ದೋಷ ಕಾರಣದಿಂದ ಅಲ್ಲೇ 371 ದಿನಗಳು ಉಳಿಯಬೇಕಾಗಿತು. ಸೆಪ್ಟೆಂಬರ್ 27, 2023 ರಂದು ಬೆಳಿಗ್ಗೆ 7:17 EDT (ಸಂಜೆ 4:47 IST) ಕ್ಕೆ ಭೂಮಿಗೆ ಮರಳಿದರು.

ಇನ್ನು ಅಮೆರಿಕದ ಗಗನಯಾತ್ರಿಯೊಬ್ಬರು ಏಕಾಂಗಿಯಾಗಿ ಒಂದೇ ಬಾರಿಗೆ ಅತಿ ಉದ್ದದ ಬಾಹ್ಯಾಕಾಶ ಹಾರಾಟ ನಡೆಸಿದ ದಾಖಲೆ ನಾಸಾದ ಗಗನಯಾತ್ರಿ ಮಾರ್ಕ್ ವಂಡೆ ಹೇ ಅವರದ್ದಾಗಿತ್ತು. ಅವರು ಬಾಹ್ಯಾಕಾಶದಲ್ಲಿ 355 ದಿನಗಳನ್ನು ಕಳೆದಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net