Astronauts: ಕಳೆದ ಒಂಬತ್ತು ತಿಂಗಳ ಹಿಂದೆ ಭೂಮಿಯಿಂದ ಸುಮಾರು 4000 ಕಿಲೋಮೀಟರ್ ದೂರದಲ್ಲಿರುವ ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣಕ್ಕೆ 9 ದಿನಗಳ ಕೆಲಸ ನಿಮಿತ್ತ ಹೊಗಿದ್ದ ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯನ್ಸ್ ಮತ್ತು ಬುಚ್ ವಿಲ್ಮೋರ್ ತಾಂತ್ರಿಕ ದೋಷದಿಂದ ಭೂಮಿಗೆ ವಾಪಸ್ ಬರಲು ಸಾಧ್ಯವಾಗಿರಲಿಲ್ಲ. ಆದರೆ, ಸತತ ಪ್ರಯತ್ನಗಳಿಂದ ಇದೀಗ ಮಾ.19ರ ಬೆಳಗ್ಗೆ(ಭಾರತೀಯ ಕಾಲಮಾನ) 3.27ಕ್ಕೆ ಭೂಮಿಗೆ ತಲುಪಿದ್ದಾರೆ. ಭೂಮಿಗೆ ಬಂದ ತಕ್ಷಣ ಸಾಮಾನ್ಯರಂತೆ ನಡೆಯಲು ಸಾಧ್ಯವಾದೆ ಮಕ್ಕಳಂತೆ ನಡೆಯುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ, ಇದು ಏಕೆ ಸಂಭವಿಸುತ್ತದೆ ಎಂದು ತಿಳಿಯೋಣ..
ಮಗುವಿನಂತೆ ಪಾದಗಳೇಕೆ?
ಬಾಹ್ಯಕಾಶದಲ್ಲಿನ ಗುರುತ್ವಾಕರ್ಷಣೆ ಶಕ್ತಿ ಕೊರತೆ ಕಾರಣದಿಂದ ಗಗನಯಾತ್ರಿಗಳು ಸಲ್ಪ ಸಯಮದವರೆಗೂ ನೆಲದ ಮೇಲೆ ನಡೆಯಲು ಕಷ್ಟವಾಗಲಿದೆ. ಅಲ್ಲದೆ, ಬಾಹ್ಯಕಾಶದಲ್ಲಿನ ಗಾಳಿ ಮತ್ತು ಗುರುತ್ವಾಕರ್ಷಣ ಶಕ್ತಿ ಅನುಪಸ್ಥಿತಿಯಿಂದಾಗಿ ಭೂಮಿಗೆ ಹಿಂತಿರುಗಿದ ಗಗನಯಾತ್ರಿಗಳು ಸ್ಪೇಸ್ನಲ್ಲಿ ಯಾವುದೇ ಭಾರ ಅನುಭವಿಸುವುದಿಲ್ಲ. ಹೀಗಾಗಿ, ಅವರ ಪಾದಗಳ ಮೇಲಿನ ಚರ್ಮ ನಿಧಾನವಾಗಿ ಕಳೆದು ಹೋಗಲಿದೆ. ಅದಕಾರಣದಿಂದ ಮಕ್ಕಳ ಪಾದಗಂತೆ ಮೃದುವಾಗಲಿವೆ. ಆದ್ದರಿಂದ ಭೂಮಿಗೆ ಬಂದ ತಕ್ಷಣ ಅವರಿಗೆ ನಡೆಯಲು ಕಷ್ಟವಾಗುತ್ತದೆ.
ಶಿಶು ಪಾದಗಳ ಹೊರತಾಗಿ, ಅವರು ಮೂಳೆ ಸಾಂದ್ರತೆಯ ನಷ್ಟದ ಸಮಸ್ಯೆಯನ್ನು ಸಹ ಎದುರಿಸುತ್ತಾರೆ. ಗುರುತ್ವಾಕರ್ಷಣೆಯ ಕೊರತೆಯಿಂದಾಗಿ, ಅವುಗಳ ಮೂಳೆ ಸಾಂದ್ರತೆ ಕಳೆದುಹೋಗುತ್ತದೆ ಮತ್ತು ಮೂಳೆಗಳು ದುರ್ಬಲವಾಗುತ್ತವೆ. ಇದು ಮೂಳೆ ಮುರಿತದ ಅಪಾಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಈ ವ್ಯಾಯಾಮಗಳಿಂದ ಸಾಮಾನ್ಯರಾಗುತ್ತಾರಂತೆ!
ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಕಾಲುಗಳು ಮತ್ತು ಬೆನ್ನಿನ ಸ್ನಾಯುಗಳು ಸಹ ದುರ್ಬಲಗೊಳ್ಳುತ್ತವೆ. ಇದನ್ನು ತಡೆಗಟ್ಟಲು, ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿಯೇ ನಿಯಮಿತವಾಗಿ 2.5 ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಾರೆ.(ಏಜೆನ್ಸೀಸ್)
