ರಾಜಮೌಳಿ ಮೇಲೆ ಆದಿವಾಸಿಗಳ ಭಾವನೆಗಳಿಗೆ ಧಕ್ಕೆ ತಂದ ಆರೋಪ ಹೊರಿಸಿದ ತೆಲಂಗಾಣ ಬಿಜೆಪಿ

raaa
Published on

ಹೈದರಾಬಾದ್​: ಇತ್ತೀಚೆಗಷ್ಟೇ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾದ ಟೀಸರ್​ವೊಂದು ಬಿಡುಗಡೆ ಆಗಿತ್ತು. ಜೂ. ಎನ್​ಟಿಆರ್ ಪಾತ್ರವನ್ನು ಪಡಿಚಯಿಸುವ ವಿಡಿಯೋ ಅದಾಗಿತ್ತು. ಇದೀಗ ಅದೇ ಟೀಸರ್​ ಬಗ್ಗೆ ತೆಲಂಗಾಣ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ಈ ಚಿತ್ರದ ಟೀಸರ್​ನಲ್ಲಿ ಆದಿವಾಸಿ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ರಾಜಮೌಳಿ ಮಾಡುತ್ತಿದ್ದಾರೆಂದು ತೆಲಂಗಾಣದ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್​ ಆರೋಪಿಸಿದ್ದಾರೆ. ಆದಿವಾಸಿ ವ್ಯಕ್ತಿಯೋರ್ವನಿಗೆ ಮುಸ್ಲಿಂ ವೇಷ ತೊಡಿಸಿದ್ದೀರಿ ಎಂದು ದೂರಿದ್ದಾರೆ.

ನಿಮಗೆ ಧೈರ್ಯವಿದ್ದರೆ, ಯಾವುದಾದರೂ ಮುಸ್ಲಿಂ ನವಾಬನನ್ನು ಸಿನಿಮಾದಲ್ಲಿ ತೋರಿಸಿ ಆತನಿಗೆ ಕೇಸರಿ ಬಣ್ಣದ ರುಮಾಲು ಸುತ್ತಿಕೊಳ್ಳಲು ಹೇಳಿ ಎಂದು ಸವಾಲು ಎಸೆದಿದ್ದಾರೆ. ಈಗಲೇ ನಿಮಗೆ ಮುನ್ನೆಚ್ಚರಿಕೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇದು ಸಿನಿಮಾದಲ್ಲಿ ಕಾಣಿಸಿದರೆ, ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net