More

    ಸುನೀಲ್ ಶೆಟ್ಟಿ ಪುತ್ರಿ ಕೆಎಲ್ ರಾಹುಲ್ ಪತ್ನಿಯಂತೆ! ಗೂಗಲ್‌ನಿಂದ ಮತ್ತೊಂದು ಅವಾಂತರ

    ಬೆಂಗಳೂರು: ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ-ಬ್ಯಾಟ್ಸ್‌ಮನ್ ಆಗಿ ಮಿಂಚುತ್ತಿರುವ ಕನ್ನಡಿಗ ಕೆಎಲ್ ರಾಹುಲ್, ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಉಪನಾಯಕರಾಗಿಯೂ ಬಡ್ತಿ ಪಡೆದಿದ್ದಾರೆ. ಈ ನಡುವೆ ಅವರು ವಿವಾಹ ಯಾವಾಗ ಮಾಡಿಕೊಂಡರು ಎಂಬ ಪ್ರಶ್ನೆಯೊಂದು ಮೂಡಿದೆ. ಯಾಕೆಂದರೆ ಸರ್ಚ್ ಇಂಜಿನ್ ಗೂಗಲ್‌ನಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಆಥಿಯಾ ಶೆಟ್ಟಿ ಅವರನ್ನು ಕೆಎಲ್ ರಾಹುಲ್ ಅವರ ಪತ್ನಿ ಎಂದು ತೋರಿಸಲಾಗುತ್ತಿದೆ!

    ಈ ಮುನ್ನ ಬಾಲಿವುಡ್ ನಟಿ ಹಾಗೂ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಅವರನ್ನು ಅ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅವರ ಪತ್ನಿ ಮತ್ತು ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಅವರನ್ನು ಯುವ ಬ್ಯಾಟ್ಸ್‌ಮನ್ ಶುಭಮಾನ್ ಗಿಲ್ ಅವರ ಪತ್ನಿ ಎಂಬಂತೆ ತೋರಿಸುತ್ತಿದ್ದ ಗೂಗಲ್ ಇದೀಗ ಈ ಅವಾಂತರವನ್ನೂ ಸೃಷ್ಟಿಸಿದೆ.

    ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡಿದೆ. ಆದರೆ ಈ ಸಂಬಂಧ ಇನ್ನೂ ಮದುವೆಯ ಹತ್ತಿರಕ್ಕೆ ಹೋಗಿಲ್ಲ. ಈ ನಡುವೆ ಗೂಗಲ್‌ನಲ್ಲಿ ಮಾತ್ರ, ಕೆಎಲ್ ರಾಹುಲ್ ಪತ್ನಿ ಯಾರೆಂದು ಸರ್ಚ್ ಮಾಡಿದರೆ ಆಥಿಯಾ ಶೆಟ್ಟಿ ಅವರ ಚಿತ್ರಗಳೇ ಕಾಣಿಸುತ್ತಿವೆ!

    ಸುನೀಲ್ ಶೆಟ್ಟಿ ಪುತ್ರಿ ಕೆಎಲ್ ರಾಹುಲ್ ಪತ್ನಿಯಂತೆ! ಗೂಗಲ್‌ನಿಂದ ಮತ್ತೊಂದು ಅವಾಂತರ

    ಕಳೆದ 1 ವರ್ಷದಿಂದ ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ಆಪ್ತ ಸಂಬಂಧ ಹೊಂದಿದ್ದು, ಅವರ ಬಗೆಗಿನ ಸಾಕಷ್ಟು ಗಾಳಿಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಅವರಿಬ್ಬರು ಜತೆಯಾಗಿ ಥಾಯ್ಲೆಂಡ್‌ಗೆ ಸುತ್ತಾಡಲು ಹೋಗಿದ್ದಾಗ ಕ್ಲಿಕ್ಕಿಸಿಕೊಂಡಿದ್ದ ಚಿತ್ರಗಳೂ ಸಾಕಷ್ಟು ವೈರಲ್ ಆಗಿದ್ದವು. ಈ ವರ್ಷ ಏಪ್ರಿಲ್‌ನಲ್ಲಿ ಕೆಎಲ್ ರಾಹುಲ್ ಜನ್ಮದಿನದಂದು ಆಥಿಯಾ ಶೆಟ್ಟಿ, ‘ಮೈ ಪರ್ಸನ್’ ಎಂದು ರಾಹುಲ್ ಜತೆಗಿನ ಚಿತ್ರಕ್ಕೆ ಕ್ಯಾಪ್ಶನ್ ಬರೆದು, ಹೃದಯದ ಇಮೋಜಿ ಕೂಡ ಹಾಕಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಪೋಸ್ಟ್‌ಗಳಿಗೆ ಸದಾ ಪ್ರತಿಕ್ರಿಯಿಸುತ್ತಿರುತ್ತಾರೆ. ಕೆಎಲ್ ರಾಹುಲ್ ಜತೆಗೆ ಆಥಿಯಾ ಶೆಟ್ಟಿ ಹೆಸರು ಅತಿ ಹೆಚ್ಚಾಗಿ ಕೇಳಿಬಂದಿರುವುದರಿಂದಾಗಿ ಗೂಗಲ್‌ನಿಂದ ಈ ಎಡವಟ್ಟು ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

    ಬಾಂಬೆ ಬಿಟ್ಟು ಬೇರೆ ಯೋಚನೆ ಮಾಡಿ ಎಂದು ಸಂಜಯ್ ಮಂಜ್ರೇಕರ್‌ಗೆ ಕೆ.ಶ್ರೀಕಾಂತ್ ಗುದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts