

ಬೆಂಗಳೂರು: ಕರ್ನಾಟಕದಲ್ಲೂ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ತಮಿಳುನಾಡಿನ ಮೇಲ್ಮರವತ್ತೂರಿನ ಓಂ ಶಕ್ತಿ (ಆದಿಪರಾಶಕ್ತಿ) ದೇವಸ್ಥಾನದ ಸಂಸ್ಥಾಪಕರು ವಿಧಿವಶರಾಗಿದ್ದಾರೆ.
ತಮಿಳುನಾಡಿನಲ್ಲಿರುವ ಮೇಲ್ಮರವತ್ತೂರಿನ ಓಂ ಶಕ್ತಿ ಎಂದೇ ಖ್ಯಾತಿ ಪಡೆದಿರುವ ಆದಿಪರಾಶಕ್ತಿ ದೇವಸ್ಥಾನದ ಸಂಸ್ಥಾಪಕ ಹಾಗೂ ಮುಖ್ಯಸ್ಥರಾಗಿದ್ದ ಬಂಗಾರು ಅಡಿಗಳಾರ್ ಅವರು ನಿಧನದ ಕುರಿತ ಮಾಹಿತಿಯನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಓಂ ಶಕ್ತಿ ದೇವಸ್ಥಾನದ ಸಂಸ್ಥಾಪಕರು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಮಹಿಳೆಯರಿಗೆ ಶಕ್ತಿ ದೇವತೆಯರ ದೇವಾಲಯಗಳ ಗರ್ಭಗುಡಿಯೊಳಗೆ ಪ್ರವೇಶ ದೊರಕಿಸಿಕೊಡುವ ಮೂಲಕ ಕ್ರಾಂತಿಯೊಂದಕ್ಕೆ ನಾಂದಿ ಹಾಡಿದ್ದ ಮಾತೃಹೃದಯಿ ಸ್ವಾಮೀಜಿಯವರು ಲಕ್ಷಾಂತರ ಭಕ್ತರ ಪಾಲಿಗೆ ‘ಅಮ್ಮ’ನೇ ಆಗಿದ್ದರು. ಅವರ ನಿರ್ಗಮನದಿಂದ ಜಗತ್ತು ಒಂದು ಅಧ್ಯಾತ್ಮಿಕ ಚೇತನವನ್ನೇ ಕಳೆದುಕೊಂಡಂತಾಗಿದೆ ಎಂದು ಅವರು ಹೇಳಿದ್ದಾರೆ.
ಬಂಗಾರು ಅವರ ಆತ್ಮಕ್ಕೆ ಓಂ ಶಕ್ತಿ ತಾಯಿ ಶಾಂತಿ ನೀಡಲೆಂದು ಮತ್ತು ಅವರ ಕುಟುಂಬಸ್ಥರಿಗೆ ಹಾಗೂ ಕೋಟಿ ಕೋಟಿ ಭಕ್ತಾದಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂಬುದಾಗಿಯೂ ಅವರು ಹೇಳಿಕೊಂಡಿದ್ದಾರೆ.