ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

blank

ನವದೆಹಲಿ: ಟ್ರಕ್ ಹೊರಗೆ ಬಾಯಲ್ಲಿ ನೀರೂರಿಸುವಂಥ ಐಸ್​ ಕ್ರೀಮ್​ ಹಾಗೂ ಮಕ್ಕಳು ಐಸ್​​ ಕ್ರೀಮ್​ ಮೆಲ್ಲುವ ಆಕರ್ಷಕ ಚಿತ್ರ. ಅದೇ ಟ್ರಕ್​ನ ಡೋರ್​ ತೆರೆದು ನೋಡಿದರೆ ಒಳಗೆ ಮೃತದೇಹಗಳು. ರಣಾಂಗಣ ಆಗಿರುವ ಇಸ್ರೇಲ್​ನಲ್ಲಿ ಇಂಥದ್ದೊಂದು ಪರಿಸ್ಥಿತಿ ಸೃಷ್ಟಿಯಾಗಿದೆ.

blank

ಹಮಾಸ್ ಉಗ್ರರ ದಾಳಿಯಿಂದ ರಣಭೀಕರ ಪರಿಸ್ಥಿತಿ ಉಂಟಾಗಿರುವ ಇಸ್ರೇಲ್​ನಲ್ಲಿ ಇಂಥ ಐಸ್ ​ಕ್ರೀಮ್​ ಟ್ರಕ್​ಗಳು ಕಂಡುಬಂದಿದ್ದು, ಅವುಗಳ ಒಳಗೆ ಐಸ್​​ಕ್ರೀಮ್​ ಬದಲು ಮೃತಪಟ್ಟವರನೇಕರ ಶವಗಳನ್ನು ಸಂರಕ್ಷಿಸಿ ಇಡಲಾಗಿದೆ.

ಹಮಾಸ್ ಉಗ್ರರ ದಾಳಿಗೆ ಒಳಗಾಗಿರುವ ಗಾಜಾ ಪ್ರದೇಶದಲ್ಲಿ ಇಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಇಸ್ರೇಲಿಗರ ಪ್ರತಿದಾಳಿಗೆ ಹತರಾಗಿರುವ ಪ್ಯಾಲೆಸ್ತೀನಿಯರ ಶವಗಳನ್ನು ಶವಾಗಾರಗಳಿಗೆ ಕೊಂಡೊಯ್ಯುವುದು ಅಪಾಯಕಾರಿ ಆಗಿರುವುದರಿಂದ ಹಾಗೂ ಶವಗಳ ಹೆಚ್ಚಳದಿಂದ ಸ್ಮಶಾನದಲ್ಲೂ ಸ್ಥಳಾವಕಾಶ ಕೊರತೆ ಆಗಿರುವುದರಿಂದ ಅಲ್ಲಿನ ಆರೋಗ್ಯಾಧಿಕಾರಿಗಳು ಇಂಥ ಕ್ರಮವನ್ನು ಅನುಸರಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ದಾಖಲೆ ಬಳಸಿ ಬೇರೆಯವರು ಸಿಮ್ ಖರೀದಿಸಿದ್ದರೆ ತಿಳಿಯುವುದು ಹೇಗೆ?

ಹಮಾಸ್​ ಉಗ್ರರ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಭಯಾನಕ ಪ್ರತಿದಾಳಿ ನಡೆಸಿದ್ದು, ಇದರಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ಯಾಲೆಸ್ತೀನಿಯರು ಸಾವಿಗೀಡಾಗಿದ್ದರು. ಆಸ್ಪತ್ರೆಯಲ್ಲಿನ ಶವಾಗಾರದಲ್ಲಿ ಕೇವಲ 10 ಶವಗಳನ್ನಷ್ಟೇ ಇರಿಸಬಹುದು. ಹೀಗಾಗಿ ನಾವು ಐಸ್​ ಕ್ರೀಮ್ ಫ್ಯಾಕ್ಟರಿಗಳಿಂದ ಐಸ್​​ಕ್ರೀಮ್ ಟ್ರಕ್​ ತರಿಸಿ ಅದರಲ್ಲಿ ಶವಗಳನ್ನು ಇರಿಸಿದ್ದೇವೆ ಎಂಬುದಾಗಿ ಅಲ್ಲಿನ ಶುಹಾದಾ ಅಲ್​ ಅಕ್ಸಾ ಆಸ್ಪತ್ರೆಯ ಡಾ.ಯಾಸರ್ ಅಲಿ ತಿಳಿಸಿದ್ದಾರೆ.

ಗಾಜಾ ಮೇಲೆ ನಡೆದ ದಾಳಿಯಲ್ಲಿ 2,300ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, 10 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ನೋಡಿಕೊಳ್ಳುವುದು ಕೂಡ ಕಷ್ಟವಾಗಿದೆ. ದಾಳಿ ನಡೆದು ಹತ್ತು ದಿನಗಳಾದರೂ ಇನ್ನೂ ಇಸ್ರೇಲ್​ನ ರಣಭೀಕರ ಪರಿಸ್ಥಿತಿ ಶಮನಗೊಂಡಿಲ್ಲ.

ಆಧಾರ್ ಥರವೇ ಬರಲಿದೆ ಅಪಾರ್: ಒಂದು ದೇಶ ಒಂದು ಐಡಿ; ಇದು ಯಾರಿಗೆ?

Share This Article
blank

ರಸ್ತೆಯಲ್ಲಿ ಬಿದ್ದಿರುವ ಇಂತಹ ವಸ್ತುಗಳನ್ನು ದಾಟಿದ್ರೆ ಕೆಟ್ಟ ಸಮಯ ಆರಂಭವಾಗುತ್ತಂತೆ!: ಏನೀ ವಸ್ತುಗಳು ತಿಳಿಯಿರಿ.. | Vastu

Vastu : ರಸ್ತೆಯಲ್ಲಿ ಹಾಗಾಗ ವಿಚಿತ್ರ ವಸ್ತುಗಳು ಬಿದ್ದಿರುವುದನ್ನು ನಾವು ಗಮನಿಸುತ್ತೇವೆ. ಈ ವಸ್ತುಗಳ ಬಗ್ಗೆ…

ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರ ನಡುವೆ ಹೃದಯಾಘಾತಗಳು ಹೆಚ್ಚಾಗಿ ಸಂಭವಿಸುತ್ತವೆ! ಯಾಕೆ ಗೊತ್ತಾ? heart attacks

heart attacks: ಪ್ರಪಂಚದಾದ್ಯಂತ ಹೃದಯಾಘಾತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 12…

blank