ನಟ ಸುಶಾಂತ್ ಸಿಂಗ್​ 5ನೇ ಪುಣ್ಯ ಸ್ಮರಣೆ; ಸಹೋದರಿ ಶ್ವೇತಾ ಭಾವುಕ ನುಡಿ, ಅಭಿಮಾನಿಗಳು​ ಬೇಸರ | Sushant Singh

blank

Sushant Singh Rajput: ‘ದಿಲ್ ಬೆಚಾರ’ ಸಿನಿಮಾ ಮೂಲಕ ಬಾಲಿವುಡ್​ ಮಾತ್ರವಲ್ಲದೇ ತನ್ನೆಲ್ಲ ಅಭಿಮಾನಿಗಳಿಗೂ ಕೊನೆಯ ಗುಡ್​ಬೈ ಹೇಳಿದ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್, ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು ಇಂದಿಗೂ ನಿಗೂಢವೇ. ಸುಶಾಂತ್ ನಮ್ಮನ್ನೆಲ್ಲ ಅಗಲಿ ಇಂದಿಗೆ ಐದು ವರ್ಷಗಳು ಕಳೆದಿವೆ. ಈ ಪುಣ್ಯ ಸ್ಮರಣೆ ದಿನದಂದು ಅವರ ಅಭಿಮಾನಿಗಳು ಮತ್ತು ಕುಟುಂಬಸ್ಥರು ಭಾವುಕರಾಗಿದ್ದಾರೆ.

ಇದನ್ನೂ ಓದಿ: ರಸ್ತೆ ಒತ್ತುವರಿ ತೆರವುಗೊಳಿಸಲು ನಿರ್ಲಕ್ಷ್ಯ: ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಭರತ್‌ರಾಜ್ ಆರೋಪ

ನಟನ ಸಾವಿನ ಪ್ರಕರಣದಲ್ಲಿ ಅನಿರೀಕ್ಷಿತ ತಿರುವುಗಳು ಸಿಕ್ಕಿದ್ದು, ಇಂದಿಗೂ ಕೇಸ್​ ತನಿಖೆಯ ಹಂತದಲ್ಲಿದೆ. ಇದೆಲ್ಲದರ ನಡುವೆ ಸುಶಾಂತ್ ಅವರ ಐದನೇ ವರ್ಷದ ಪುಣ್ಯ ಸ್ಮರಣೆ ದಿನದಂದು ಅವರ ಸಹೋದರಿ ಶ್ವೇತಾ ಸಿಂಗ್ ಕೃತಿ ತೀರ ಭಾವುಕರಾಗಿದ್ದಾರೆ. ಸಹೋದರನ ಪ್ರಕರಣದ ತನಿಖೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಶ್ವೇತಾ, ಅಣ್ಣನ ನಿಗೂಢ ಸಾವಿನ ಹಿಂದಿರುವ ಕಾರಣವನ್ನು ತನಿಖೆ ಮೂಲಕ ಹೊರತರಲೇಬೇಕು ಎಂಬ ಪಟ್ಟುಹಿಡಿದು ಕೂತಿರುವುದು ನಟನ ಅಭಿಮಾನಿಗಳಲ್ಲಿ ನ್ಯಾಯದ ಭರವಸೆ ಬಿತ್ತಿದೆ.

ಸುಶಾಂತ್ ಕೇಸ್​ ಅಪ್ಡೇಟ್​

“ಇಂದು ಅಣ್ಣನ 5ನೇ ಪುಣ್ಯತಿಥಿ. ಜೂನ್ 14, 2020ರಂದು ಸುಶಾಂತ್​ ಸಾವಿನ ಬಳಿಕ ಬಹಳಷ್ಟು ಘಟನೆಗಳು ನಡೆದಿವೆ. ಈಗ ಸಿಬಿಐ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದೆ ಮತ್ತು ನಾವು ಅದನ್ನು ಮರುಪಡೆಯುವ ಪ್ರಕ್ರಿಯೆಯಲ್ಲಿದ್ದೇವೆ. ಇಲ್ಲಿ ನಾನು ಹೇಳಲು ಬಯಸುವುದೇನೆಂದರೆ, ಏನೇ ಸಂಭವಿಸಿದರೂ, ಧೈರ್ಯ ಕಳೆದುಕೊಳ್ಳಬೇಡಿ. ದೇವರಲ್ಲಿ ಅಥವಾ ಒಳ್ಳೆಯತನದಲ್ಲಿ ನಂಬಿಕೆಯಿಡಿ” ಎಂದು ಶ್ವೇತಾ ಹೇಳಿದ್ದಾರೆ.

ಇದನ್ನೂ ಓದಿ: 1100 ಡಿಗ್ರಿ ಸೆಲ್ಸಿಯಸ್​ ಶಾಖಕ್ಕೂ ಕರಗಲ್ಲ, ಮಾಹಿತಿ ನಾಶವಾಗಲ್ಲ! ಬ್ಲ್ಯಾಕ್​ ಬಾಕ್ಸ್​ನಲ್ಲಿವೆ 10 ಹಲವು ವಿಶೇಷತೆ | Black Box

 

“ನಮ್ಮ ಸುಶಾಂತ್ ಹೇಗೆ ಬದುಕಿ, ಬಾಳಿದ್ದರು ಎಂಬುದನ್ನು ಸದಾ ನೆನಪಿಡಿ. ಪರಿಶುದ್ಧತೆ, ಜೀವನ, ಕಲಿಕೆಗಾಗಿ ಅಪರಿಮಿತ ಉತ್ಸಾಹ, ಎಲ್ಲರನ್ನೂ ಸಮಾನವಾಗಿ ಕಾಣುವ ಮತ್ತು ದಾನ ಮಾಡುವಲ್ಲಿ ನಂಬಿಕೆಯಿಟ್ಟ ಪ್ರೀತಿಯ ಹೃದಯ. ಅವರ ನಗು ಮತ್ತು ಕಣ್ಣುಗಳು ಒಂದು ಮಗುವಿನಂತಹ ಮುಗ್ಧತೆಯನ್ನು ಹೊಂದಿತ್ತು. ಅದು ಎಂಥವರ ಹೃದಯವನ್ನು ಬೇಕಾದರೂ ಉಕ್ಕಿ ಹರಿಯುವ ಪ್ರೀತಿಯಿಂದ ಕಲಕಬಹುದು. ನಮ್ಮ ಸುಶಾಂತ್ ಇಂತಹ ಗುಣಗಳಿಂದಲೇ ಗುರುತಿಸಿಕೊಂಡವರು” ಎಂದು ಭಾವುಕ ನುಡಿಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

ಏರ್ ಇಂಡಿಯಾ ವಿಮಾನ ದುರಂತ ಬೆನ್ನಲ್ಲೇ ಹೊಸ ಚರ್ಚೆ ಶುರು! ಪ್ರಯಾಣಿಕರಲ್ಲಿ ಹೆಚ್ಚಿದ ಗೊಂದಲ | Emergency Door

Share This Article

ಯಾರಾದರೂ ನಿಮ್ಮ ಮುಂದೆ ಹಠಾತ್​ ಕುಸಿದುಬಿದ್ರೆ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ… Suddenly Collapsed

Suddenly Collapsed : ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರಾದರು ಒಬ್ಬರು ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು…

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…