ಏರ್ ಇಂಡಿಯಾ ವಿಮಾನ ದುರಂತ ಬೆನ್ನಲ್ಲೇ ಹೊಸ ಚರ್ಚೆ ಶುರು! ಪ್ರಯಾಣಿಕರಲ್ಲಿ ಹೆಚ್ಚಿದ ಗೊಂದಲ | Emergency Door

blank

Emergency Door: ಈ ಭೀಕರ ವಿಮಾನ ದುರಂತದಲ್ಲಿ 242 ಪ್ರಯಾಣಿಕರ ಪೈಕಿ ಪವಾಡದಂತೆ ಬದುಕುಳಿದ ಏಕೈಕ ಪ್ರಯಾಣಿಕ ರಮೇಶ್ ವಿಶ್ವಾಸ್ ಕುಮಾರ್. ಕೇವಲ ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ರಮೇಶ್​, ಏರ್ ಇಂಡಿಯಾದ ವಿಮಾನದ 11A ಸೀಟಿನಲ್ಲಿ ಕುಳಿತಿದ್ದರು. ಅಚ್ಚರಿ ಎಂದರೆ ಅವರು ಕುಳಿತ ಸೀಟು ಇಂದು ಅವರಿಗೆ ಮರುಜೀವ ನೀಡಿದೆ. ಇದು ಹಲವರ ಅಚ್ಚರಿ ಮತ್ತು ಹೊಸ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಜಾತಿ ವರ್ಗೀಕರಣಕ್ಕೆ ಅನುಗುಣವಾಗಿ ಒಳ ಮೀಸಲಾತಿ ಕೊಡಿ, ಬಳಿಕ ಸರ್ಕಾರಿ ಹುದ್ದೆಗಳ ಭರ್ತಿ ಮಾಡಿ

ಅಸಲಿಗೆ 11ಎ ಸೀಟು ಇದ್ದದ್ದು ವಿಮಾನದ ಮುಂಭಾಗದಲ್ಲಿರುವ ಬಿಜಿನೆಸ್​ ಕ್ಲಾಸ್​ ಕ್ಯಾಬಿನ್‌ನ ಹಿಂಭಾಗದಲ್ಲಿ, ಇದು ತುರ್ತು ನಿರ್ಗಮನದ ಪಕ್ಕದಲ್ಲೇ ಇದೆ. ರಮೇಶ್ ಪಡೆದಿದ್ದ ಸೀಟು ಕೂಡ ಅದೇ. ಮತ್ತೊಂದು ಶಾಕಿಂಗ್ ಸಂಗತಿ ಎಂದರೆ, ಈ ವಿಮಾನದಲ್ಲಿ ಒಟ್ಟು ಎಂಟು ತುರ್ತು ನಿರ್ಗಮನಗಳಿವೆ. ಆದರೆ, ರಮೇಶ್ ಕುಳಿತಿದ್ದ ಸೀಟು ಮಾತ್ರ ಎಲ್ಲಾ ಆಯಾಮಗಳಲ್ಲಿಯೂ ಅವರ ಜೀವಕ್ಕೆ ಆಪತ್ತು ತರದಂತೆ ರಕ್ಷಿಸಿರುವುದು ನಿಜಕ್ಕೂ ಪವಾಡವೇ. ವಿಮಾನ ಅಪಘಾತದ ಸಂದರ್ಭದಲ್ಲಿ ಕೆಲವೇ ಕೆಲವು ಸ್ಥಳಗಳು ಮಾತ್ರ ಸುರಕ್ಷಿತ ಎಂದು ತಜ್ಞರು ಹೇಳುತ್ತಾರೆ.

ಯಾವ ಸೀಟಿನಲ್ಲಿ ಕುಳಿತರೆ ಉತ್ತಮ?

ಏರ್ ಇಂಡಿಯಾ ವಿಮಾನ ದುರಂತದಲ್ಲಿ ತುರ್ತು ಬಾಗಿಲಿನಿಂದ ಜೀವ ಉಳಿಸಿಕೊಂಡ ರಮೇಶ್ ನಂತರ ಇದೀಗ ಹಲವರ ಕಣ್ಣು ಎಮರ್ಜೆನ್ಸಿ ಡೋರ್​ ಬಳಿಯಿರುವ ಸೀಟಿನ ಮೇಲೆ ಬಿದ್ದಿದೆ. ಮುಂದಿನ ಪ್ರಯಾಣಗಳಲ್ಲಿ ನಾವು ಎಮರ್ಜೆನ್ಸಿ ಬಾಗಿಲ ಅಕ್ಕಪಕ್ಕದ ಆಸನ ಬುಕ್ಕಿಂಗ್ ಮಾಡಿಕೊಳ್ಳುವುದೇ ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಬಹುತೇಕರು ಯಾವ ಸೀಟಿನಲ್ಲಿ ಕುಳಿತರೆ ನಾವು ಸೇಫ್ ಎಂಬ ಪ್ರಶ್ನೆಯನ್ನು ಚರ್ಚೆಗೆ ತಂದಿದ್ದಾರೆ.

ತಜ್ಞ ಕೀತ್ ಟೊಂಕಿನ್ ಹೇಳಿಕೆಯ ಪ್ರಕಾರ, “ತುರ್ತು ಬಾಗಿಲಿನ ಪಕ್ಕದಲ್ಲಿ ಕುಳಿತಿರುವ ಪ್ರಯಾಣಿಕರು, ತುರ್ತು ಪರಿಸ್ಥಿತಿಯಲ್ಲಿ ಕೇವಲ ಚುರುಕಿನಿಂದ ಹಾಗೂ ಬುದ್ಧಿವಂತಿಕೆಯಿಂದ ಕೂಡಲೇ ಹೊರಬರಬಹುದು. ಒಬ್ಬ ಪ್ರಯಾಣಿಕನು ಎಲ್ಲಿಂದಲಾದರೂ ಹೊರಬರಬಹುದು. ಗ್ರೀನ್‌ವಿಚ್ ವಿಶ್ವವಿದ್ಯಾಲಯದ ಅಧ್ಯಯನವು ವಿಮಾನದಲ್ಲಿ ತುರ್ತು ನಿರ್ಗಮನದ ಐದು ಸಾಲುಗಳ ಸೀಟಿನಲ್ಲಿ ಕುಳಿತುಕೊಳ್ಳುವ ಜನರು ತಕ್ಷಣವೇ ಹೊರಬರುವ ಸಾಧ್ಯತೆ ಹೆಚ್ಚು” ಎಂದಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಫಿಫಾ ಕ್ಲಬ್​ ವಿಶ್ವಕಪ್​: ಅಮೆರಿಕ ಆತಿಥ್ಯ, ಒಟ್ಟು ಬಹುಮಾನ ಮೊತ್ತ 8,607 ಕೋಟಿ ರೂ.

ಮಧ್ಯ ಮತ್ತು ಹಿಂಭಾಗದ ಆಸನಗಳು ಸುರಕ್ಷಿತವೆಂದು ವಿಶ್ಲೇಷಣೆಯು ತೋರಿಸಿದೆ. ಸಿಡ್ನಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಿಕೊ ಮರ್ಕರ್ಟ್ ಅವರ ಪ್ರಕಾರ, ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಹಿಂದಿನ ಅಪಘಾತ ದತ್ತಾಂಶಗಳನ್ನು ನೋಡಿದಾಗ, ವಿಮಾನದ ಹಿಂಭಾಗದ ಮಧ್ಯದ ಸೀಟುಗಳಲ್ಲಿ ಕುಳಿತ ಪ್ರಯಾಣಿಕರಿಗೆ ಸಂಭವಿಸುವ ಮಾರಕ ಅಪಘಾತಗಳ ಸಂಖ್ಯೆ ಕಡಿಮೆ ಎಂದು ವಿವರಿಸಿದೆ. ಆದಾಗ್ಯೂ, ಸುರಕ್ಷತಾ ಸೂಚನೆಗಳನ್ನು ಪಾಲಿಸುವುದು ಮತ್ತು ಕುಳಿತುಕೊಳ್ಳುವ ಸ್ಥಳದಲ್ಲಿ ಮಾತ್ರವಲ್ಲದೆ ಯಾವಾಗಲೂ ಸೀಟ್ ಬೆಲ್ಟ್ ಧರಿಸುವುದು ಮುಖ್ಯ ಎನ್ನಲಾಗಿದೆ,(ಏಜೆನ್ಸೀಸ್).

ಯಾರು ದೇವರು? ಎಲ್ಲಿದ್ದಾನೆ ಗೊತ್ತಾ? ದೇವರೇ ಮೈಮೇಲೆ ಬಂದಂತೆ ಆಡಿದ ಮಹಿಳೆಗೆ ವೃದ್ಧನ ಪಾಠ | Oldman Wisdom

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…