More

    ಕೀರ್ತಿ ಸುರೇಶ್ ಮದುವೆ ಆಗ್ತಿದ್ದಾರಾ? ನಟಿಯ ತಂದೆ ನೀಡಿದ ಸ್ಪಷ್ಟನೆ ಹೀಗಿದೆ…

    ನವದೆಹಲಿ: ನಟಿ ಕೀರ್ತಿ ಸುರೇಶ್ ಉದ್ಯಯೊಬ್ಬರೊಂದಿಗೆ ಕೆಲ ಸಮಯದಿಂದ ಡೇಟಿಂಗ್ ಮಾಡುತ್ತಿದ್ದು, ಮದುವೆ ಆಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ತಮ್ಮ ಬಗ್ಗೆ ವದಂತಿ ಹಬ್ಬುತ್ತಿದ್ದಂತೆ ಸ್ಪಷ್ಟನೆ ಕೊಟ್ಟಿದ್ದ ನಟಿ, ಈ ಸುದ್ದಿ ನಿಜವಲ್ಲ, ನಾನು ಈ ಉದ್ಯಮಿಯನ್ನು ಮದುವೆ ಆಗುತ್ತಿಲ್ಲ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಫ್ಯಾಷನ್ ಉದ್ಯಮಿಯೊಂದಿಗೆ ಎರಡನೇ ಮದುವೆಯಾದ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ!

    ದುಬೈ ಮೂಲದ ಉದ್ಯಮಿಯೊಬ್ಬರೊಂದಿಗೆ ಮದುವೆ ಆಗುತ್ತಾರೆ ಎಂಬ ಬಗ್ಗೆ ಚರ್ಚೆಗಳಾಗುತ್ತಿದ್ದಂತೆ, ಕೀರ್ತಿ ಸುರೇಶ್ ಹುಡುಗನೊಬ್ಬನ ಜತೆ ಕಾಣಿಸಿಕೊಂಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಬ್ಯುಸಿನೆಸ್ ಮ್ಯಾನ್ ಫರ್ಹಾನ್ ಬಿನ್ ಲಿಯಾಕತ್ ಎಂಬಾತನನ್ನು ಕೀರ್ತಿ ಸುರೇಶ್ ಪ್ರೀತಿ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು.

    ಇದನ್ನೂ ಓದಿ: ಮಂತ್ರಿ ಸ್ಥಾನ ದೊರೆತ ಬೆನ್ನಲ್ಲೇ ಅಜ್ಜಿಯೂ ಆದ ಲಕ್ಷ್ಮೀ ಹೆಬ್ಬಾಳ್ಕರ್

    ಫರ್ಹಾನ್ ಮತ್ತು ಕೀರ್ತಿ ಸುರೇಶ್ ಪ್ರೀತಿಸುತ್ತಿದ್ದು, ಮದುವೆ ಆಗಲಿದ್ದಾರೆ ಎಂಬ ವದಂತಿಗೆ ಸಂಬಂಧಿಸಿದಂತೆ ನಟಿಯ ತಂದೆ, ನಿರ್ಮಾಪಕರೂ ಆಗಿರುವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಮಗಳು ಯಾರನ್ನೂ ಮದುವೆ ಆಗುತ್ತಿಲ್ಲ. ಉದ್ಯಮಿ ಫರ್ಹಾನ್ ಜತೆಗೆ ಕೀರ್ತಿ ಸುರೇಶ್ ವಿವಾಹವಾಗಲಿದ್ದಾರೆ ಎಂಬ ವರದಿಗಳು ಸುಳ್ಳು ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts