ಸಿನಿಮಾ

ಮಂತ್ರಿ ಸ್ಥಾನ ದೊರೆತ ಬೆನ್ನಲ್ಲೇ ಅಜ್ಜಿಯೂ ಆದ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಮೊದಲ ಬಾರಿಗೆ ಮಂತ್ರಿ ಸ್ಥಾನ ಸಿಕ್ಕಿದ ಸಂತಸದಲ್ಲಿರುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರೀಗ ಅಜ್ಜಿಯಾದ ಖುಷಿಯಲ್ಲಿದ್ದಾರೆ. ಮಂತ್ರಿ ಸ್ಥಾನ ಲಭಿಸಿದ ದಿನವೇ ಮನೆಗೆ ಮೊಮ್ಮಗಳ ಆಗಮನವಾಗಿದೆ. ಇದನ್ನೂ ಓದಿ: VIDEO | ಪಟ್ಟದಕಲ್ಲಿನಲ್ಲಿದೆ ಪುರಾತನ ಕಾಲದ ಸೆಂಗೋಲ್​ನ ಪ್ರತಿರೂಪ!

ಸಿದ್ದರಾಮಯ್ಯ ಮಂತ್ರಿ ಮಂಡಲದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಸಚಿವ ಸ್ಥಾನ ಒದಗಿ ಬಂದಿದೆ. ಪ್ರಮಾಣವಚನ ಸ್ವೀಕಾರ ಖುಷಿ ಒಂದೆಡೆಯಾದರೆ, ಅಜ್ಜಿಯಾದ ಸಂತಸ ಮತ್ತೊಂದೆಡೆ. ಲಕ್ಷ್ಮೀ ಹೆಬ್ಬಾಳ್ಕರ್ ಸೊಸೆ ಹಿತಾ ಹೆಬ್ಬಾಳ್ಕರ್ ಮೇ.26ರ ರಾತ್ರಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪುತ್ರ ಮೃಣಾಲ್, ಸೊಸೆ ಹಿತಾಗೆ ಹೆಣ್ಣು ಮಗು ಜನಿಸಿದ್ದಕ್ಕೆ ಹೆಬ್ಬಾಳ್ಕರ್ ಖುಷಿಯಾಗಿದ್ದಾರೆ.

ನೂತನ ಸಚಿವರ ಪ್ರಮಾಣ ವಚನ ಹಿನ್ನೆಲೆ ಬೆಂಗಳೂರಿನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಸುದ್ದಿಗಾರರೊಂದಿಗೆ ಮತಾನಾಡುತ್ತಾ, ತಾನು ಅಜ್ಜಿ ಆಗಿರುವ ವಿಚಾರವನ್ನು ಬಹಿರಂಗಪಡಿಸಿದರು. ನನಗೆ ಇಂದು ಡಬಲ್ ಧಮಾಕ ಹೊಡೆದಿದೆ. ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ. ಅದರ ಜತೆಗೆ ನನಗೆ ಮೊಮ್ಮಗಳು ಹುಟ್ಟಿದ್ದಾಳೆ, ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆ ಎಂದು ಹೇಳಿಕೊಂಡಿದ್ದಾರೆ.

Latest Posts

ಲೈಫ್‌ಸ್ಟೈಲ್