ಸಿನಿಮಾ

VIDEO | ಪಟ್ಟದಕಲ್ಲಿನಲ್ಲಿದೆ ಪುರಾತನ ಕಾಲದ ಸೆಂಗೋಲ್​ನ ಪ್ರತಿರೂಪ!

ಬಾಗಲಕೋಟೆ: ಮೇ 28ರಂದು ನೂತನ ಸಂಸತ್​ ಭವನ ಲೋಕಾರ್ಪಣೆಗೊಳ್ಳಲಿದೆ. ಅದೇ ದಿನ ಪ್ರಧಾನಿ ಮೋದಿ ಐತಿಹಾಸಿಕ ಚಿನ್ನದ ರಾಜದಂಡವನ್ನು ಲೋಕಸಭಾಧ್ಯಕ್ಷರ ಸೀಟಿನ ಹಿಂಭಾಗದಲ್ಲಿ ಸ್ಥಾಪಿಸಲಿದ್ದಾರೆ.

ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರ ಹಸ್ತಾಂತರವಾಗಿದ್ದನ್ನು ಗುರುತಿಸಲು ಈ ರಾಜದಂಡವನ್ನು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಹಸ್ತಾಂತರಿಸಲಾಗಿತ್ತು. ಈ ರಾಜದಂಡವನ್ನು ಸೆಂಗೋಲ್​ ಎಂದು ಕರೆಯಲಾಗುತ್ತದೆ. ಇದು ತಮಿಳು ಪದವಾಗಿದ್ದು, ಸಂಪದ್ಭರಿತ ಎಂಬ ಅರ್ಥವನ್ನು ಸೂಚಿಸುತ್ತದೆ.

ಇದನ್ನೂ ಓದಿ: ಹೊಸ ಸಂಸತ್​ ಭವನದಲ್ಲಿ ಪ್ರಧಾನಿಯಿಂದ ರಾಜದಂಡ ಸೆಂಗೋಲ್​ ಸ್ಥಾಪನೆ: ತಮಿಳಿನ ಸೆಂಗೋಲ್ ಹಿನ್ನೆಲೆ ಇಲ್ಲಿದೆ…

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಪಟ್ಟದಕಲ್ಲಿನಲ್ಲಿ ಸೆಂಗೋಲ್​ ಪ್ರತಿರೂಪ ಕಾಣಿಸುತ್ತದೆ. ಚಾಲುಕ್ಯರ ಕಾಲದ ವಿರೂಪಾಕ್ಷ ದೇವಾಲಯದ ಗೋಡೆಯಲ್ಲಿ ಕೆತ್ತಲಾಗಿರುವ ಶಿವನ ಮೂರ್ತಿಯ ಎಡ ಕೈಯಲ್ಲಿ ಸೆಂಗೋಲ್ ಪ್ರತಿರೂಪ ಇರುವುದನ್ನು ಕಾಣಬಹುದಾಗಿದೆ.

ಜತುರ್ಭುಜ ಹೊಂದಿರುವ ಶಿವನ ಮೂರ್ತಿ ಇದಾಗಿದ್ದು, ಅಜ್ಞಾನದ ಸಂಕೇತವಾಗಿರುವ ಮೂರ್ತಿಯೊಂದನ್ನು ತುಳಿದು ನಟರಾಜನ ಭಂಗಿಯಲ್ಲಿ ನೃತ್ಯ ಮಾಡುವ ಕೆತ್ತನೆ ಇದಾಗಿದೆ. ವಿರುಪಾಕ್ಷ ದೇವಾಲಯವು ಅಂದಾಜು ಕ್ರಿ.ಶ. 740ರಲ್ಲಿ ಚಾಲುಕ್ಯ ಅರಸರ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಇತಿಹಾಸ ಹೇಳುತ್ತದೆ. ಅವತ್ತೆ ಶಿಲ್ಪಿ ಸೆಂಗೋಲ್ ಪ್ರತಿರೂಪವನ್ನು ಕೆತ್ತನೆ ಮಾಡಿದ್ದಾನೆ.

ಇದನ್ನೂ ಓದಿ: ಸಚಿವ ಸ್ಥಾನ ನೀಡಿದ್ದರೆ ಚೆನ್ನಾಗಿತ್ತು: ಶಾಸಕ ಪುಟ್ಟರಂಗಶೆಟ್ಟಿ

ಇದೀಗ ಕರುನಾಡಿನ ಚಾಲುಕ್ಯ ಅರಸರ ಕಾಲದಲ್ಲಿ ಸೆಂಗೋಲ್ ಬಳಕೆಯಲ್ಲಿತ್ತು‌ ಎಂಬ ಚರ್ಚೆಗಳು ಇದೀಗ ಆರಂಭವಾಗಿವೆ. ಪಟ್ಟದಕಲ್ಲು ಚಾಲುಕ್ಯ ಅರಸರಿಗೆ ಅತ್ಯಂತ ಮಹತ್ವದ ಸ್ಥಳವಾಗಿದ್ದು, ಚಾಲುಕ್ಯರ ದೊರೆಗಳಿಗೆ ಇಲ್ಲಿಯೇ ಪಟ್ಟಾಭಿಷೇಕ ಆಗುತ್ತಿದ್ದರು ಎಂದು ಇತಿಹಾಸಲ್ಲಿ ಉಲ್ಲೇಖವಾಗಿದೆ. ಇದೇ ಕಾರಣಕ್ಕೆ ಪಟ್ಟದಕಲ್ಲು ಎಂದು ಹೆಸರು ಬಂದಿದೆ.

Latest Posts

ಲೈಫ್‌ಸ್ಟೈಲ್