More

    ಹೊಸ ಸಂಸತ್​ ಭವನದಲ್ಲಿ ಪ್ರಧಾನಿಯಿಂದ ರಾಜದಂಡ ಸೆಂಗೋಲ್​ ಸ್ಥಾಪನೆ: ತಮಿಳಿನ ಸೆಂಗೋಲ್ ಹಿನ್ನೆಲೆ ಇಲ್ಲಿದೆ…

    ನವದೆಹಲಿ: ಇದೇ ಭಾನುವಾರ ಅಂದರೆ ಮೇ 28ರಂದು ಹೊಸ ಸಂಸತ್​ ಭವನ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿದೆ. ಅದೇ ದಿನ ಮೋದಿ ಅವರು ಐತಿಹಾಸಿಕ ಚಿನ್ನದ ರಾಜದಂಡವನ್ನು ಲೋಕಸಭಾಧ್ಯಕ್ಷರ ಸೀಟಿನ ಹಿಂಭಾಗದಲ್ಲಿ ಸ್ಥಾಪಿಸಲಿದ್ದಾರೆ ಎಂದು ಕೇಂದ್ರ ಗೃಹಸಚಿವ ಅಮಿತ್​ ಷಾ ಅವರು ಇಂದು ತಿಳಿಸಿದರು.

    ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರ ಹಸ್ತಾಂತರವಾಗಿದ್ದನ್ನು ಗುರುತಿಸಲು ಈ ರಾಜದಂಡವನ್ನು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಹಸ್ತಾಂತರಿಸಲಾಯಿತು ಎಂದು ಅಮಿತ್​ ಷಾ ಹೇಳಿದರು. ಈ ರಾಜದಂಡವನ್ನು ಸೆಂಗೋಲ್​ ಎಂದು ಕರೆಯಲಾಗುತ್ತದೆ. ಇದು ತಮಿಳು ಪದವಾಗಿದ್ದು, ಸಂಪದ್ಭರಿತ ಎಂಬ ಅರ್ಥವನ್ನು ಸೂಚಿಸುತ್ತದೆ ಎಂದು ಅಮಿತ್​ ಷಾ ತಿಳಿಸಿದರು.

    ಇದನ್ನೂ ಓದಿ: ಈಜುಕೊಳದಲ್ಲಿ ಮಿಂದೆದ್ದ ಎಮ್ಮೆಗಳು! ದಂಪತಿಗಾದ ನಷ್ಟದ ಮೊತ್ತ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

    ಸೆಂಗೋಲ್​ ಇತಿಹಾಸ

    ಬ್ರಿಟಿಷ್ ಇಂಡಿಯಾದ ಕೊನೆಯ ವೈಸ್​ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ಪ್ರಧಾನಿ ನೆಹರೂ ಅವರಿಗೆ ಕೇಳಿದ ಸರಳ ಪ್ರಶ್ನೆಯೊಂದಿಗೆ ಪ್ರಾರಂಭವಾದ ಘಟನೆಗಳ ಸರಣಿಯ ನಂತರ ಈ ಸೆಂಗೋಲ್ ಅಸ್ತಿತ್ವಕ್ಕೆ ಬಂದಿತು. ಇತಿಹಾಸ ತಜ್ಞರು ಮತ್ತು ಹಳೆಯ ವರದಿಗಳ ಪ್ರಕಾರ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅಧಿಕಾರವನ್ನು ಹಸ್ತಾಂತರ ಮಾಡುವಾಗ ಅದರ ನೆನಪಿಗೆ ಏನನ್ನು ಗುರುತಿಸಬಹುದು ಎಂದು ಪ್ರಧಾನಿಯಾಗಲಿದ್ದ ನೆಹರು ಅವರಿಗೆ ಮೌಂಟ್ ಬ್ಯಾಟನ್ ಕೇಳಿದ್ದರು.

    ಬಳಿಕ ನೆಹರು ಅವರು ದೇಶದ ಕೊನೆಯ ಗವರ್ನರ್​ ಜನರಲ್​ ಆಗಿದ್ದ ಸಿ. ರಾಜಗೋಪಾಲಚಾರಿ ಅವರ ಕಡೆ ನೋಡಿ ಸಲಹೆ ನೀಡುವಂತೆ ಕೋರಿದರು. ನಂತರ ರಾಜಾಜಿ ಎಂದೇ ಖ್ಯಾತರಾಗಿದ್ದ ರಾಜಗೊಪಾಲಚಾರಿ ಅವರು ನೆಹರು ಅವರಿಗೆ ತಮಿಳು ಸಂಪ್ರದಾಯದ ಬಗ್ಗೆ ತಿಳಿಸಿದರು. ಅಧಿಕಾರಕ್ಕೆ ಬಂದಾಗ ಹೊಸ ರಾಜನಿಗೆ ಪ್ರಧಾನ ಅರ್ಚಕರು ರಾಜದಂಡವನ್ನು ಹಸ್ತಾಂತರಿಸುವ ತಮಿಳು ಸಂಪ್ರದಾಯದ ಬಗ್ಗೆ ವಿವರಿಸಿದರು.

    ಇದನ್ನೂ ಓದಿ: ಕರೊನಾ ಹೋಯ್ತಲ್ಲ ಅಂತ ನಿಟ್ಟುಸಿರು ಬಿಡುವಾಗಲೇ ಮತ್ತೊಂದು ಎಚ್ಚರಿಕೆ ನೀಡಿದ ಡಬ್ಲ್ಯುಎಚ್​ಒ

    ಭಾರತದ ಸ್ವಾತಂತ್ರ್ಯವನ್ನು ಗುರುತಿಸಲು ಇದೇ ಸಂಪ್ರದಾಯವನ್ನು ಅನುಸರಿಸಬಹುದು ಎಂದು ರಾಜಗೋಪಾಲಚಾರಿ ಅವರು ನೆಹರು ಅವರಿಗೆ ಹೇಳಿದರು. ನಂತರ ಆ ಐತಿಹಾಸಿಕ ಕ್ಷಣಕ್ಕಾಗಿ ರಾಜದಂಡವನ್ನು ವ್ಯವಸ್ಥೆ ಮಾಡುವ ಜವಬ್ದಾರಿಯು ರಾಜಾಜಿ ಅವರ ಮೇಲೆ ಬಿದ್ದಿತು. ಬ್ರಿಟಿಷರಿಂದ ಅಧಿಕಾರ ಹಸ್ತಾಂತರ ಮಾಡುವಾಗ ಅದರ ಗುರುತಿಗೆ ರಾಜದಂಡವನ್ನು ಮೌಂಟ್​ ಬ್ಯಾಟನ್​ ಅವರು ನೆಹರು ಅವರಿಗೆ ಹಸ್ತಾಂತರ ಮಾಡಿದರು. (ಏಜೆನ್ಸೀಸ್​)

    ನೂತನ ವಿಧಾನಸಭಾ ಸ್ಪೀಕರ್​ ಆಗಿ ಯು.ಟಿ. ಖಾದರ್ ಅವಿರೋಧ ಆಯ್ಕೆ

    2 ವರ್ಷ ಕಳೆಯಲಿ, ಮತ್ತೆ 8 ವರ್ಷ ಡಿಕೆಶಿ ಸಿಎಂ; ಭವಿಷ್ಯ ನುಡಿದ ಜ್ಯೋತಿಷಿ!

    ನಟಿ ಸಂಧ್ಯಾ ರೆಸಾರ್ಟ್​ನಲ್ಲಿ ನೀಚ ಕೃತ್ಯ: ಕೋಣೆಗೆ ನುಗ್ಗಿದ ರೂಮ್​ ಬಾಯ್,​ ಭಯಾನಕ ಸಂಗತಿ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts