More

    ಲಾಲ್​ ಸಲಾಂ ಚಿತ್ರದಲ್ಲಿ ಕಪಿಲ್​ ದೇವ್​: ಕ್ರಿಕೆಟ್​ ಲೆಜೆಂಡ್​ ಜತೆ ನಟಿಸುವುದು ನನ್ನ ಸೌಭಾಗ್ಯ ಎಂದ ರಜನಿಕಾಂತ್​

    ಚೆನ್ನೈ: ಸೂಪರ್​ ಸ್ಟಾರ್​ ರಜನಿಕಾಂತ್​ ಪುತ್ರಿ ಐಶ್ವರ್ಯಾ ರಜನಿಕಾಂತ್​ ನಿರ್ದೇಶನ ಮಾಡುತ್ತಿರುವ ಲಾಲ್​ ಸಲಾಂ ಸಿನಿಮಾದಲ್ಲಿ ರಜನಿಕಾಂತ್​ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಮತ್ತೊಂದು ಬ್ರೇಕಿಂಗ್​ ಸುದ್ದಿ ಚಿತ್ರತಂಡದಿಂದ ಹೊರಬಿದ್ದಿದೆ. ಅದೇನೆಂದರೆ, ರಜನಿಕಾಂತ್​ ಜತೆ ಭಾರತಕ್ಕೆ ಚೊಚ್ಚಲ ವಿಶ್ವಕಪ್​ ತಂದುಕೊಟ್ಟ ಟೀಮ್​ ಇಂಡಿಯಾದ ಮಾಜಿ ನಾಯಕ ಕಪಿಲ್​ ದೇವ್​ ಕೂಡ ಲಾಲ್​ ಸಲಾಂ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಒದಗಿ ಬಂದ ಗೌರವ

    ಈ ಕುರಿತು ರಜನಿಕಾಂತ್​ ಅವರು ಟ್ವೀಟ್​ ಮಾಡಿ ಖಚಿತಪಡಿಸಿದ್ದಾರೆ. ಚೊಚ್ಚಲ ಕ್ರಿಕೆಟ್ ವಿಶ್ವಕಪ್ ಗೆದ್ದು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ ದಿಗ್ಗಜ, ಅತ್ಯಂತ ಗೌರವಾನ್ವಿತ ಮತ್ತು ಅದ್ಭುತ ವ್ಯಕ್ತಿತ್ವವುಳ್ಳ ಕಪಿಲ್‌ ದೇವ್‌ಜಿ ಅವರೊಂದಿಗೆ ಕೆಲಸ ಮಾಡುವುದು ನನಗೆ ಒದಗಿ ಬಂದ ಗೌರವವಾಗಿದೆ ಎಂದು ರಜಿನಿಕಾಂತ್​ ಟ್ವೀಟ್​ ಮಾಡಿದ್ದು, ಮುಂಬೈನ ಲಾಲ್​ ಸಲಾಂ ಸಿನಿಮಾ ಸೆಟ್​ನಲ್ಲಿ ಇಬ್ಬರು ಉಭಯ ಕುಶಲೋಪರಿ ನಡೆಸುತ್ತಿರುವ ಫೋಟೋವನ್ನು ರಜನಿ ಪೋಸ್ಟ್​ ಮಾಡಿದ್ದಾರೆ.

    ಇದನ್ನೂ ಓದಿ: ಜರ್ಸಿ ನಂ. 18, ಮೇ 18 ಮತ್ತು ಶತಕ: 18ನೇ ಸಂಖ್ಯೆ ಹಿಂದಿನ ರಹಸ್ಯ ಬಿಚ್ಚಿಟ್ಟ ಕಿಂಗ್​ ಕೊಹ್ಲಿ!

    ಮೋಯಿದ್ದೀನ್​ ಭಾಯ್ ಆದ ರಜನಿ

    ಲಾಲ್​ ಸಲಾಂ ಸಿನಿಮಾ ಶೂಟಿಂಗ್​ಗಾಗಿ ಆ ವಾರದ ಆರಂಭದಲ್ಲೇ ರಜಿನಿಕಾಂತ್​ ಮುಂಬೈ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಈ ಸಿನಿಮಾದಲ್ಲಿ ಕಪಿಲ್​ ದೇವ್​ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅಭಿಮಾನಿಗಳಿಗೆ ಈ ಸುದ್ದಿ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ರಜನಿಕಾಂತ್​ ಅವರು ಮೋಯಿದ್ದೀನ್​ ಭಾಯ್​ ಹೆಸರಿನ ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರತಂಡ ರಜನಿಕಾಂತ್​ ಅವರ ಫಸ್ಟ್​ ಲುಕ್​ ಅನ್ನು ಬಿಡುಗಡೆ ಮಾಡಿದ್ದಾರೆ.

    Lal Salam Rajani

    ಇದನ್ನೂ ಓದಿ: ನಿಮ್ಮ ಹಳೆಯ ಚಿನ್ನಕ್ಕೆ ಕುತ್ತು? ಕೇಂದ್ರದಿಂದ ಹೊಸ ನಿಯಮ, ಕೂಡಲೇ ಈ ಕೆಲಸ ಮಾಡಿ…

    ಅಂದಹಾಗೆ ಈ ಸಿನಿಮಾವನ್ನು ಐಶ್ವರ್ಯಾ ರಜನಿಕಾಂತ್​ ಅವರು ನಿರ್ದೇಶನ ಮಾಡುತ್ತಿದ್ದು, ಲೈಕಾ ಪ್ರೊಡಕ್ಷನ್ಸ್​ನಡಿ ಸುಭಾಸ್ಕರನ್​ ನಿರ್ಮಾಣ ಮಾಡಿದರೆ, ಎ.ಆರ್. ರೆಹಮಾನ್​ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಷ್ಣು ವಿಶಾಲ್​ ಮತ್ತು ವಿಕ್ರಾಂತ್​ ಸಂತೋಷ್​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಕಥೆ ಏನು, ಯಾರೆಲ್ಲ ನಟಿಸುತ್ತಿದ್ದಾರೆ ಎಂಬ ಮಾಹಿತಿಗಳು ಸದ್ಯಕ್ಕೆ ಇಲ್ಲ. ಆದರೆ, ರಜಿನಿಕಾಂತ್​ ಫಸ್ಟ್​ ಲುಕ್​ ಪೋಸ್ಟರ್​ ನೋಡಿದರೆ, ಇದೊಂದು ಗಲಭೆ ಕುರಿತಾದ ಚಿತ್ರ ಎಂಬುದು ತಿಳಿಯುತ್ತದೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಕ್ರಿಕೆಟ್​ ಒಂದು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಸಹ ಪೋಸ್ಟರ್​ ಸೂಚಿಸಿದೆ. ಈ ವರ್ಷದ ಅಂತ್ಯದಲ್ಲಿ ಚಿತ್ರ ತೆರೆಗೆ ಬರಲಿದೆ. (ಏಜೆನ್ಸೀಸ್​)

    ‘ಲಾಲ್​ ಸಲಾಂ’ ಎಂದ ರಜನಿಕಾಂತ್​; ಮಗಳ ಚಿತ್ರದಲ್ಲಿ ಅತಿಥಿ ಪಾತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts