More

    ನಿಮ್ಮ ಹಳೆಯ ಚಿನ್ನಕ್ಕೆ ಕುತ್ತು? ಕೇಂದ್ರದಿಂದ ಹೊಸ ನಿಯಮ, ಕೂಡಲೇ ಈ ಕೆಲಸ ಮಾಡಿ…

    ದೆಹಲಿ: ಚಿನ್ನಾಭರಣಗಳು, ಚಿನ್ನದ ಕಲಾಕೃತಿ ಕೊಳ್ಳುವವರಿಗೆ-ಮಾರುವವರಿಗೆ ಮತ್ತು ಚಿನ್ನದ ಹಾಲ್‌ಮಾರ್ಕ್​ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೊಳಿಸುವುದಕ್ಕೆ ಸಿದ್ಧವಾಗಿದೆ. ಹೊಸ ನಿಯಮಗಳು 2023ರ ಏಪ್ರಿಲ್ 1ರಿಂದ ಜಾರಿಗೆಯಾಗಲಿದ್ದು, ಎಲ್ಲಾ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳು ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ(HUID) ಸಂಖ್ಯೆಯನ್ನು ಹೊಂದಿರಬೇಕು.

    ಒಂದು ವೇಳೆ ನೀವು ಹಳೆಯ, ಹಾಲ್‌ಮಾರ್ಕ್ ಇಲ್ಲದ ಚಿನ್ನದ ಆಭರಣಗಳನ್ನು ಹೊಂದಿದ್ದರೆ, ನೀವು ಅದಕ್ಕೆ ಮೊದಲು ಹಾಲ್‌ಮಾರ್ಕ್ ಸಂಖ್ಯೆ ನಮೂದಿಸಬೇಕು. ಇಲ್ಲದಿದ್ದರೆ ಅದನ್ನು ಮಾರಾಟ ಮಾಡಲು ಅಥವಾ ಹೊಸ ಚಿನ್ನಾಭರಣದ ವಸ್ತುಗಳಿಗೆ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

    ಇದನ್ನೂ ಓದಿ: ನೈಟ್ ಲ್ಯಾಂಡಿಂಗ್ಗೆ ಗ್ರೀನ್ ಸಿಗ್ನಲ್

    ಬಿಐಎಸ್ ಪ್ರಕಾರ, ಹಾಲ್‌ಮಾರ್ಕ್ ಇಲ್ಲದ ಚಿನ್ನದ ಆಭರಣಗಳನ್ನು ಹೊಂದಿರುವ ಗ್ರಾಹಕರು ಅದನ್ನು ಮಾರಾಟ ಮಾಡುವ ಮೊದಲು ಅಥವಾ ಹೊಸ ಚಿನ್ನಾಭರಣದ ವಸ್ತುಗಳಿಗೆ ವಿನಿಮಯ ಮಾಡಿಕೊಳ್ಳುವ ಮೊದಲು ಕಡ್ಡಾಯವಾಗಿ ಹಾಲ್‌ಮಾರ್ಕ್ ಮಾಡಿಸಬೇಕು.

    ಅಲ್ಲದೇ, ಚಿನ್ನದ ವಸ್ತುಗಳು BIS ಲೋಗೋ ಮತ್ತು 22K ಅಥವಾ 18K ಶುದ್ಧತೆಯ ಗುರುತನ್ನು ಸಹ ಹೊಂದಿರಬೇಕು. ಬಿಐಎಸ್ ನೋಂದಾಯಿತ ಆಭರಣ ವ್ಯಾಪಾರಿಗಳ ಮೂಲಕ ನಿಮ್ಮ ಹಳೆಯ ಅಥವಾ ಹಾಲ್‌ಮಾರ್ಕ್ ಇಲ್ಲದ ಆಭರಣಗಳಿಗೆ ಹಾಲ್‌ಮಾರ್ಕ್ ಹಾಕಿಸಬಹುದು. ಈ ಹೊಸ ನಿಯಮಗಳು ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಖರೀದಿಗೆ ಬಂದಾಗ ಹೆಚ್ಚಿನ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ವರ್ಧಿತ ಗ್ರಾಹಕರ ವಿಶ್ವಾಸವನ್ನು ತರಲು ನಿರೀಕ್ಷಿಸಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts