ಸರ್ಕಾರಿ ಶಾಲೆಯ ಆವರಣದೊಳಗೇ ರಕ್ತಸಿಕ್ತ ಸ್ಥಿತಿಯಲ್ಲಿ ಯುವಕನ ಶವ ಪತ್ತೆ!

belagavi murder
Published on

ಬೆಳಗಾವಿ: ಬೆಳಗಾವಿಯ ಮಾರಿಹಾಳ ಸರ್ಕಾರಿ ಶಾಲೆಯ ಆವರಣದೊಳಗೆ ರಕ್ತಸಿಕ್ತ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾಗಿದೆ.

ಶಾಲೆ ಕೊಠಡಿಯ ಎದುರೇ ಯುವಕನ ಶವ ಪತ್ತೆಯಾಗಿದ್ದು ಬೆಳ್ಳಂಬೆಳಗ್ಗೆ ರಕ್ತದ ಮಡುವಿನಲ್ಲಿ ಬಿದ್ದ ಯುವಕನ ಮೃತದೇಹ ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಮೃತ ಯುವಕನನ್ನು 24 ವರ್ಷದ ಮಹಾಂತೇಶ ಕರಲಿಂಗಣ್ಣನವರ್ ಎಂದು ಗುರುತಿಸಲಾಗಿದೆ.

ಮಧ್ಯರಾತ್ರಿ ಮಹಾಂತೇಶ ಕರಲಿಂಗಣ್ಣವರ್ ಮಾರಾಕಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇನ್ನೂ ಬಾಳಿ ಬದುಕಬೇಕಾಗಿದ್ದ ಕುಟುಂಬದ ಸದಸ್ಯ ಇನ್ನಿಲ್ಲ ಎಂಬ ವ್ಯಥೆಯಲ್ಲಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಮಾರಿಹಾಳ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net