ಜೀವನದಲ್ಲಿ ತೃಪ್ತಿ ಇಲ್ಲ… ಓರ್ವ ಯುವತಿ, ಮೂವರು ಯುವಕರು ಸಾವಿಗೆ ಶರಣು; ಒಬ್ಬೊಬ್ಬರದು ವಿಚಿತ್ರ ಕಾರಣ! Student and Employee

Student and Employee

Student and Employee : ಹೈದರಾಬಾದ್​ ನಗರದಲ್ಲಿ 18, 28 ಮತ್ತು 29 ವರ್ಷ ವಯಸ್ಸಿನ ಮೂವರು ಯುವಕರು ಮತ್ತು 22 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಓರ್ವ ಪ್ರೀತಿಯಲ್ಲಿ ವಿಫಲವಾದರೆ, ಇನ್ನೊಬ್ಬನಿಗೆ ಜೀವನದಲ್ಲಿ ತೃಪ್ತಿ ಇಲ್ಲ, ಯುವತಿಗೆ ಆರೋಗ್ಯ ಸಮಸ್ಯೆಯಾದರೆ, ಮಗದೊಬ್ಬ ಯುವಕನಿಗೆ ಪರೀಕ್ಷೆಯಲ್ಲಿ ಫೇಲ್​ ಆಗುತ್ತೇನೆ ಎಂಬ ಕಾರಣಗಳನ್ನು ನೀಡಿ ಸಾವಿನ ಹಾದಿ ಹಿಡಿದಿದ್ದಾರೆ. ಉಜ್ವಲ ಭವಿಷ್ಯವನ್ನು ಹೊಂದಿದ್ದ ನಾಲ್ಕು ಜೀವಗಳು ಅಕಾಲಿಕ ಮರಣ ಹೊಂದಿರುವುದು ಅವರ ಕುಟುಂಬಗಳಲ್ಲಿ ತೀವ್ರ ದುಃಖವನ್ನು ಉಂಟುಮಾಡಿದೆ.

ಪ್ರೇಮ ವೈಫಲ್ಯದಿಂದಾಗಿ ಯುವಕನೊಬ್ಬ ತನ್ನ ಗೆಳತಿಗೆ ವಿಡಿಯೋ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಹೈದರಾಬಾದ್​ನ ರಾಯದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇನ್ಸ್‌ಪೆಕ್ಟರ್ ರಾಮುಲು ಹೇಳಿಕೆ ಪ್ರಕಾರ, ಒಡಿಶಾದ ಗಂಜಾಂ ಜಿಲ್ಲೆಯ ಜರಡಾ ಗ್ರಾಮದ ಧರ್ಮ ಪ್ರಧಾನ್ (29) ಜೀವನೋಪಾಯಕ್ಕಾಗಿ ಇಪ್ಪತ್ತು ದಿನಗಳ ಹಿಂದೆ ರಾಯದುರ್ಗಗೆ ಬಂದಿದ್ದ. ಅಪರ್ಣಾ ಸೈಟ್‌ನಲ್ಲಿ ಕ್ರೇನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಮಂಗಳವಾರ ಸಂಜೆ 4.55ಕ್ಕೆ ಅಲ್ಲಿನ ಕಾರ್ಮಿಕ ಕಾಲನಿಯಲ್ಲಿ ವಾಸಿಸುತ್ತಿದ್ದ ಯುವತಿಗೆ ವಿಡಿಯೋ ಕರೆ ಮಾಡಿದ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಆತ ಚಾಕುವಿನಿಂದ ಕೈ ಕತ್ತರಿಸಿಕೊಂಡಿದ್ದ. ಬಳಿಕ ವಿಡಿಯೋ ಕರೆ ಮಾಡಿದ್ದ. ಪ್ರೇಮ ವೈಫಲ್ಯವೇ ಇದಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೋ ಕರೆ ಸ್ವೀಕರಿಸಿದ ಯುವತಿ, ಹೈದರಾಬಾದ್‌ನ ಬೇರೆ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ತನ್ನ ಸಂಬಂಧಿಕರಿಗೆ ಕರೆ ಮಾಡಿ ಧರ್ಮ ಪ್ರಧಾನ್ ಬಗ್ಗೆ ಮಾಹಿತಿ ನೀಡಿದ್ದಳು. ಅವರು ತಕ್ಷಣ ಸ್ಥಳದಲ್ಲಿರುವ ಕಾರ್ಮಿಕ ಕಾಲನಿಗೆ ಹೋದಾಗ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಅವರು ತಕ್ಷಣ ರಾಯದುರ್ಗ ಪೊಲೀಸರಿಗೆ ಮಾಹಿತಿ ನೀಡಿದರು. ಮೃತರ ಸಂಬಂಧಿಕರು ರಾಯದುರ್ಗ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

ಐಟಿ ಉದ್ಯೋಗಿಗೆ ಆರೋಗ್ಯ ಸಮಸ್ಯೆ

ಆರೋಗ್ಯ ಸಮಸ್ಯೆಗಳಿಂದಾಗಿ ಐಟಿ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಹೈದರಾಬಾದ್​ನ ಮಾಧಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ಎರಡು ದಿನಗಳ ಹಿಂದೆ ನಡೆದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಧಾಪುರ ಇನ್ಸ್‌ಪೆಕ್ಟರ್ ಕೃಷ್ಣಮೋಹನ್ ಹೇಳಿಕೆ ಪ್ರಕಾರ, ಪಶ್ಚಿಮ ಬಂಗಾಳದ ರಿತೋಜಾ ಬಸು (22) ಮಾಧಾಪುರದ ಸಿದ್ಧಿಖ್‌ನಗರದಲ್ಲಿರುವ ಸ್ಟರ್ಲಿಂಗ್ ಕೋ ಲಿವಿಂಗ್ ಹಾಸ್ಟೆಲ್‌ನಲ್ಲಿ ಸ್ನೇಹಿತನೊಂದಿಗೆ ವಾಸಿಸುತ್ತಿದ್ದರು. ಅವರು ಗಚಿಬೌಲಿಯ ಐಟಿ ಕಂಪನಿಯೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಆಕೆಯ ಸ್ನೇಹಿತ ಕೋಲ್ಕತ್ತದ ಸಾಫ್ಟ್‌ವೇರ್ ಇಂಜಿನಿಯರ್. ಇಬ್ಬರೂ ಒಂದು ತಿಂಗಳ ಹಿಂದೆ ಹಾಸ್ಟೆಲ್‌ಗೆ ಒಟ್ಟಿಗೆ ಬಂದಿದ್ದರು. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆಯಾಗಲು ಯೋಜಿಸಿದ್ದರು. ಈ ಮಧ್ಯೆ ಆರೋಗ್ಯ ಸಮಸ್ಯೆಗಳಿಂದಾಗಿ ತೀವ್ರ ಒತ್ತಡದಲ್ಲಿದ್ದ ರಿತೋಜಾ ಬಸು, ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆಕೆ ಸಾವಿಗೀಡಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಭೂಮಿ ತಿರುಗುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲಿದೆ ನೋಡಿ ಅದ್ಭುತ ವಿಡಿಯೋ! Earth rotation

ಜೀವನದಲ್ಲಿ ತೃಪ್ತಿ ಇಲ್ಲವೆಂದು ಸಾಫ್ಟ್‌ವೇರ್ ಉದ್ಯೋಗಿ ಆತ್ಮಹತ್ಯೆ

ಎಸ್.ಆರ್.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇನ್ಸ್‌ಪೆಕ್ಟರ್ ಶ್ರೀನಾಥ್ ರೆಡ್ಡಿ ತಿಳಿಸಿದ್ದಾರೆ. ಜಗ್ತಿಯಾಲ್ ಜಿಲ್ಲೆಯ ಬೂಗರಾಮ್ ಮಂಡಲದ ಭೋಪಾಲ್‌ಪುರ ಗ್ರಾಮದ ಗಂಟುಲ ಕುಮಾರ್ (28) ಎಂಬಿಎ ಮುಗಿಸಿ ಗಚಿಬೌಲಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ದಿನಗರ್ ಕಾಲನಿಯ ಬಿ.ಕೆ.ಗುಡಾದ ಸಂಜಯ್ ಗ್ರಾಮದಲ್ಲಿ ಗಂಗಾಧರ್ ಎಂಬ ಸ್ನೇಹಿತನೊಂದಿಗೆ ವಾಸಿಸುತ್ತಿದ್ದರು. ಬುಧವಾರ ಬೆಳಿಗ್ಗೆ ಗಂಗಾಧರ್ ಹೊರಗೆ ಹೋಗಿ ಬೆಳಿಗ್ಗೆ 10 ಗಂಟೆಗೆ ರೂಮ್​ಗೆ ಹಿಂತಿರುಗಿದನು. ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಕಿಟಕಿಯಿಂದ ನೋಡಿದಾಗ ಕುಮಾರ್ ನೇಣು ಬಿಗಿದುಕೊಂಡಿರುವುದು ಕಂಡುಬಂದಿತು. ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅವರು ಸ್ಥಳಕ್ಕೆ ತಲುಪಿ ಬಾಗಿಲು ತೆರೆದು ತನಿಖೆ ನಡೆಸಿದರು. ಕೋಣೆಯಲ್ಲಿ ಡೆತ್​ನೋಟ್​ ಪತ್ತೆಯಾಗಿದೆ. ನನಗೆ ಜೀವನ ಇಷ್ಟವಿಲ್ಲ, ಕ್ಷಮಿಸಿ.. ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಪರೀಕ್ಷೆಯಲ್ಲಿ ಫೇಲ್​ ಆಗುವ ಭಯಕ್ಕೆ ಆತ್ಮಹತ್ಯೆ

ಕರ್ನಾಟಕದ ರಾಯಚೂರು ಜಿಲ್ಲೆಯ ಕರಿಟಿಗುಡ್ಡ ಗ್ರಾಮದ ರಾಜು ಶೆಟ್ಟಿ ಅವರ ಪುತ್ರ ಎಸ್. ಅಮರ್ಜೀತ್​ (18), ಎಸ್‌ಆರ್ ನಗರದ ಬಾಪುನಗರದಲ್ಲಿರುವ ಜಿವಿ ಕ್ರೇಜಿ ಪಿಜಿ ಹಾಸ್ಟೆಲ್‌ನಲ್ಲಿ ತಂಗಿದ್ದರು ಮತ್ತು ಲಕ್ಷ್ಯ ಕಾಲೇಜಿನಲ್ಲಿ ಸಿಎ ಓದುತ್ತಿದ್ದರು. 2024 ಡಿಸೆಂಬರ್ 22 ರಂದು ಪರೀಕ್ಷೆಗಳನ್ನು ಬರೆದು ತಮ್ಮ ಹಳ್ಳಿಗೆ ತೆರಳಿದ್ದರು. ಪರೀಕ್ಷೆಯನ್ನು ಸರಿಯಾಗಿ ಬರೆಯದ ಕಾರಣ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಬೇಸರದಲ್ಲಿದ್ದರು. ಅನುತ್ತೀರ್ಣರಾಗುವ ಭಯವನ್ನು ಪಾಲಕರ ಮುಂದೆ ವ್ಯಕ್ತಪಡಿಸಿದ್ದರು. ಜನವರಿ 27ರಂದು ಮತ್ತೊಂದು ಪರೀಕ್ಷೆಯನ್ನು ಬರೆಯಬೇಕಾಗಿತ್ತು, ಆದ್ದರಿಂದ ಅಮರ್ಜೀತ್​ ನಗರಕ್ಕೆ ಹಿಂತಿರುಗಿ ಹಾಸ್ಟೆಲ್‌ನಲ್ಲಿ ಉಳಿದಿದ್ದರು. ಮಂಗಳವಾರ ಬೆಳಿಗ್ಗೆ ಕಾಲೇಜಿಗೆ ಹೋಗಬೇಕಿತ್ತು. ತನ್ನ ರೂಮ್‌ಮೇಟ್ ಸುಬ್ರಮಣಿಯಂಗೆ ತನಗೆ ಹುಷಾರಿಲ್ಲ ಎಂದು ಹೇಳಿ ಕೋಣೆಯಲ್ಲೇ ಇದ್ದ. ಸುಬ್ರಮಣಿಯಮ್ ರಾತ್ರಿ 10.30ಕ್ಕೆ ಬಂದಾಗ ರೂಮ್​ ಒಳಗಿನಿಂದ ಲಾಕ್ ಆಗಿರುವುದನ್ನು ಕಂಡರು. ಹಲವು ಬಾರಿ ಕರೆ ಮಾಡಿದರೂ ಉತ್ತರಿಸದಿದ್ದಾಗ ಅನುಮಾನಗೊಂಡು ಹಾಸ್ಟೆಲ್ ಆಡಳಿತ ಮಂಡಳಿಗೆ ಮಾಹಿತಿ ನೀಡಿದರು. ಪೊಲೀಸರು ಬಾಗಿಲು ತೆರೆದಾಗ ಅಮರ್ಜೀತ್​ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಂದೆಯ ದೂರಿನ ಆಧಾರದ ಮೇಲೆ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ. (ಏಜೆನ್ಸೀಸ್​)

ಉತ್ತರಾಖಂಡದಲ್ಲಿ ಮೊದಲ ಲಿವ್-ಇನ್ ನೋಂದಣಿ; ಯುಸಿಸಿ ಜಾರಿಗೊಂಡ 10 ದಿನಗಳಲ್ಲಿ 5 ಜೋಡಿಗಳಿಂದ ಅರ್ಜಿ ಸಲ್ಲಿಕೆ

ಚಾಂಪಿಯನ್ಸ್​ ಟ್ರೋಫಿಗೆ ಭಾರತೀಯ ಅಂಪೈರ್​ಗಳಿಲ್ಲ; ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ನಿತಿನ್​ ಮೆನನ್​, ಜಾವಗಲ್​ ಶ್ರೀನಾಥ್​!

Share This Article

ಬೇಸಿಗೆಯಲ್ಲಿ ಮೀನು, ಕೋಳಿ ಮಾಂಸ ತಿನ್ನುವುದನ್ನು ಬಿಡುವುದು ಒಳ್ಳೆಯದು! Nonveg Food

Nonveg Food :   ಬೇಸಿಗೆ ಮಾತ್ರ ಆರೋಗ್ಯ ಮತ್ತು ಆಹಾರದ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕಾದ ಸಮಯ.…

ಈ ಬೇಸಿಗೆಯಲ್ಲಿ ಒಂದು ತಿಂಗಳು ಟೀ ಕುಡಿಯೋದು ಬಿಟ್ರೆ ಏನಾಗುತ್ತದೆ ಗೊತ್ತಾ? Quitting tea

Quitting tea:  ಅನೇಕ ಜನರು ಪ್ರತಿದಿನ ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಚಹಾ ಕುಡಿಯುವ ಮೂಲಕ…

Summer Foods: ಬೇಸಿಗೆಯಲ್ಲಿ ಬಿಸಿಲನ್ನು ತಡೆದುಕೊಳ್ಳಲು ಯಾವ ಆಹಾರಗಳನ್ನು ಸೇವಿಸಬೇಕು ಗೊತ್ತಾ?

Summer Foods: ದಿನೇ ದಿನೇ ಬಿಸಿಲಿನ ತೀವ್ರತೆ ಹೆಚ್ಚುತ್ತಲೇ ಇದೆ. ಬೆಳಿಗ್ಗೆ 10 ಗಂಟೆಯ ನಂತರ…