ಡೆಹ್ರಾಡೂನ್: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನುಷ್ಠಾನಗೊಂಡ ಬೆನ್ನಲ್ಲೇ ಮೊದಲ ಲಿವ್-ಇನ್ ಸಂಬಂಧ ನೋಂದಣಿಯಾಗಿದೆ. ಸಹ-ಜೀವನ ಜೋಡಿಗಳಿಂದ ಐದು ಅರ್ಜಿಗಳು ಬಂದಿದ್ದು, ಆ ಪೈಕಿ ಒಂದನ್ನು ಮಾತ್ರ ನೋಂದಾಯಿಸಲಾಗಿದೆ. ಉಳಿದ ನಾಲ್ಕರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ರಾಜ್ಯದಲ್ಲಿ ಯುಸಿಸಿ ಜಾರಿಗೊಂಡ 10 ದಿನಗಳಲ್ಲಿ ಮೊದಲ ನೋಂದಣಿ ಇದಾಗಿದೆ.
ಯಾವುದೇ ಧರ್ಮ, ಜಾತಿಗಳ ತಾರತಮ್ಯವಿಲ್ಲದೆ ಎಲ್ಲ ನಾಗರಿಕರಿಗೆ ಸಮಾನ ಕಾನೂನನ್ನು ಅನ್ವಯಿಸುವ ಯುಸಿಸಿಯನ್ನು ಸ್ವತಂತ್ರ ಭಾರತದಲ್ಲಿ ಜಾರಿಗೊಳಿಸಿದ ಮೊದಲ ರಾಜ್ಯವಾಗಿ ಉತ್ತರಾಖಂಡ ಹೊರಹೊಮ್ಮಿದೆ. ಮದುವೆ, ವಿಚ್ಛೇದನ ಮತ್ತು ಆಸ್ತಿಗೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳನ್ನು ಏಕರೂಪಗೊಳಿಸಲಾಗಿದೆ.
ವಿವಾಹ, ವಿಚ್ಛೇದನ ಮತ್ತು ಲಿವ್- ಇನ್ ಸಂಬಂಧಗಳನ್ನು ಆನ್ಲೈನ್ನಲ್ಲಿ ನೋಂದಣಿ ಕಡ್ಡಾಯ ಗೊಳಿಸಲಾಗಿದ್ದು ಅದರ ಪೋರ್ಟಲ್ಗೆ ಯುಸಿಸಿ ಜಾರಿಗೆ ಬಂದ ಜನವರಿ 27ರಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚಾಲನೆ ನೀಡಿದ್ದರು.
ಗೌಪ್ಯತೆ ಉಲ್ಲಂಘನೆ ಭೀತಿ: ಲಿವ್-ಇನ್ ಸಂಬಂಧಗಳ ಕಡ್ಡಾಯ ನೋಂದಣಿ ನಿಯಮಕ್ಕೆ ವಿರೋಧವೂ ವ್ಯಕ್ತವಾಗಿದೆ. ಅದು ಜನರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುವ ಅಪಾಯವನ್ನು ಒಳಗೊಂಡಿದೆ ಎನ್ನುವುದು ಟೀಕಾಕಾರರ ಅಭಿಪ್ರಾಯವಾಗಿದೆ. ಇದು ‘ಬೆಡ್ರೂಂನಲ್ಲಿ ಇಣುಕಿ ನೋಡುವುದಕ್ಕೆ ಅವಕಾಶ ನೀಡುವಂಥದ್ದಾಗಿದೆ’ ಎಂಬ ಟೀಕೆಯೂ ಕೇಳಿಬಂದಿದೆ. ಆದರೆ, ಲಿವ್-ಇನ್ ಪಾಲುದಾರ ಅಫ್ತಾಬ್ನಿಂದ ಶ್ರದ್ಧಾ ವಾಲ್ಕರ್ ಕೊಲೆಯಾದಂಥ ಬರ್ಬರ ಪ್ರಕರಣಗಳನ್ನು ತಡೆಗಟ್ಟಲು ಕಡ್ಡಾಯ ನೋಂದಣಿ ನೆರವಾಗುತ್ತದೆ ಎಂದು ಧಾಮಿ ಸಮರ್ಥಿಸಿಕೊಂಡಿದ್ದಾರೆ.
ಹಿಂದುಯೇತರ 18 ಸಿಬ್ಬಂದಿ ವಜಾಗೊಳಿಸಿದ ಟಿಟಿಡಿ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿಯು ಹಿಂದುಯೇತರ 18 ನೌಕರರನ್ನು ತೆಗೆದು ಹಾಕಿದೆ. ಹಿಂದುಯೇತರ ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗವಹಿಸಿ ಜತೆಗೆ, ಟಿಟಿಡಿ ಹಬ್ಬಗಳು ಮತ್ತು ಆಚರಣೆಗಳಲ್ಲಿ ಕೂಡ ಪಾಲ್ಗೊಂಡಿದ್ದಕ್ಕಾಗಿ ಶಿಸ್ತುಕ್ರಮ ಜರುಗಿಸಲಾಗುತ್ತಿದೆ. ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ನಿರ್ದೇಶನದ ಮೇರೆಗೆ ಶಿಸ್ತು ಕ್ರಮ ಜರುಗಿಸುವ ಪ್ರಕ್ರಿಯೆಯನ್ನು ಬುಧವಾರ ಆರಂಭಿಸಿದೆ.
ಈ ನೌಕರರು ಸರ್ಕಾರಿ ಇಲಾಖೆಗಳಿಗೆ ವರ್ಗಗೊಳ್ಳುವ ಅಥವಾ ಸ್ವಯಂ ನಿವೃತ್ತಿ (ವಿಆರ್ಎಸ್) ಪಡೆಯುವ ಆಯ್ಕೆ ಈ ಹಿಂದೆಯೇ ನೀಡಲಾಗಿದೆ. ಅದನ್ನು ಪಾಲಿಸಲು ವಿಫಲರಾದರೆ ಇನ್ನಷ್ಟು ಕ್ರಮ ಕೈಗೊಳ್ಳಲಾಗುತ್ತದೆ. ತನ್ನ ದೇವಸ್ಥಾನಗಳು ಮತ್ತು ಆಧ್ಯಾತ್ಮಿಕ ಪಾವಿತ್ರ್ಯವನ್ನು ಉಳಿಸಿಕೊಳ್ಳುವ ಟಿಟಿಡಿಯ ಬದ್ಧತೆಗೆ ಅನುಗುಣ ವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಟಿಟಿಡಿ ಒಂದು ಸ್ವತಂತ್ರ ಸರ್ಕಾರಿ ಟ್ರಸ್ಟ್ ಆಗಿದ್ದು ಜಗತ್ತಿನ ಅತ್ಯಂತ ಶ್ರೀಮಂತ ಹಿಂದು ದೇವಾಲಯವಾದ ತಿರುಮಲ ವೆಂಕಟೇಶ್ವರ ದೇವಸ್ಥಾನದ ಆಡಳಿತವನ್ನು ನಡೆಸುತ್ತಿದೆ. ಹಿಂದುಗಳಿಗೆ ಮಾತ್ರವೇ ನೌಕರಿ ಕೊಡುವುದನ್ನು ಕಡ್ಡಾಯಗೊಳಿಸಲು ಟಿಟಿಡಿ ಕಾನೂನಿಗೆ ಮೂರು ಬಾರಿ ತಿದ್ದುಪಡಿ ಮಾಡಲಾಗಿದೆ.
Champions Trophy ಬಳಿಕ ಏಕದಿನ ಮಾದರಿಗೆ ನಿವೃತ್ತಿ? Rohit Sharma ಹೇಳಿದ್ದಿಷ್ಟು
ಚುಮು ಚುಮು ಚಳಿಗೆ ಮನೆಯಲ್ಲೇ ಮಾಡಿ Ragi ಪಕೋಡ; ನಾಲಿಗೆಗೂ ರುಚಿಕರ ಆರೋಗ್ಯಕ್ಕೂ ಒಳ್ಳೆಯದು