ಬೆಂಗಳೂರು: ಪ್ರಸ್ತುತ ಜೀವನಶೈಲಿಯನ್ನು ನೋಡುವುದಾದರೆ ಜನರು ತಾವು ಸೇವಿಸುವ ಆಹಾರದಿಂದಲೇ ಅನಾರೋಗ್ಯಕ್ಕೀಡಾಗುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರು ಹೆಚ್ಚಾಗಿ ಪೌಷ್ಟಿಕಭರಿತ ಉಪಹಾರವನ್ನು ಸೇವಿಸುವಂತೆ ಸಲಹೆ ನೀಡುತ್ತಾರೆ.
ಹಾಗೆ ನೋಡುವುದಾದರೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಅತ್ಯಂತ ಸರಳವಾಗಿ ಹಾಗೂ ರುಚಿಕರವಾಗಿ ಮಾಡಿಕೊಂಡು ತಿನ್ನುವಂತಹ ಸಿಂಪಲ್ ರೆಸಿಪಿ ರಾಗಿ ಪಕೋಡ (Ragi Pakoda) ಹೇಗೆ ಮಾಡುವುದು ಎಂಬುದನ್ನು ಇಂದು ನಾವು ನಿಮಗೆ ತಿಳಿಸಲಿದ್ದೇವೆ. ಈ ಸಿಂಪಕಲ್ ರೆಸಿಪಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಜತೆಗೆ ಇದು ರುಚಿಕರವೂ ಹೌದು. ಮನೆಯಲ್ಲಿಯೇ ಮಾಡುವುದೇಗೆ ಇಲ್ಲಿದೆ ಸುಲಭ ವಿಧಾನ.
ರಾಗಿ ಪಕೋಡ ಮಾಡಲು ಬೇಕಾಗುವ ಪದಾರ್ಥಗಳು
- ರಾಗಿ ಹಿಟ್ಟು
- ನುಗ್ಗೆ ಸೊಪ್ಪು
- ಈರುಳ್ಳಿ
- ಕೊತ್ತೊಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಕಡ್ಲೆ ಹಿಟ್ಟು
- ಅಕ್ಕಿ ಹಿಟ್ಟು
- ರವೆ
- ಓಂಕಾಳು
- ಜೀರಿಗೆ
- ಶುಂಠಿ-ಬೆಳ್ಳುಳ್ಳಿ
- ಕಡ್ಲೆಬೀಜ
- ಉಪ್ಪು-ಖಾರದಪುಡಿ
ಮಾಡುವ ವಿಧಾನ
ಅಗಲವಾದ ಪಾತ್ರೆಯಲ್ಲಿ ಈರುಳ್ಳಿ, ಕಡ್ಲೆಬೀಜ ಹಾಗೂ ನುಗ್ಗೆಸೊಪ್ಪನ್ನು ಹಾಕಿಕೊಳ್ಳಬೇಕು. ಆ ಬಳಿಕ ಜಜ್ಜಿಕೊಂಡಿರುವ ಶುಂಠಿ-ಬೆಳ್ಳುಳ್ಳಿ, ಓಂಕಾಳು, ಜೀರಿಗೆ, ಖಾರದ ಪುಡಿ, ಕೊತ್ತೊಂಬರಿ ಹಾಗೂ ಕರಿಬೇವಿನ ಸೊಪ್ಪನ್ನು ಹಾಕಿಕೊಳ್ಳಿ. ಇದಾದ ಬಳಿಕ ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ರಾಗಿ ಹಿಟ್ಟು ಹಾಗೂ ರವೆಯನ್ನು ಹಾಕಿಕೊಂಡು ರುಚಿಗೆ ತಕ್ಕ ಉಪ್ಪನ್ನು ಹಾಕಿ, ನೀರು ಹಾಕಿ ಚೆನ್ನಾಗಿ ಕಳಿಸಿ ಸ್ವಲ್ಪ ಹೊತ್ತು ನೆನೆಯಲು ಬಿಡಬೇಕು.
ನೆನೆದಿರುವ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಬಿಸಿ ಎಣ್ಣೆಗೆ ಹಾಕಿ ಗರಿಗರಿಯಾಗುವವರೆಗೆ ಕರೆಯಿರಿ. ಬಣ್ಣ ಗಾಢವಾಗಿರುವುದರಿಂದ, ಅದು ಚೆನ್ನಾಗಿ ಹುರಿಯಲ್ಪಟ್ಟಿದೆಯೋ ಇಲ್ಲವೋ ಎಂದು ನಾವು ನಿರ್ಣಯಿಸಲು ಸಾಧ್ಯವಿಲ್ಲ. ಆದ್ದರಿಂದ ಮೊದಲ ಬ್ಯಾಚ್ ಅನ್ನು ಕೆಲವು ನಿಮಿಷಗಳ ಕಾಲ ಸಿಜ್ಲಿಂಗ್ ಶಬ್ದ ಕಡಿಮೆಯಾಗುವವರೆಗೆ ಕರೆಯಿರಿ. ಸಾಮಾನ್ಯವಾಗಿ ಮಧ್ಯಮ ಉರಿಯಲ್ಲಿ ನಾಲ್ಕರಿಂದ ಐದು ನಿಮಿಷಗಳು ಬೇಕಾಗುತ್ತದೆ. ಉಳಿದ ಹಿಟ್ಟನ್ನು ಸಹ ಅದೇ ಸಮಯಕ್ಕೆ ಕರೆಯಿರಿ. ಅಲಂಕಾರಕ್ಕೆ ಕರಿದ ಕರಿಬೇವಿನ ಎಲೆಗಳನ್ನು ಹಾಕಿ ಟೀ ಜೊತೆ ರುಚಿ ರುಚಿಯಾದ ಹೆಲ್ತಿ ರಾಗಿ ಪಕೋಡವನ್ನು ಸವಿಯಬಹುದಾಗಿದೆ.
ಬೈಕ್ಗೆ KKRTC ಬಸ್ ಡಿಕ್ಕಿ; ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಾವು
ದರ್ಶನ್ರನ್ನು ಮದುವೆಗೆ ಯಾಕೆ ಕರೆದಿಲ್ಲ; ನಟ ಡಾಲಿ Dhananjay ನೀಡಿದ ಉತ್ತರ ಹೀಗಿದೆ