blank

ದರ್ಶನ್​ರನ್ನು ಮದುವೆಗೆ ಯಾಕೆ ಕರೆದಿಲ್ಲ; ನಟ ಡಾಲಿ Dhananjay ನೀಡಿದ ಉತ್ತರ ಹೀಗಿದೆ

Daali Darshan

ಬೆಂಗಳೂರು: ನಟ ರಾಕ್ಷಸ ಎಂದೇ ಖ್ಯಾತಿ ಪಡೆದಿರುವ ಬಹುಭಾಷಾ ನಟ ಡಾಲಿ ಧನಂಜಯ್​ (Dhananjay) ಅವರು ಫೆಬ್ರವರಿ 16ರಂದು ವೈದ್ಯೆ ಧನ್ಯತಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಸದ್ಯ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ಮದುವೆ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ನಟ ಧನಂಜಯ್​ ಅವರು ಚಿತ್ರರಂಗ, ರಾಜಕೀಯ, ಕ್ರೀಡೆ, ಅಭಿಮಾನಿಗಳು ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರನ್ನು ಮದುವೆಗೆ ಆಹ್ವಾನಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ಗಳು ವೈರಲ್​ ಆಗಿದೆ.

ಇದೆಲ್ಲದರ ನಡುವೆ ನಟ ದರ್ಶನ್​ಗೆ ಮಾತ್ರ ಆಹ್ವಾನ ನೀಡದಿರುವುದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಇಂದು (ಫೆಬ್ರವರಿ 05) ತಮ್ಮ ಭಾವಿಪತ್ನಿ ಧನ್ಯತಾರನ್ನು ಮಾಧ್ಯಮಗಳಿಗೆ ಪರಿಚಯಿಸಿದ್ದಾರೆ. ಈ ವೇಳೆ ನಟ ಧನಂಜಯ್​ (Dhananjay) ಅವರಿಗೆ ದರ್ಶನ್​ರನ್ನು ಮದುವೆಗೆ ಆಹ್ವಾನಿಸದಿರುವ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದೆ. ಈ ಬಗ್ಗೆ ನಟ ಧನಂಜಯ್​ ಸ್ಪಷ್ಟನೆಯನ್ನು ಸಹ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಟ ಧನಂಜಯ್ (Dhananjay)​, ಮದುವೆಗೆ ಎಲ್ಲರನ್ನೂ ಮದುವೆ ಕರೆಯುತ್ತಿದ್ದೇನೆ ಅಂದ್ಮೇಲೆ ಅವರನ್ನು ಕರೆಯುವ ಪ್ರಯತ್ನ ಮಾಡಿರುತ್ತೇನೆ. ಆದರೆ, ಅವರನ್ನು ರೀಚ್ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ತುಂಬಾನೇ ಪ್ರೀತಿಯಿಂದ ಅವರನ್ನು ಇಲ್ಲಿಯಿಂದಲೇ ಕರೆಯುತ್ತೇನೆ ಎಂದು ನಟ ಧನಂಜಯ್ ಸ್ಪಷ್ಟನೆ ನೀಡಿದ್ದಾರೆ.

ಇನ್ಣೂ ನಟ ದರ್ಶನ್ ಅವರ ಆಪ್ತ ವಲಯದಲ್ಲಿ ಧನಂಜಯ್​ ಗುರುತಿಸಿಕೊಂಡಿದ್ದು, ಯಜಮಾನ ಚಿತ್ರದಲ್ಲಿ ಮಿಠಾಯಿ ಸೂರಿ ಪಾತ್ರದಲ್ಲಿ ನಟಿಸುವ ಮೂಲಕ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದರು. ಇದಲ್ಲದೆ ಹಲವಾರು ಪಾರ್ಟಿಗಳಲ್ಲಿ ಈ ಇಬ್ಬರು ನಟರು ಒಟ್ಟಿಗೆ ಕಾಣಿಸಿಕೊಂಡಿದ್ದು, ನಟ ಧನಂಜಯ್​ ತಮ್ಮ ಮದುವೆಗೆ ಕರೆಯದಿರುವುದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿತ್ತು. ಇದೀಗ ಈ ಬಗ್ಗೆ ನಟ ಧನಂಜಯ್​ (Dhananjay) ಸ್ಪಷ್ಟನೆ ನೀಡಿದ್ದು, ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ವಿಜಯೇಂದ್ರ ಯುವಕರ ಕಣ್ಮಣಿ, ಕೆಳಗಿಳಿಸಿದರೆ ರಾಜ್ಯದಲ್ಲಿ ಬಿಜೆಪಿಗೆ 10 ಸ್ಥಾನ ಬರೋದಿಲ್ಲ: MP Renukacharya ಕಿಡಿ

ದಲಿತರು, ದುರ್ಬಲ ವರ್ಗದವರನ್ನು ನಾಯಕತ್ವ ಸ್ಥಾನದಲ್ಲಿ ನೋಡಲು ಎದುರು ನೋಡುತ್ತಿದ್ಧೇನೆ: Rahul Gandhi

Share This Article

ಬೆಳಗ್ಗೆ ಎದ್ದ ತಕ್ಷಣ ಮಾಡುವ ಸಣ್ಣ ತಪ್ಪಿಂದಾಗಿ ಗಂಭೀರ ಕಾಯಿಲೆಗಳು ಎದುರಿಸಬೇಕಾಗುತ್ತಂತೆ!; ಅದು ಏನು ಗೊತ್ತೆ? | Morning

Morning : ನೀವು ಬೆಳ್ಳಿಗ್ಗೆ ಮತ್ತುಮ ರಾತ್ರಿ ಹಲ್ಲುಜ್ಜದೆ ಮಲಗಿದ್ರೆ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗಿತ್ತವೆ…

ಬೇಸಿಗೆಯಲ್ಲಿ ತಾಳೆ ಹಣ್ಣು ತಿನ್ನುವುದರಿಂದ ಸಿಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿದ್ರೆ ನೀವು ಅಚ್ಚರಿಪಡ್ತೀರಾ! Ice apple

Ice apple : ಸದ್ಯ ದೇಶದೆಲ್ಲಡೆ ರಣ ಬಿಸಿಲು ಸುಡುತ್ತಿದೆ. ಮಳೆಯಿಲ್ಲದೆ, ಬಿಸಿಲಿನ ಶಾಖಕ್ಕೆ ಜನರು…

ಈ 3 ರಾಶಿಯವರು ಯಾವುದೇ ಕಷ್ಟಕರ ಪರಿಸ್ಥಿತಿಯನ್ನು ಬಹಳ ಸುಲಭವಾಗಿ ಎದುರಿಸುತ್ತಾರಂತೆ! Zodiac Signs

Zodiac Signs : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ. ಹಿಂದು…