

ಬೆಂಗಳೂರು: ಕಳೆದ ಬಾರಿ ನಮ್ಮ ಒಳಜಗಳದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ವಿಜಯೇಂದ್ರರನ್ನು ಕೆಳಗಿಳಿಸಿದರೆ ರಾಜ್ಯದಲ್ಲಿ ಬಿಜೆಪಿಗೆ 10 ಸ್ಥಾನ ಬರೋದಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಚಾರ್ಯ (MP Renukacharya) ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ರೇಣುಕಚಾರ್ಯ (MP Renukacharya), ಕಳೆದ 3-4 ತಿಂಗಳಿಂದ ಜೆ.ಪಿ ನಡ್ಡಾ, ಅಮಿತ್ ಶಾ ಭೇಟಿ ಮಾಡಲಾಗ್ತಿಲ್ಲ. ಯತ್ನಾಳ್ ತಂಡ ಭೇಟಿ ಮಾಡಿದ್ದೀವಿ ಅಂತ ಸುಳ್ಳು ಹೇಳಿಕೊಂಡು ಸ್ಟೋರಿಗಳನ್ನು ಹೇಳುತ್ತಿದ್ದಾರೆ. ರಾಷ್ಟ್ರೀಯ ನಾಯಕರನ್ನು ಭೇಟಿಯಾದ ಫೋಟೋ ಕೊಡಿ ಅಂದ್ರೆ ಇಲ್ಲ ತೆಗೀಬೇಡಿ ಅಂದಿದ್ದಾರೆ ಅಂತ ಹೇಳ್ತೀರಿ ಎಂದು ಕಿಡಿಕಾರಿದ್ದಾರೆ.
ಪಕ್ಷದಲ್ಲಿನ ಬೆಳವಣಿಗೆ ನೋಡಿ ಜನ ಬೈಯುತ್ತಿದ್ದಾರೆ. ಪಕ್ಷದಲ್ಲಿನ ಬೆಳವಣಿಗೆ ಕಂಡು ಕಾರ್ಯಕರ್ತರಿಗೆ ನೋವಾಗಿದೆ. ನಾವು ಸೈಲೆಂಟ್ ಇದ್ವಿ, ಯಡಿಯೂರಪ್ಪ, ವಿಜಯೇಂದ್ರ ಮಾತಾಡಬೇಡಿ ಅಂದಿದ್ರು. ಆದ್ರೆ ನಮಗೆ ನೋವಾಗಿದೆ. ಹೀಗಾಗಿ ಇಂದು ತುರ್ತು ಸಭೆ ನಡೆಸಿ ಸುದ್ದಿಗೋಷ್ಠಿ ನಡೆಸಬೇಕಾಯಿತು.
ವಿಜಯೇಂದ್ರರನ್ನ ನೀವು ಕುಗ್ಗಿಸಲು ಆಗಲ್ಲ. ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿ ಪಕ್ಷ ಕಟ್ಟಿದ್ರು. ಅದೇ ರೀತಿ ವಿಜಯೇಂದ್ರ ನಾಡಿನ ಯುವಕರ ಕಣ್ಮಣಿ ಆಗಿದ್ದಾರೆ. ಅಂಥವರ ಬಗ್ಗೆ ಮಾತಾಡ್ತೀರ. ಮುಂದಿನ ವಾರ ನಾವು ಮತ್ತೆ ಸಭೆ ಮಾಡ್ತೀವಿ. 100ಕ್ಕೂ ಹೆಚ್ಚು ಜನ ಸೇರಿ ದೊಡ್ಡ ಸಭೆ ಮಾಡ್ತೀವಿ. ಪಕ್ಷ ಕಟ್ಟೋ ಶಕ್ತಿ ವಿಜಯೇಂದ್ರಗೆ ಮಾತ್ರ ಇದೆ ಅನ್ನೋದು ನಿಜ. ವಿಜಯೇಂದ್ರರನ್ನ ಟೀಕೆ ಮಾಡೋದು ಮೋದಿ, ಅಮಿತ್ ಶಾ ನಡ್ಡಾರನ್ನ ಟೀಕೆ ಮಾಡಿದಂತೆ ಎಂದು ಎಚ್ಚರಿಸಿದ್ದಾರೆ.
ನಮ್ಮ ಒಳಜಗಳದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗ ವಿಜಯೇಂದ್ರರನ್ನು ಕೆಳಗಿಳಿಸಿದರೆ ಬಿಜೆಪಿಗೆ ಹತ್ತು ಸೀಟೂ ಬರಲ್ಲ. ಹೈಕಮಾಂಡ್ ವಿಜಯೇಂದ್ರರನ್ನ ಕೆಳಗಿಳಿಸಲ್ಲ, ಅವರೇ ಮುಂದುವರೀತಾರೆ ಅನ್ನೋ ವಿಶ್ವಾಸ ಇದೆ. ಇದೇ ಗುಡ್ ನ್ಯೂಸ್ ಎಂದು ಮಾಜಿ ಸಚಿವ ಎಂ.ಪಿ. ರೇಣುಕಚಾರ್ಯ (MP Renukacharya) ಭಿನ್ನಮತೀಯರ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಗುಡುಗಿದ್ದಾರೆ.