ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಈಗಾಗಲೇ ಉಭಯ ತಂಡಗಳು ತಾಲೀಮು ನಡೆಸಿದ್ದು, ಆತಿತೇಯರು ಪ್ರವಾಸಿ ತಂಡದ ಎದುರು ತಮ್ಮ ಪ್ರಾಬಲ್ಯವನ್ನು ಮುಂದುವರೆಸಲು ಸಜ್ಜಾಗಿದ್ದಾರೆ. ಇನ್ನೂ ಸರಣಿಯ ಮೊದಲ ಪಂದ್ಯ ಆರಂಭಕ್ಕೂ ಮುನ್ನ ನಾಯಕ ರೋಹಿತ್ ಶರ್ಮ (Rohit Sharma) ಮಾತನಾಡಿದ್ದು, ಪ್ರಮುಖವಾಗಿ ತಮ್ಮ ನಿವೃತ್ತಿಯ ವದಂತಿ ಕುರಿತು ಖಡಕ್ ಉತ್ತರವನ್ನು ನೀಡಿದ್ದಾರೆ.
ಅಭ್ಯಾಸದ ವೇಳೆ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ರೋಹಿತ್ ಶರ್ಮ (Rohit Sharma), ಕ್ರಿಕೆಟ್‌ಗೆ ನಿವೃತ್ತಿ ಹಾಗೂ ಭವಿಷ್ಯಕ್ಕೆ ಸಂಬಂಧಿಸಿದ ವರದಿಗಳನ್ನು ತಳ್ಳಿ ಹಾಕಿದ್ದು, ಮುಂಬರುವ ಚಾಂಪಿಯನ್ಸ್ ಟ್ರೋಫಿ ಹಾಗೂ ಏಕದಿನ ಮಾದರಿ ಮೇಲೆ ಹೆಚ್ಚು ಗಮನ ಹರಿಸುವುದಾಗಿ ಹೇಳಿದ್ದಾರೆ.
#TeamIndia captain Rohit Sharma is ready to take fresh guard ahead of the ODI series against England@IDFCFIRSTBank | @ImRo45 | #INDvENG pic.twitter.com/DJVZju0LOV
— BCCI (@BCCI) February 5, 2025
ನನ್ನ ಮುಂದೆ ಪ್ರಸ್ತುತ ಇಂಗ್ಲೆಂಡ್ ಹಾಗೂ ಚಾಂಪಿಯನ್ಸ್ ಟ್ರೋಫಿ ಇರುವಾಗ ನಿವೃತ್ತಿಯ ಬಗ್ಗೆ ಚರ್ಚಿಸುವುದು ಅಪ್ರಸ್ತುತವೆನಿಸುತ್ತದೆ. ನನ್ನ ಭವಿಷ್ಯದ ಕುರಿತು ಹಲವಾರು ವರ್ಷಗಳಿಂದ ವರದಿಗಳು ಬರುತ್ತಲೇ ಇವೆ. ಆ ವರದಿಗಳ ಕುರಿತು ಸ್ಪಷ್ಟನೆ ನೀಡುವುದು ನನ್ನ ಕೆಲಸವಲ್ಲ. ನನ್ನ ಪಾಲಿಗೆ ಇಂಗ್ಲೆಂಡ್ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ಅತ್ಯಂತ ಮುಖ್ಯವೆನಿಸಿದೆ. ಈ ಪಂದ್ಯಗಳ ಮೇಲೆ ಗಮನ ನೆಟ್ಟಿದ್ದೇನೆ. ಅಲ್ಲಿಂದ ಮುಂದೆ ಏನಾಗುತ್ತದೆ ನೋಡೋಣ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (Rohit Sharma) ನಿವೃತ್ತಿ ವದಂತಿ ಕುರಿತು ಸ್ಪಷ್ಟನೆ ನೀಡಿದ್ದಾರೆ.
ತಿಂಗಳ ಹಿಂದೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ನಾಯಕನಾಗಿ ವೈಫಲ್ಯ ಅನುಭವಿಸಿದ್ದ ರೋಹಿತ್ ಶರ್ಮ (Rohit Sharma) ಬ್ಯಾಟ್ನಿಂದಲೂ ಹೆಚ್ಚು ಸದ್ದು ಮಾಡುವಲ್ಲಿ ವಿಫಲರಾಗಿದ್ದರು. ರೋಹಿತ್ ಫಾರ್ಮ್ ಗಮನದಲ್ಲಿಟ್ಟುಕೊಂಡು ಅನೇಕರು ನಿವೃತ್ತಿ ಪಡೆಯುವಂತೆ ಆಗ್ರಹಿಸಿದ್ದರು. ಇದಲ್ಲದೆ ಆಯ್ಕೆ ಸಮಿತಿ ಸಭೆಯಲ್ಲೂ ಈ ಬಗ್ಗೆ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ. ಚಾಂಪಿಯನ್ಸ್ ಟ್ರೋಫಿ ಬಳಿಕ ರೋಹಿತ್ ಶರ್ಮ ನಿವೃತ್ತಿ ಭವಿಷ್ಯ ನಿರ್ಧಾರವಾಗಲಿದೆ.
ಹೈ Heels ಕೊಡಿಸಲಿಲ್ಲವೆಂದು ಪತಿಯ ವಿರುದ್ಧ ಮುನಿಸು; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ ಮಾಡಿದ್ದೇನು ನೀವೇ ನೋಡಿ