Delhi Exit Poll Results| ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಗೆ ಅಧಿಕಾರ ಫಿಕ್ಸ್ ಎನ್ನುತ್ತಿವೆ ವರದಿಗಳು; ಎಎಪಿಗೆ 2ನೇ ಸ್ಥಾನ, ಕಾಂಗ್ರೆಸ್​ಗೆ ಮತ್ತೊಮ್ಮೆ ಮುಖಭಂಗ

BJP AAP Cong

ನವದೆಹಲಿ: 70 ಸದಸ್ಯಬಲದ ದೆಹಲಿ ವಿಧಾನಸಭೆಗೆ ಇಂದು (ಫೆಬ್ರವರಿ 05) ಮತದಾನ ನಡೆದಿದ್ದು, ರಾಷ್ಟ್ರರಾಜಧಾನಿಯಲ್ಲಿ ಸಂಜೆ 6 ಗಂಟೆ ವೇಳೆಗೆ ಶೇ. 58ರಷ್ಟು ಮತದಾನವಾಗಿದೆ. ಇನ್ನು ಮತದಾನ ಮುಗಿಯುತ್ತಿದ್ದಂತೆ ಎಕ್ಸಿಟ್ ಪೋಲ್​ ಫಲಿತಾಂಶಗಳು (Exit Poll Results) ಹೊರಬಿದ್ದಿದ್ದು, ಬಹುತೇಕ ವರದಿಗಳು ಬಿಜೆಪಿ ಸರ್ಕಾರ ರಚಿಸುವುದಾಗಿ ಭವಿಷ್ಯ ನುಡಿದಿವೆ.

ತೀವ್ರ ಕುತೂಹಲ ಕೆರಳಿಸಿರುವ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತದಾನ ಮುಗಿದಿದ್ದು, ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದಿದೆ. 13,766 ಮತಗಟ್ಟೆಗಳಲ್ಲಿ 699 ಅಭ್ಯರ್ಥಿಗಳ ಭವಿಷ್ಯವನ್ನು ಇವಿಎಂ ಯಂತ್ರಗಳಲ್ಲಿ ಸೀಲ್ ಮಾಡಲಾಗಿದೆ.

Delhi Exit Poll

ಆಡಳಿತರೂಢ ಎಎಪಿ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಗುರಿಯನ್ನು ಹೊಂದಿದ್ದು, ಬಿಜೆಪಿ 25 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯ ಗದ್ದುಗೆಯನ್ನು ಏರಲು ಪ್ರಯತ್ನಿಸುತ್ತಿದೆ. 15 ವರ್ಷಗಳ ಬಳಿಕ ಕಳೆದುಹೋದ ತನ್ನ ನೆಲೆಯನ್ನು ಮತ್ತೊಮ್ಮೆ ಕಂಡುಕೊಳ್ಳಲು ಕಾಂಗ್ರೆಸ್​ ಹೋರಾಡುತ್ತಿದ್ದು, ಅಂತಿಮವಾಗಿ ಫೆಬ್ರವರಿ 08ರಂದು ಫಲಿತಾಂಶ ಹೊರಬಿದ್ದ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದೆ. 

ಇನ್ನು ಎಕ್ಸಿಟ್​ ಪೋಲ್​ನ ಫಲಿತಾಂಶದ (Exit Poll Results) ವಿಚಾರಕ್ಕೆ ಬರುವುದಾದರೆ ದೆಹಲಿಯಲ್ಲಿ ಎಎಪಿ ಹಾಗೂ ಬಿಜೆಪಿಯ ನಡುವೆ ಸಮಬಲದ ಹೋರಾಟ ಏರ್ಪಟ್ಟಿದ್ದು, ಬಹುತೇಕ ಸರ್ವೇ ರಿಪೋರ್ಟ್​ಗಳು ಬಿಜೆಪಿ ಅಧಿಕಾರಕ್ಕೇರುವುದು ನಿಶ್ಚಿತ ಎಂದು ಭವಿಷ್ಯ ನುಡಿದಿವೆ. ಆಡಳಿತರೂಢ ಎಎಪಿಯು 25-30 ಸ್ಥಾನ ಗೆಲ್ಲಲಿದ್ದು, ಕಾಂಗ್ರೆಸ್​ 2ರಿಂದ 3 ಸ್ಥಾನ ಗೆಲ್ಲುತ್ತದೆ ಎಂದು ಪ್ರಕಟವಾಗಿರುಚ ಎಕ್ಸಿಟ್​ಪೋಲ್​ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂತಿಮವಾಗಿ ಫೆಬ್ರವರಿ 08ರಂದು ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಚುಮು ಚುಮು ಚಳಿಗೆ ಮನೆಯಲ್ಲೇ ಮಾಡಿ Ragi ಪಕೋಡ; ನಾಲಿಗೆಗೂ ರುಚಿಕರ ಆರೋಗ್ಯಕ್ಕೂ ಒಳ್ಳೆಯದು

ಬೈಕ್​ಗೆ KKRTC ಬಸ್​ ಡಿಕ್ಕಿ; ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಾವು

Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…