ಆಗ್ರಾ: ಗಂಡ-ಹೆಂಡತಿ ಜಗಳು ಉಂಡು ಮಲಗುವ ತನಕ ಎಂದು ನಮ್ಮ ಹಿರಿಯರು ಯಾವುದೋ ಕಾಲದಲ್ಲಿ ಹೇಳಿದ್ದಾರೆ. ಆದರೆ, ಇಂದಿನ ಮಾಡರ್ನ್ ಯುಗದಲ್ಲಿ ಗಂಡ ಹಂಡತಿ ಜಗಳ ಸ್ಟೇಷನ್ ಅಥವಾ ಕೋರ್ಟ್ನಲ್ಲಿ ಸುಖಾಂತ್ಯ ಕಾಣುವವರೆಗೆ ಎಂಬಂತಾಗಿದೆ. ಇತ್ತೀಚಿನ ದಿನಗಳಲ್ಲಿ ಕ್ಷುಲಕ ಕಾರಣಗಳಿಗೆ ಪತಿ ಪತ್ನಿಯರು ಜಗಳವಾಡುತ್ತಿದ್ದು, ಮದುವೆಯನ್ನು ಮುರಿದುಕೊಳ್ಳುವ ಹಂತಕ್ಕೆ ಹೋಗುತ್ತಿದ್ದಾರೆ. ಇದೀಗ ಮಹಿಳೆಯೊಬ್ಬರು ಹೈಹೀಲ್ಸ್ (High Heels) ಚಪ್ಪಲಿ ತಂದುಕೊಡಲಿಲ್ಲವೆಂದು ಪತಿಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ಬೆಳಕಿಗೆ ಬಂದಿದೆ.
ಘಟನೆಯು ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ತನ್ನ ಪತಿ ಹೈಹೀಲ್ಸ್ (High Heels) ಚಪ್ಪಲಿ ಕೊಡಿಸಲಿಲ್ಲವೆಂದು ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ವಿಚಾರ ಡಿವೋರ್ಸ್ ಹಂತದವರೆಗು ತಲುಪಿದೆ. ಸದ್ಯ ಪೊಲೀಸರು ದಂಪತಿಗಳಿಗೆ ಕೌನ್ಸೆಲಿಂಗ್ ಮಾಡಿದ್ದು, ಈ ರೀತಿ ಮಾಡದಂತೆ ಬುದ್ದಿವಾದ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
A strange case has come to light from Agra, where a wife reached the police station and filed complaints against him after he refused to buy her heel sandals. The wife accused her husband of not buying her heels from the last 8 months & not fulfilling her wishes.
According to… pic.twitter.com/5PqpOO80Nl
— ForMenIndia (@ForMenIndia_) February 4, 2025
ಘಟನೆ ಕುರಿತು ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು, 2024ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಮಹಿಳೆಯು ಚಿಕ್ಕ ವಯಸ್ಸಿನಿಂದಲೂ ಹೈ ಹೀಲ್ಸ್ (High Heels) ಚಪ್ಪಲಿ ಧರಿಸುವುದೆಂದರೆ ಬಲು ಇಷ್ಟ. ಈ ಕಾರಣಕ್ಕೆ ಆತನಿಗೆ ಹೈ ಹೀಲ್ಸ್ ಚಪ್ಪಲಿ ಕೊಡಿಸುವಂತೆ ಬೇಡಿಕೆಯನ್ನು ಇರಿಸಿದ್ದಾಳೆ. ಇದಕ್ಕೆ ಪತಿ ಒಪ್ಪದಿದ್ದಾಗ ದಂಪತಿಯ ನಡುವೆ ಜಗಳ ಏರ್ಪಟ್ಟಿದ್ದು, ಆಕೆ ತನ್ನ ತವರು ಮನೆಗೆ ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಡಿವೋರ್ಸ್ ನೀಡುವಂತೆ ಸೂಚಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಬಳಿಕ ಪತಿಯ ವಿಚಾರಣೆ ನಡೆಸಿದ ಅಧಿಕಾರಿಗಳಿಗೆ ಯಾವ ಕಾರಣಕ್ಕೆ ಮಹಿಳೆ ವಿಚ್ಛೇದನ ಕೇಳಿದ್ದಾಳೆ ಎಂಬುದರ ಬಗ್ಗೆ ತಿಳಿದು ಬಂದಿದೆ. ಬಳಿಕ ಅಧಿಕಾರಿಗಳು ದಂಪತಿಗಳನ್ನು ಕೌನ್ಸೆಲಿಂಗ್ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು, ದಂಪತಿಗಳಿಗೆ ಬುದ್ದಿವಾದ ಹೇಳಿ ಕಳುಹಿಸಲಾಗಿದೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಮಹಿಳೆಯ ನಡೆಯನ್ನು ಖಂಡಿಸಿ ಕಮೆಂಟ್ ಹಾಕುತ್ತಿದ್ದಾರೆ.
ಚುಮು ಚುಮು ಚಳಿಗೆ ಮನೆಯಲ್ಲೇ ಮಾಡಿ Ragi ಪಕೋಡ; ನಾಲಿಗೆಗೂ ರುಚಿಕರ ಆರೋಗ್ಯಕ್ಕೂ ಒಳ್ಳೆಯದು